Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೆಲವರಿಗೆ ದೃಷ್ಟಿ ಸಾಮರ್ಥ್ಯದ ಕೊರತೆಯಿರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಪನ್ಯಾಸಕಿ ಶ್ವೇತಾ ಕಾಂತ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಣಿಶಾಸ್ತçದ ವಿಭಾಗದ ಅಡಿಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೊಬೈಲ್ ಬಳಕೆಯಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ “ಕಣ್ಣಿನ ದೃಷ್ಟಿಯಿಂದ ನಾವು ಸಮಸ್ತ ಜಗತ್ತನ್ನೇ ನೋಡಬಹುದು. ಇದು ಮಾನವನ ದೇಹದ ಅತೀ ಮುಖ್ಯವಾದ ಅಂಗ. ಕಣ್ಣಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಬಹಳ ಕಷ್ಟ. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿಗಿದೆ. ಇದು ಸರಿ ಇದ್ದರೆ ಅದಕ್ಕಿಂತ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಧರ್ಮ ರಕ್ಷಿಸಿದವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮ ಜಾಗೃತಿ ಕಾರ್ಯ ಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ನಾದ ಗ್ರಾಮದ ಶಿವಾನಂದ ಶಿವಾಚಾರ್ಯರರು ಹೇಳಿದರು.ತಾಲೂಕಿನ ನಾದ ಕೆಡಿ ಗ್ರಾಮದ ಕನ್ನಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಲಿಂಗೇಶ್ವರ ಟ್ರಸ್ಟನಿಂದ ನಡೆದ ನವರಾತ್ರಿ ನಿಮಿತ್ಯ ನಡೆದ ಧಾರ್ಮಿಕ ಕಾರ್ಯಕ್ರಮ ಮತ್ತು ಸಂತ ಬಾಳು ಮಾಮಾ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಬ್ಬರಲ್ಲಿ ಧರ್ಮದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು,ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ನಾದ ಗ್ರಾಮದ ಸಾವಯುಕ ಕೃಷಿಕ ಮತ್ತು ರಾಜ್ಯ ಪ್ರಶಸ್ತಿ ವಿಜೇತ ರೈತ ಎಸ್.ಟಿ.ಪಾಟೀಲ ಮಾತನಾಡಿ, ಧರ್ಮೋ ರಕ್ಷಿತಿ ರಕ್ಷಿತಾ ದರ್ಮ ಯಾರ ಸ್ವತ್ತಲ್ಲ. ಧರ್ಮ ಎಂದರೆ ಯಾರ ಮನಸ್ಸು ನೋವಿಸದೇ ಇರುವದು ಎಂದರು.ಜಮಖಂಡಿಯ ಮಲ್ಲಿಕಾರ್ಜುನ ಶಾಸ್ತ್ರಿಗಳು ಸಂತ ಬಾಳು ಮಾಮಾರವರ ಜೀವನ ಮತ್ತು ಪವಾಡಗಳ ಕುರಿತು ಮಾತನಾಡಿದರು.ಗೋಳಸಾರದ ಪುಂಡಲಿಂಗ ಶಿವಯೋಗಿಗಳ ಸಾನಿಧ್ಯ, ಬಸವರಾಜ ಪಾಟೀಲ,ಸದ್ಗುರು ಮಲ್ಲಿಕಾರ್ಜುನ ಶಾಸ್ತ್ರಿಗಳು, ಶೇಖರ ಕುಮಾರ ಬೆಂಗೂರು, ಗೊಲ್ಲಾಳಪ್ಪಗೌಡಪಾಟೀಲ, ಬಿ.ಜಿ.ಲಾಳಸಂಗಿ, ಇಶ್ವರಯ್ಯ ಹಿರೇಮಠ ವೇದಿಕೆಯ ಮೇಲಿದ್ದರು.ಗ್ರಾಮದ ರಾಮಚಂದ್ರಗೌಡ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯ ಚಂಡಿ ಹೋಮ ಕಾರ್ಯಕ್ರಮ ನಡೆಯಿತು.ಗಾಣಗಾಪುರದ ಅರ್ಚಕರಾದ ವಿಶ್ವೇಶ್ವರ ಭಟ್ಟ, ಸರ್ವೇಶ ಭಟ್ಟ ಮತ್ತು ಸುಶಾಂತ ಭಟ್ಟ ಹಾಗೂ ಇಂಡಿಯ ಶಿವಾನಂದ ಪೂಜಾರಿ ಶಾಂತು ಪೂಜಾರಿ ಚಂಡಿ ಹೋಮ ನಡೆಸಿ ಕೊಟ್ಟರು.