Author: editor.udayarashmi@gmail.com

ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ | ಚುನಾವಣಾಧಿಕಾರಿ & ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂ.೨೯ ರಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಭರದಿಂದ ನಡೆದಿದ್ದು, ಜು.೧೨ರವರೆಗೆ ಜಿಲ್ಲೆಯ ಪ್ರಗತಿ ವರದಿಯ ಪ್ರಕಾರ ಇಲ್ಲಿಯವರೆಗೆ ೧೮,೮೮,೬೫೭ ಗಣತಿ ನಮೂನೆ ಮತದಾರರಿಗೆ ವಿತರಿಸಲಾಗಿದೆ. ಅವುಗಳಲ್ಲಿ ೬,೪೪,೮೧೦ ಗಣಕೀಕರಣಗೊಂಡ ಗಣತಿ ನಮೂನೆಗಳಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ತಿಳಿಸಿದ್ದಾರೆ.ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು ೧೯,೮೨,೧೧೪ ಮತದಾರರು ದಾಖಲಾಗಿದ್ದಾರೆ. ಇವರಿಗೆ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.ಗಣತಿ ನಮೂನೆಗಳ ವಿತರಣೆ ಮತ್ತು ಡಿಜಿಟಲೀಕರಣ ಕಾರ್ಯವು ಜೂನ್.೩೦ ರಿಂದ ಜುಲೈ.೨೯ ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಮತದಾರರು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಮಾಜದಲ್ಲಿ ಪ್ರತಿನಿತ್ಯವೂ ಪ್ರತಿಕ್ಷಣದಲ್ಲೂ ನಾನಾ ಕಾರಣಗಳಿಂದ ರಕ್ತ ಹೀನತೆ ಉಂಟಾದಾಗ ವ್ಯಕ್ತಿಗಳಿಗೆ ರಕ್ತ ನೀಡಿ ಬದುಕಿಸಲು ಅವಶ್ಯಕವಾಗಿ ರಕ್ತ ಬೇಕಾಗುತ್ತದೆ ಎಂದು ಸಿಂದಗಿ ವೇದಿಕೆ ಘಟಕದ ಅಧ್ಯಕ್ಷ ದಾವುದಸಾಬ ನದ್ವಿ ಕರೆ ನೀಡಿದರು.ಸಿಂದಗಿ ನಗರದ ಅಖಿಲ ಭಾರತೀಯ ಮಾನವೀಯತೆ ಸಂದೇಶ ವೇದಿಕೆ ಹಾಗೂ ನ್ಯೂ ಇರಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾ ಶ್ರೇಷ್ಠದಾನವಾಗಿದೆ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದರು.ಈ ವೇಳೆ ಸಿಂದಗಿಯ ತಾಲೂಕಾಸ್ಪತ್ರೆ ರಕ್ತ ನಿಧಿ ವಿಭಾಗದ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ರಕ್ತವು ಜೀವ ದ್ರವ್ಯವಾಗಿ ಪ್ರಾಣ ಉಳಿಸುತ್ತದೆ. ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ. ದೇಹದಲ್ಲಿ ಅತ್ಯಂತ ಕಡಿಮೆ…

