ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಲ, ವೃಕ್ಷ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಪಂಚ ತತ್ವಗಳಡಿ ಸರ್ವಾಂಗೀಣ ಅಭಿವೃದ್ಧಿಗೆ ಸಚಿವ ಎಂ.ಬಿ.ಪಾಟೀಲ ಶ್ರಮಿಸುತ್ತಿದ್ದಾರೆ ಎಂದು ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ ಹೇಳಿದ್ದಾರೆ.
ಸೋಮವಾರ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಸಚಿವ ಎಂ.ಬಿ.ಪಾಟೀಲರ ಜನ್ಮದಿನದ ಅಂಗವಾಗಿ ಸಸಿ ನೆಡುವ ಮತ್ತು ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಲಕ್ರಾಂತಿಯ ಮೂಲಕ ಅರಣ್ಯೀಕರಣಕ್ಕೂ ಮುನ್ನುಡಿ ಬರೆದಿರುವ ಸಚಿವರು, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕೈಗಾರಿಕೆ ಕ್ರಾಂತಿಯ ಕಡೆಗೆ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಬಿ. ವೈ. ಖಾಸನಿಸ್, ಎಸ್.ಎಸ್.ಹೈಸ್ಕೂಲ್ ಬ ಶಾಲೆಯ ಪ್ರಾಚಾರ್ಯ ವೀರಣ್ಣ ಪಾಟೀಲ, ಸಿಪಿಇಡಿ ಕಾಲೇಜಿನ ಪ್ರಾಚಾರ್ಯ ಮಲ್ಲನಗೌಡ ಕುಪ್ಪಿ, ಬಾಲಕಿಯರ ಪ್ರೌಢ ಶಾಲೆ ಮುಖ್ಯಾಧ್ಯಾಪಕಿ ವಿ.ಪಿ.ನಿಡೋಣಿ, ಸಮನ್ವಯ ಶಾಲೆ ಮುಖ್ಯೋಪಾಧ್ಯಾಯ ಸಿದ್ದು ಬಿರಾದಾರ, ಸಿ. ಟಿ. ಕಂದಗಲ್, ಡಾ. ಆರ್. ಜಿ. ಕಮತರ, ಮಲ್ಲಿಕಾರ್ಜುನ ಕೆಂಗನಾಳ, ಡಾ. ಭಕ್ತಿ ಮಹೇಂದ್ರಕರ, ಜ್ಯೋತಿ ಬಿರಾದಾರ, ವಿದ್ಯಾ ಬಿರಾದಾರ, ವಾಣಿಶ್ರೀ ಮಠ, ಕುಲಕರ್ಣಿ, ಅಮರೇಶ ಸಾಲಕ್ಕಿ, ರಮೇಶ ಮಾಲಕ, ಅರಣಾ ಮಹಾಲಿಂಗಪುರ, ಡಿ. ಆರ್ ಖಾನಾಪುರ, ಎಸ್. ಎಂ ನಾಯ್ಕೊಡಿ, ಎಸ್. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