ಚಂಡಿ ಹೋಮ ಕಾರ್ಯಕ್ರಮದಲ್ಲಿ ದಂಪತಿಗಳಾದ ಬಸವರಾಜ ವಳಸಂಗ ಮತ್ತು ಸವಿತಾ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇದೇ ವೇಳೆ ದೇವಸ್ಥಾನಕ್ಕೆ ದೇವಿಗೆ ಕಿರೀಟಕ್ಕೆ ಬಂಗಾರ ನೀಡಿದ ಡಾ|| ಬಸವರಾಜ ಹತ್ತಿ, ವೀರ ಭಾರತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸನ್ಮಾಥ ಹಳ್ಳಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚಂದ್ರು ದೇವರ, ಉದ್ದಿಮೆದಾರ ಬಾಲಾಜಿ ಇಪಕ್ವಾಯಿಲ್, ಮಂಜುನಾಥ ಕಾಮಗೊಂಡ, ಮಹಾದೇವ ಬಾರಿಕಾಯಿ, ಸಿದ್ರಾಮ ನಿಗಡಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಬಾಳು ಕಠಾರೆ, ಬಾಪು ಮಹೀಂದ್ರಕರ, ಸುನೀಲ ಸುಲಾಖೆ, ಬಾಬುರಾವ ಸುಲಾಖೆ, ಕಿರಣ ಬಳಮಕರ, ಗಣೇಶ ಮಹಿಂದ್ರಕರ, ಸುಬಾಶ ಬಳಮಕರ, ಸಂಜಯ ಸುಲಾಖೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾದ್ಯಂತ, ಎಲ್ಲ ತಾಲೂಕಿನ ಸಾರ್ವಜನಿಕರ, ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ, ಸರ್ಕಾರೇತರ ಹಾಗೂ ರೈತರ ಆಸ್ತಿಗಳು/ಜಮೀನುಗಳನ್ನು ಉತಾರೆಯಲ್ಲಿ ವಕ್ಫ ಆಸ್ತಿಯೆಂದು ನಮೂದಿಸಲು ವಕ್ಫ ಸಚಿವರ ಮೌಖಿಕ ಆದೇಶವನ್ನು ಜಾರಿಗೊಳಿಸಿ ನೋಟೀಸ್ ಕಳುಹಿಸಲಾಗಿದೆ. ಹೀಗಾಗಿ ತಕ್ಷಣ ನೋಟಿಸ್ ಪಡೆದ ಪ್ರತಿಯೊಬ್ಬರೂ ತಮ್ಮ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುವುದನ್ನು ತಪ್ಪಿಸಲು, ತಮಗೆ ನೀಡಲಾದ ನೋಟೀಸ್ ಹಾಗು ಕಾಗದ ಪತ್ರಗಳೊಂದಿಗೆ, ಇದೇ ಅಕ್ಟೋಬರ್ ೧೫ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ವಿನಂತಿಸಿದ್ದಾರೆ.ಈ ಬೃಹತ್ ಪ್ರತಿಭಟನೆ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ), ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯಲಿದ್ದು, ಇದು ಪ್ರತಿಯೊಬ್ಬ ಸನಾತನ ಹಿಂದು ನಾಗರಿಕರ, ರೈತರ ಆಸ್ತಿಯ ಕಬಳಿಕೆಯ ಕುತಂತ್ರವಾಗಿದ್ದು, ಇದರ ಮೇಲೆ ನಾವು ಕಾನೂನುಬದ್ಧ ಹೋರಾಟದ ಜೊತೆಗೆ, ದೈಹಿಕ, ಮಾನಸಿಕವಾಗಿ ಉಗ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ಥಳೀಯವಾಗಿ ಇಲ್ಲದಿರುವುದರಿಂದ, ಅ.೧೩ ರಂದು ಸಿಂದಗಿ ರಸ್ತೆಯ ಅವರ ನಿವಾಸದಲ್ಲಿ ಹಮ್ಮಿಕೊಂಡ ಬನ್ನಿ ವಿನಿಮಯ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.ಕಾರಣ ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹಾಗೂ ಶಿವಯೋಗಿ ಸಿದ್ಧರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲೆಂದು ಹಾರೈಸಿದ್ದಾರೆ.