Read More

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷ ಬಸವರಾಜ ರಂಜುಣಗಿ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಳೆಯ ಕೊರತೆಯಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರ, ರೈತರಿಗೆ ಉಚಿತ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಬೆಳೆ ವಿಮೆ ಮೊತ್ತವನ್ನು ಶೀಘ್ರದಲ್ಲಿ ವಿತರಣೆ ಹಾಗೂ ಅಗತ್ಯ ಕೃಷಿ ಸಹಾಯಧನ ನೀಡುವಂತೆ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷ ಬಸವರಾಜ ರಂಜುಣಗಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಉಂಟಾಗಿರುವ ತೀವ್ರ ಸಂಕಷ್ಟದಿಂದ ರೈತರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೆಳೆ ನಷ್ಟ, ನೀರಿನ ಅಭಾವ ಮತ್ತು ಉತ್ಪಾದನಾ ವೆಚ್ಚದ ಏರಿಕೆಯಿಂದ ರೈತರು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಸಿ.ಬಿ.ಎಸ್.ಇ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ನಡೆಯಿತು.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯಪುರ ನಗರ ಡಿವೈಎಸ್ಪಿ ನಾಗರಾಜ‌ ಜಿ. ಮಾತನಾಡಿ, ಶಾಲಾ ಸಂಸತ್ತು ಒಂದು ಹೊಣೆಗಾರಿಕೆಯ ಪಾಠವನ್ನು ಕಲಿಸುವ ಮಹತ್ವದ ಹೆಜ್ಜೆತಾಗಿದೆ. ಶಾಲೆಯನ್ನುಮುನ್ನಡೆಸಿಕೊಂಡು ಹೋಗುವ ಶಾಲಾ ಮುಖ್ಯ ಬಾಲಕ ಮತ್ತು ಬಾಲಕಿಯರು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸುವ ವ್ಯಕ್ತಿಗಳಾಗಬಹುದು ಎಂದು ಹೇಳಿದರು.ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪಾಲಕರಿಗೂ ಗೌರವ ಕೊಡಬೇಕು. ಪ್ರತಿಜ್ಞಾ ವಿಧಿ‌ ಸ್ವೀಕರಿಸಿರುವ ಪದಾಧಿಕಾರಿಗಳು‌ ಉತ್ತಮವಾಗಿ‌ ಕಾರ್ಯ ನಿರ್ವಹಿಸಬೇಕು ಅವರು ಹೇಳಿದರು.ಶಾಲಾ ಮುಖ್ಯ ಬಾಲಕಿಯಾಗಿ ಆಯ್ಕೆಯಾದ ಕಿಂಜಲ್ ಹಜೇರಿ, ಮುಖ್ಯಬಾಲಕನಾಗಿ ಆಯ್ಕೆಯಾದ ಅರ್ಜುನ ಪಾಟೀಲ, ಕ್ರೀಡಾ ಮುಖ್ಯ ವಿಭಾಗದ ಮುಖ್ಯ ಬಾಲಕ‌ ಅಪ್ಪು ಬಬಲೇಶ್ವರ,ಮುಖ್ಯಬಾಲಕಿ ಛವಿ ರುಣವಾಲ, ಸಾಂಸ್ಕೃತಿಕ ವಿಭಾಗದ ಮುಖ್ಯ ಬಾಲಕ ಕುಮಾರ ತೇಜಸ ನಾಯಕ, ಬಾಲಕಿ ಸಾಮಿಯಾ ಜೈನ್, ಶಾಲಾ ಶಿಸ್ತು ಉಸ್ತುವಾರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ವಿಜಯಪುರ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಕಬಾಡೆ ಅವರ ಅಧ್ಯಕ್ಷತೆಯಲ್ಲಿ ಸಂಘಟನೆಯ ನಿಯೋಗವು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.ಮನವಿಯಲ್ಲಿ, ನಾಗರಿಕ ವಿಧಾನಸಭಾ ಕ್ಷೇತ್ರದ ಅಲಿಯಾಬಾದ್ ಗ್ರಾಮ ಪಂಚಾಯತ್ ವಾರ್ಡ್ ಸಂಖ್ಯೆ-2ರ ಮೀಸಲಾತಿಯನ್ನು ನಿಯಮಾನುಸಾರ ಮರು ಪರಿಶೀಲಿಸಿ, ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಲಾಯಿತು.ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ-2 ಪರಿಶಿಷ್ಟ ಜಾತಿ (ಎಸ್‌ಸಿ) ಪುರುಷರಿಗೆ ಮೀಸಲಾಗಿತ್ತು. ಪ್ರಸ್ತುತ ಮೀಸಲಾತಿ ಸರಣಿಯ ನಿಯಮಗಳ ಪ್ರಕಾರ ಈ ಬಾರಿ ಸದರಿ ವಾರ್ಡ್ ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಾಗಬೇಕಾಗಿತ್ತು. ಆದರೆ ಪ್ರಕಟಿಸಿರುವ ಮೀಸಲಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದ್ದು, ಇದರಿಂದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ದೊರೆಯಬೇಕಾದ ಸಂವಿಧಾನಬದ್ಧ ಅವಕಾಶಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ದಾಖಲೆಗಳು ಹಾಗೂ ಮೀಸಲಾತಿ ಸರಣಿಯನ್ನು ಸಮಗ್ರವಾಗಿ ಪರಿಶೀಲಿಸಿ, ಯಾವುದೇ ಲೋಪದೋಷಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ,…

