ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಹುಳುಗಬಾಳ ಗ್ರಾಮದ ಉಜ್ವಲಾ ಸಾಂಗ್ಲಿ ಅವರು ಕೆನರಾ ಬ್ಯಾಂಕಿನಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮಾಡಿಸಿದರು ವರ್ಷಕ್ಕೆ 436 ರೂಪಾಯಿ ಹಣವನ್ನು ಈ ಯೋಜನೆಯಲ್ಲಿ ತೊಡಗಿಸಿದ್ದು ಇವರು ಅನಾರೋಗ್ಯದಿಂದ ಮರಣ ಹೊಂದಿದ್ದು ಇವರ ನಾಮಿನಿಯಾದ ಕುಮಾರ ಮಹಾವೀರ ಸಾಂಗ್ಲಿ ಇವರಿಗೆ 2, ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.
ಈ ವೇಳೆ ಕೇನರಾ ಬ್ಯಾಂಕ್ ಚೀಫ್ ಮಾನೇಜರ ಪ್ರೌನ್ ಜಾನ ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಯಾವುದೇ ಕಾರಣದಿಂದಾಗಿ ಮರಣ ಹೊಂದಿದವರಿಗೆ ಜೀವ ವಿಮಾ ರಕ್ಷಣೆಯನ್ನು ನೀಡುವ ವಿಮಾ ಯೋಜನೆಯಾಗಿದ್ದು ಇದು ಒಂದು ವರ್ಷದ ಕವರೇಜ್ ಆಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ ಈ ಯೋಜನೆಯನ್ನು ಬ್ಯಾಂಕು ಅಥವಾ ಅಂಚೆ ಕಚೇರಿಗಳು ನೀಡುತ್ತವೆ ಮತ್ತು ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲ್ಪಡುತ್ತವೆ 18 ರಿಂದ 50 ವರ್ಷ ವಯಸ್ಸಿನ ಭಾಗವಹಿಸುವ ಬ್ಯಾಂಕುಗಳು ಅಥವಾ ಅಂಚೆ ಕಚೇರಿಯ ಖಾತೆದಾರರಾಗಿರುವ ಎಲ್ಲಾ ವ್ಯಕ್ತಿಗಳು ಸೇರಲು ಅರ್ಹರಾಗಿರುತ್ತಾರೆಂದು ಹೇಳಿದರು
ಈ ಸಂದರ್ಭದಲ್ಲಿ ಕೇನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ನಿತೇಶಕುಮಾರ, ಬ್ಯಾಂಕಿನ ಸಿಬ್ಬಂದಿಗಳಾದ ಮುರಗೇಂದ್ರ ಗಸ್ತಿ,ಸೀತಲ ಪಾಟೀಲ, ಎಫೆಲ್ ಸಿ ಬಸಪ್ಪ ಬೊಮನಾಳ,ಕುಮಾರ ಸಾಂಗ್ಲಿ, ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು

