ತಾಲೂಕಿನಲ್ಲಿ ಲಿಂಪಿಸ್ಕೀನ್ ಡಿಸಿಸ್ | ರೋಗ ಕಾಣಿಸಿಕೊಂಡ ಕರುಗಳಿಗೆ ರೈತರಿಂದ ಕ್ವರಂಟೈನ್
ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಸುವಿನ ಕರುಗಳಿಗೆ ಲಿಂಪಿಸ್ಕಿನ್ ಡಿಸಿಸ್ ಖಾಯಿಲೆ ಕಾಣಿಸಿಕೊಂಡಿದ್ದು ತಾಲೂಕಿನ ಎಂಟು ದನಗಳಿಗೆ ಮಾರಕ ಚರ್ಮಗಂಟು ರೋಗ ಖಾಯಿಲೆಯಿಂದ ಬಳಲುತ್ತಿವೆ.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ದೇವರಿಗೆ ಬಿಟ್ಟಿರುವ ಕೆಲವು ದನಗಳಿಗೆ ಸೇರಿದಂತೆ ತಾಲೂಕಿನ ಕೆಲವು ಕಡೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.
ಸಧ್ಯ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನ ಎದುರು ದೇವರಿಗೆ ಬಿಟ್ಟ ಆಕಳಿಗೆ ಬಂದಿದ್ದು ಘಟನಾ ಸ್ಥಳಕ್ಕೆ ಎಸಿ ಅಬೀದ್ ಗದ್ಯಾಳ ಭೇಟಿ ನೀಡಿದ್ದು ಪಶು ವೈದ್ಯಾಧಿಕಾರಿ ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಇದು ಕೆಲವು ವರ್ಷಗಳ ಹಿಂದೆ ಮನುಷ್ಯರಲ್ಲಿ ಕೊರೊನಾ ಬಂದತೆ ದನಗಳಿಗೆ ಚರ್ಮ ಗಂಟುರೋಗ ಕಾಣಿಸಿಕೊಳ್ಳುತ್ತಿದೆ.
ಚರ್ಮಗಂಟು ರೋಗ ಕಾಣಿಸಿಕೊಂಡ ಕರುಗಳನ್ನು ಕ್ವಾರಂಟೈನ್ ಮಾಡಲಾಗಿದೆ. ರೈತರು ತಮ್ಮ ಜಮೀನಿನಲ್ಲೇ ಹಗ್ಗದ ದಾವಣಿ ಕಟ್ಟಿ ಖಾಯಿಲೆ ಕಾಣಿಸಿಕೊಂಡ ಕರುಗಳನ್ನು ದೂರ ದೂರ ಕಟ್ಟಿದ್ದಾರೆ.
ಪಶು ವೈದ್ಯಾಧಿಕಾರಿಗಳು ಸೇರಿದಂತೆ ಪಶು ಇಲಾಖೆಯವರು ಗ್ರಾಮಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದು ತಿಂಗಳಿಂದ ಮೂರು ತಿಂಗಳ ಅಂತರದ ಕರುಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತಿದೆ . ಹೀಗಾಗಿ ರೈತರ ಹೈನುಗಾರಿಕೆಗೂ ಪೆಟ್ಟು ಬಿದ್ದಿದೆ.

“ಲಂಪಿಸ್ಕಿನ್ ಡಿಸೀಸ್ ಜಾನುವಾರುಗಳಲ್ಲಿ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಪೋಕ್ಸ ವಿರಿಡೆ ಕುಟುಂಬದ ವೈರಸ್ ನಿಂದ ಉಂಟಾಗುತ್ತತ್ತದೆ. ಇದನ್ನು ನೀತ್ಲಂಗ್ ವೈರಸ್ ಎಂದೂ ಕರೆಯುತ್ತಾರೆ. ಉಸಿರಾಟ ಮತ್ತು ಜಠರಗುಳಿತನ ಪ್ರದೇಶಗಳು ಸೇರಿ ಚರ್ಮ ಮತ್ತು ಲೋಳೆಯ ಪೊರೆಗಳ ಮೇಲೆ ಜ್ವರ ವಿಸ್ತರಿಸಿದ ಬಾಹ್ಯ ದುಗ್ದರಸ ಗ್ರಂಥಿಗಳು ಮತ್ತು ಬಹು ಗಂಟುಗಳು ವ್ಯಾಸದಲ್ಲಿ ೨-೫ ಸೆಂಟಿಮೀಟರ್ ೧-೨ ಇಂಚು ಅಳತೆ ಈ ರೋಗವನ್ನು ನಿರೂಪಿಸುತ್ತದೆ.”
– ಡಾ.ರಾಜಕುಮಾರ ಅಡಕಿ
ಮುಖ್ಯ ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ ಇಂಡಿ

“ಜಾನುವಾರುಗಳಿಗೆ ಚರ್ಮಗಂಟು ರೋಗ ಬರುತ್ತಿದ್ದು ಕೂಡಲೇ ಪಶು ವೈದ್ಯರು ಚಿಕಿತ್ಸೆ ನೀಡಬೇಕು. ಶ್ರೀ ಶಾಂತೇಶ್ವರ ದೇವಸ್ಥಾನದ ಎದುರು ಆಕಳು ರೋಗದಿಂದ ನರಳುತ್ತಿದೆ. ಕೊರೊನಾ ಸಂದರ್ಭದಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರುಗಳ ಮಾರಣ ಹೋಮವೇ ಆಗಿದೆ. ಕೂಡಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.”
– ಕಾಸುಗೌಡ ಬಿರಾದಾರ
ಅಧ್ಯಕ್ಷರು, ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ, ಇಂಡಿ