Read More

ವಿಜಯಪುರದಲ್ಲಿ ’ಧಗೆ’ ಚಿತ್ರ ತಂಡದ ನಾಯಕ ಸಂಗಮೇಶ‌ ಉಪಾಸೆ, ನಿರ್ದೇಶಕ ಕೆರ್ನಳ್ಳಿ ಈಶ್ವರ, ಪದ್ಮಶ್ರೀ ಮಂಜಮ್ಮ ಜೋಗತಿ & ಚಿತ್ರತಂಡದಿಂದ ಸುದ್ದಿಗೋಷ್ಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ಹಾಗೂ ವಿಜಯಪುರ ನೆಲದ ಕಲಾವಿದರ ಬಾಹುಳ್ಯವುಳ್ಳ ‘ಧಗೆ’ ಚಲನಚಿತ್ರ ಡಿಸೆಂಬರ್ ಮಾಸಾಂತ್ಯದೊಳಗೆ ೧೫೦ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ‌ ನಿರ್ದೇಶಕ ಕೆರ್ನಳ್ಳಿ ಈಶ್ವರ ಹೇಳಿದರು.ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಧಗೆ ಎನ್ನುವುದು ವಿಜಯಪುರ ಭಾಗದಲ್ಲಿ ಜನಜನಿತ, ಇಲ್ಲಿನ ಬಿರುಬಿಸಿಲಿನ ಪ್ರಭಾವದಿಂದಾಗಿ ಧಗೆ ಸಾಮಾನ್ಯ, ಈ ವಾತಾವರಣ ಮಾನವ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ‌ ಜೋಗತಿ ಈ ಚಿತ್ರದಲ್ಲಿ ಜೋಗತಿಯ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದು, ಮಗುವೊಂದನ್ನು ಅವರು ಸಾಕುವ ನಿಟ್ಟಿನಲ್ಲಿ ಅವರು ‌ವಹಿಸುವ ಶ್ರಮ, ‌ಮಮತೆ, ಸಮಾಜದ ದೃಷ್ಟಿಕೋನ ಹೀಗೆ ಅನೇಕ ಆಯಾಮಗಳಲ್ಲಿ ಕಥೆ ಹೆಣೆಯಲಾಗಿದೆ…

Read More

ವಿಜಯಪುರ ದಲ್ಲಿ ನಡೆದ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶದ ಸಮಾರೋಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಂದು ಸುಂದರ ಸಮಾಜ ನಿರ್ಮಾಣವಾಗಲು ಒಕ್ಕಟ್ಟು, ಏಕತೆ ಅವಶ್ಯಕ, ಅಂತಹ ಸಮಾಜವನ್ನು ಇಂದು ಕಾಣುತ್ತಿದ್ದೇನೆ, ತಾವು ಕೈಕೊಂಡ ಬ್ರಾಹ್ಮಣ ವಧು-ವರಾನ್ವೇಷಣ ಕಾರ್ಯಕ್ರಮ ಯಶಸ್ವಿಯಾಗಿ ಹಿಂದು ಸಂಸ್ಕೃತಿ ಉಳಿಯಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಮಂಗಳಸೂತ್ರ ಫೌಂಡೇಶನ್ ನಗರದ ಶ್ರೀ ಚಿದಂಬರ ಸೇವಾ ಸಮಿತಿ ಸಹಯೋಗದಲ್ಲಿ ಶ್ರೀ ಚಿದಂಬರೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ ೬೮ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶದ ಸಮಾರೋಪ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಹಿಂದು ಸಮಾಜದ ಸ್ಥಾಪನೆಗೆ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ, ಅವರಿಂದಲೇ ಹಿಂದುತ್ವ ಉಳಿದು ಸಮಾಜಗಳ ಪರಿವರ್ತನೆಗಳಲ್ಲಿ ಅವರ ಪಾತ್ರ ಅಮೋಘ ಎಂದು ಹೇಳಿದರು.ಪಾಲಕರಾದವರು ಮಕ್ಕಳನ್ನು ಮದುವೆಗೆ ಸಿದ್ದತೆ ಮಾಡಿರಿ, ಹೆಣ್ಣು ಮಕ್ಕಳು ಜಾಗೃತರಾಗಬೇಕು ಎಂದು ಹೇಳಿದ ಅವರು ಯಾವುದೇ ಅಮೀಶಕ್ಕೆ ಬಲಿ…

