ಉದಯರಶ್ಮಿ ದಿನಪತ್ರಿಕೆ
ಇಂಡಿ: ಉತ್ತರ ವಲಯ ಬೆಳಗಾವಿಯಲ್ಲಿ ಜರುಗಿದ ವಲಯ ಮಟ್ಟದ ಪೋಲಿಸ ಕರ್ತವ್ಯ ಕೂಟದಲ್ಲಿ ಇಂಡಿ ಸಿ.ಪಿ.ಐ ಗ್ರಾಮಾಂತರ ಮಲ್ಲಿಕಾರ್ಜುನ ಡಪ್ಪಿನ ರವರಿಗೆ ಆರು ಚಿನ್ನದ ಪದಕಗಳು ಲಭಿಸಿವೆ.
ಸ್ಪರ್ಧೇಯಲ್ಲಿ ವಿಜಯಪುರ, ಬಾಗಲಕೋಟ, ಧಾರವಾರ ಗದಗ ಮತ್ತು ಬೆಳಗಾವಿ ಜಿಲ್ಲೆ ಪೋಲಿಸ ಅಧಿಕಾರಿಗಳು ಭಾಗವಹಿಸಿದ್ದರು.
ಕಳೆದ ವರ್ಷವೂ ಕೂಡ ಡಪ್ಪಿನ ರವರು ಆರು ಚಿನ್ನದ ಪಡೆದಿದ್ದರು. ಇದು ಎರಡನೆಯ ಬಾರಿ ಅವರಿಗೆ ಆರು ಚಿನ್ನದ ಪದಕ ಪಡೆದಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಪೋಲಿಸ್ ಡ್ಯೂಟಿ ಮೀಟ್ ಪೋಲಿಸರ ಶ್ರೇಷ್ಠತೆಗೆ ವೇಗವರ್ಧಕ, ಮತ್ತು ಪ್ರತಿಷ್ಠಿತ ಸ್ಪರ್ಧೇಯಾಗಿದೆ. ಈ ಸ್ಪರ್ಧೆ ಪೋಲಿಸ ಸಿಬ್ಬಂದಿಯನ್ನು ಒಟ್ಟುಗೂಡಿಸುತ್ತದೆ. ಮತ್ತು ಈ ವಾರ್ಷೀಕ ಕಾರ್ಯಕ್ರಮವು ಅಧಿಕಾರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಜ್ಞಾನ ವಿನಿಮಯ ಮತ್ತು ಸೌಹಾರ್ಧತೆ ಯನ್ನು ಬೆಳೆಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸ್ಪರ್ಧೇ ಕಾರ್ಯಾಚರಣೆ ಹೆಚ್ಚಿಸುವದಲ್ಲದೆ ಭಾರತೀಯ ಪೋಲಿಸ ಪಡೆಯೊಳಗೆಗ ಬಾಂದವ್ಯ ಹೆಚ್ಚಿಸುತ್ತದೆ.
ದೈಹಿಕ ಸಾಮರ್ಥ್ಯ, ಮಾಕ್ಸಮನ್ ಶೀಫ್,ಅಡೆತಡೆ ಕೋರ್ಸು, ಜ್ಞಾನ ವಿನಿಮಯ,ವೃತ್ತಿಪರ ಅಭಿವೃದ್ದಿ, ಸ್ಥೈರ್ಯ ವರ್ಧಕ, ಸಾರ್ವಜನಿಕ ಇಮೇಜ ವರ್ಧನೆ, ಮತ್ತು ಯುದ್ದ ತಂತ್ರದ ಕುಶಲತೆ ಸಿಬ್ಬಂದಿ ಅಭಿವೃದ್ದಿ ಸ್ಪರ್ಧೆಗಳಲ್ಲಿ ಡಪ್ಪಿನ ರವರು ಚಿನ್ನದ ಪದಕ ಪಡೆದಿದ್ದಾರೆ.
ಕಂಪ್ಯೂಟರ್ ಅವೇರನೆಷ್, ಪೋಲಿಸ ಪೋಟೋಗ್ರಾಫಿ, ಪೋಲಿಸ ವಿಡಿಯೋಗ್ರಾಫಿ, ಆಂಟಿ ಸಬ್‌ಟೇಜ್ ಚೆಕ್ಸ,ಸ್ಪೇಷಿಯಲ್ ಕಾನಿನ್ ಯುನಿಟ್ ಕಂಟೆಸ್ಟ, ಆಬ್‌ಜರವೇಷನ್ ಟೆಸ್ಟ ಪರೀಕ್ಷೆಗಳಲ್ಲಿ ಡಪ್ಪಿನ ರವರು ಅತೀ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