ವಕ್ಫ್ ಹಾಗೂ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಅಕ್ರಮ, ಅನೀತಿ, ಅಕೃತ್ಯಗಳನ್ನು ಖಂಡಿಸಿ ಅ.೧೫ರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಶೇ ೫೦ ಕ್ಕಿಂತ ಹೆಚ್ಚು ಆಸ್ತಿ ಒತ್ತುವರಿ ಆಗಿದೆ ಅಂತ ನೂರಾರು ವರ್ಷಗಳಿಂದ ಇಲ್ಲಿನ ರೈತರು ಉಳುತ್ತಿರುವ ಭೂಮಿಯನ್ನು ನೋಟೀಸ್ ನೀಡಿ ವಕ್ಫ್ ಸುಪರ್ಧಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆಯಂತೆ. ಈಗಾಗಲೇ, ರೈತರಿಗೆ, ಖಾಸಗಿ ವ್ಯಕ್ತಿಗಳಿಗೆ ನೋಟೀಸು ನೀಡಿದ್ದು ಪ್ರಕ್ರಿಯೆ ಶುರುವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿದ್ದು ಇದು ಅಮಾನವೀಯ ಎಂದು ಶಾಸಕ ಬಸನಗೌಡ ಯತ್ನಾಳ ತಿಳಿಸಿದ್ದಾರೆ.ಶನಿವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ೩೦-೪೦ ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೇಶದ ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲದ ವಕ್ಫ್ ಇಲಾಖೆಗೆ ರೈತರು ಭೂಮಿ ನೀಡಬೇಕು ಎಂದು ನೋಟೀಸು ನೀಡಿ ತನ್ನ ಸುಪರ್ಧಿಗೆ ತೆಗೆದುಕೊಳ್ಳುವುದು ಅನ್ನದಾತನಿಗೆ ಮಾಡುವ ಅನ್ಯಾಯ. ಜಾತಿ, ಮತ, ಕುಲ ನೋಡದೆ…
ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ `ಶಿರಸಂಗಿ ಲಿಂಗರಾಜ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.ಲಿಂಗರಾಜ ಸಂಸ್ಥೆ, ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ವಿಜಯಪುರ ಹಾಗೂ ಬಸವನ ಬಾಗೇವಾಡಿ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ `ಶಿರಸಂಗಿ ಲಿಂಗರಾಜ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಶಿರಸಂಗಿ ಲಿಂಗರಾಜ ಮಹಾರಾಜರು ಶಿರಸಂಗಿ ಸಂಸ್ಥಾನದ ಕರ್ಣಧಾರತ್ವ ವಹಿಸಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಎಂಬ ದಿವ್ಯ ಬೆಳಕು ಪ್ರಾಪ್ತವಾಗಬೇಕು ಎಂದು ಕನಸು ಕಂಡಿದ್ದ ಅವರು ಈ ಕನಸು ನನಸಾಗಿಸಲು ಹೇರಳವಾಗಿ ಶಿಕ್ಷಣ ಸಂಸ್ಥೆಗಳಿಗೆ ದಾನ ಧರ್ಮ ಮಾಡಿದರು. ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶಮಯ. ಅವರ ತತ್ವಾದರ್ಶಗಳನ್ನು ಅರಿತು ನಾವು ಮುನ್ನಡೆಯಬೇಕಿದೆ ಎಂದರು. ಆಡಳಿತದಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ, ಈ ನೌಕರರು ದಿನನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವುದುಂಟು, ಅವರ ಒತ್ತಡ ನಿವಾರಣೆಗಾಗಾಗಿ…
ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿಯವರ ಪುಣ್ಯ ತಿಥಿ ನಿಮಿತ್ತ ಈ ವಿಶೇಷ ಲೇಖನ ’ವೀಣಾಂತರಂಗ’ ಲೇಖನ- ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಮಧ್ಯರಾತ್ರಿ ಕಳೆದು ಒಂದು ತಾಸಾಗಿತ್ತು. ಅಂದು ಡಂಬಳದ ಮಠದ ಆವರಣದಲ್ಲಿ ಸಾವಿರಾರು ಜನ ಸೇರಿದ್ದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಆವರಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಅನುವು ಮಾಡಿಕೊಟ್ಟ ಪುರುಷರು ಮಠದ ಹೊರ ಭಾಗದಲ್ಲಿ ಕಾಯುತ್ತಿದ್ದರು. ಮಠದ ಒಳಗೆ ಹೊರಗೆ ಎಲ್ಲೆಡೆ ನೀರವ ಮೌನ ತಾಂಡವವಾಡುತ್ತಿತ್ತು. ಪದೇ ಪದೇ ನಿಟ್ಟುಸಿರು, ಸಣ್ಣದಾಗಿ ಬಿಕ್ಕುವುದು ನಡೆದೇ ಇತ್ತು. ಎಲ್ಲರನ್ನೂ ಶೂನ್ಯ ಭಾವ ಆವರಿಸಿ ಮಂಕು ಕವಿದಿತ್ತು. ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು. ಆ ಮಠದ ಪೀಠಾಧ್ಯಕ್ಷರಾದ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಪಾರ್ಥಿವ ಶರೀರವನ್ನು ಹೊತ್ತ ಭಕ್ತ ಸಮೂಹ ಮಠವನ್ನು ಪ್ರವೇಶಿಸಲು ಎಲ್ಲರ ಕಣ್ಣಲ್ಲೂ ನೀರು, ಮೂಕ ರೋಧನೆ. ಸಂಸಾರಿಯಲ್ಲದಿದ್ದರೂ ಆ ತಂದೆಗೆ ಸಾವಿರಾರು ಲಕ್ಷಾಂತರ ಮಕ್ಕಳು ಭಕ್ತರ ರೂಪದಲ್ಲಿ. ಸ್ವಲ್ಪ…
Udayarashmi kannada daily newspaper
ತಾಲೂಕಿನಲ್ಲಿ ಲಿಂಪಿಸ್ಕೀನ್ ಡಿಸಿಸ್ | ರೋಗ ಕಾಣಿಸಿಕೊಂಡ ಕರುಗಳಿಗೆ ರೈತರಿಂದ ಕ್ವರಂಟೈನ್ ಉದಯರಶ್ಮಿ ದಿನಪತ್ರಿಕೆ ಇಂಡಿ: ಹಸುವಿನ ಕರುಗಳಿಗೆ ಲಿಂಪಿಸ್ಕಿನ್ ಡಿಸಿಸ್ ಖಾಯಿಲೆ ಕಾಣಿಸಿಕೊಂಡಿದ್ದು ತಾಲೂಕಿನ ಎಂಟು ದನಗಳಿಗೆ ಮಾರಕ ಚರ್ಮಗಂಟು ರೋಗ ಖಾಯಿಲೆಯಿಂದ ಬಳಲುತ್ತಿವೆ.ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ದೇವರಿಗೆ ಬಿಟ್ಟಿರುವ ಕೆಲವು ದನಗಳಿಗೆ ಸೇರಿದಂತೆ ತಾಲೂಕಿನ ಕೆಲವು ಕಡೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.ಸಧ್ಯ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನ ಎದುರು ದೇವರಿಗೆ ಬಿಟ್ಟ ಆಕಳಿಗೆ ಬಂದಿದ್ದು ಘಟನಾ ಸ್ಥಳಕ್ಕೆ ಎಸಿ ಅಬೀದ್ ಗದ್ಯಾಳ ಭೇಟಿ ನೀಡಿದ್ದು ಪಶು ವೈದ್ಯಾಧಿಕಾರಿ ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.ಇದು ಕೆಲವು ವರ್ಷಗಳ ಹಿಂದೆ ಮನುಷ್ಯರಲ್ಲಿ ಕೊರೊನಾ ಬಂದತೆ ದನಗಳಿಗೆ ಚರ್ಮ ಗಂಟುರೋಗ ಕಾಣಿಸಿಕೊಳ್ಳುತ್ತಿದೆ.ಚರ್ಮಗಂಟು ರೋಗ ಕಾಣಿಸಿಕೊಂಡ ಕರುಗಳನ್ನು ಕ್ವಾರಂಟೈನ್ ಮಾಡಲಾಗಿದೆ. ರೈತರು ತಮ್ಮ ಜಮೀನಿನಲ್ಲೇ ಹಗ್ಗದ ದಾವಣಿ ಕಟ್ಟಿ ಖಾಯಿಲೆ ಕಾಣಿಸಿಕೊಂಡ ಕರುಗಳನ್ನು ದೂರ ದೂರ ಕಟ್ಟಿದ್ದಾರೆ.ಪಶು ವೈದ್ಯಾಧಿಕಾರಿಗಳು ಸೇರಿದಂತೆ ಪಶು ಇಲಾಖೆಯವರು ಗ್ರಾಮಗಳಿಗೆ ಭೇಟಿ…