Read More

ಸಿಂದಗಿಯಲ್ಲಿ ಕನ್ನಡ ಸಾಹಿತ್ಯ ಗೆಳೆಯರ ಬಳಗದಿಂದ ಎಸ್.ಜಾನಕಿ ಅವರ ಶ್ರದ್ಧಾಂಜಲಿ ಸಭೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತೀಯ ಚಿತ್ರರಂಗದ ಗಾನ ಕೋಗಿಲೆ, ಕೋಟ್ಯಂತರ ಸಂಗೀತಾಭಿಮಾನಿಗಳ ಮನಸೂರೆಗೊಂಡ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.ಸಿಂದಗಿ ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಕುಮಾರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ವಾಗ್ದೇವಿ ಪುತ್ರಿ ಎಸ್ ಜಾನಕಿ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಕಗಳ ಕಾಲ ತಮ್ಮ ಅಪರೂಪದ ಕಂಠಸಿರಿಯ ಮೂಲಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿಯೂ ಹಾಗೂ ಹಿಂದಿಯಲ್ಲಿಯೂ ಸಾವಿರಾರು ಅಮರ ಗೀತೆಗಳನ್ನು ಹಾಡಿದ ಅವರು, ಭಾರತೀಯ ಸಂಗೀತ ಕ್ಷೇತ್ರದ ಧ್ರುವತಾರೆಯಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಂದಗಿ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಸಿದ್ದಲಿಂಗ ಚೌದರಿ ಅವರು, ಸೂರ್ಯ-ಚಂದ್ರ ಇರುವವರೆಗೂ ಅವರ ಸಾಧನೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ನಡೆದ ಜಗಳದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಕ್ಕನೇ ತನ್ನ ಸ್ವಂತ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಹಲಸಂಗಿ ಗ್ರಾಮದ ಬಾಬುಸಾ(ಬಾಬುರಾವ್) ಮಹಾದೇವ ಜಮಾದಾರ (35) ಕೊಲೆಯಾದ ದುರ್ದೈವಿ. ಅವರೊಂದಿಗೆ ಬಂದಿದ್ದ ಸೋಲಾಪುರ ಮೂಲದ ವ್ಯಕ್ತಿ ಅಪ್ಪಾಸಾಹೇಬ ಮಕಾಶಿ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಘಟನೆಯ ಹಿನ್ನೆಲೆ:ಮೃತ ಬಾಬುಸಾ(ಬಾಬುರಾವ್) ಅವರಿಗೆ ಐದು ವರ್ಷಗಳ ಹಿಂದೆ ಅವರ ಸ್ವಂತ ಅಕ್ಕ ಮೀನಾಕ್ಷಿ ಭತಗುಣಕಿ(ತಳವಾರ) ತನ್ನ ಮಗಳು ಸತ್ಯವ್ವಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಮದುವೆಯಾದಾಗಿನಿಂದಲೂ ಗಂಡ ಬಾಬುಸಾ(ಬಾಬುರಾವ್) ಹಾಗೂ ಹೆಂಡತಿ ಸತ್ಯವ್ವ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.ಶನಿವಾರ ಸಂಜೆ ಬಾಬುಸಾ(ಬಾಬುರಾವ್) ಅವರು ಹಲಸಂಗಿ ಕ್ರಾಸ್ ಬಳಿ ಇರುವ ಅಕ್ಕ ಮೀನಾಕ್ಷಿ ಅವರ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಬಲ ತುಂಬಿದ್ದು, ಬಡ ಕುಟುಂಬಗಳ ಬದುಕಿಗೆ ಹೊಸ ಆಶಾಕಿರಣವಾಗಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ್ ಗಣಾಚಾರಿ ತಿಳಿಸಿದ್ದಾರೆ.ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷೆ ಮಹಾದೇವಿ ಗೋಕಾಕ ಅವರು ಮಾತನಾಡಿ, ಸರ್ಕಾರ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಗ್ಯಾರಂಟಿ ಯೋಜನೆಗಳು ಅತ್ಯಂತ ಪರಿಣಾಮಕಾರಿ ಆಗಿವೆ ಎಂದು ಹೇಳಿದರು.ಸರ್ಕಾರ ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು ಬಡವರು ಹಾಗೂ ಮಹಿಳೆಯರ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ, ಅನೇಕ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.ಇನ್ನೂ, ಯಾವುದೇ ಅರ್ಹರು ಯೋಜನೆಗಳಿಂದ ವಂಚಿತರಾಗಿದ್ದರೆ, ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಮಸ್ಯೆ…

Read More