ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೆಲವರಿಗೆ ದೃಷ್ಟಿ ಸಾಮರ್ಥ್ಯದ ಕೊರತೆಯಿರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಪನ್ಯಾಸಕಿ ಶ್ವೇತಾ ಕಾಂತ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಣಿಶಾಸ್ತçದ ವಿಭಾಗದ ಅಡಿಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಬೈಲ್ ಬಳಕೆಯಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ “ಕಣ್ಣಿನ ದೃಷ್ಟಿಯಿಂದ ನಾವು ಸಮಸ್ತ ಜಗತ್ತನ್ನೇ ನೋಡಬಹುದು. ಇದು ಮಾನವನ ದೇಹದ ಅತೀ ಮುಖ್ಯವಾದ ಅಂಗ. ಕಣ್ಣಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಬಹಳ ಕಷ್ಟ. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿಗಿದೆ. ಇದು ಸರಿ ಇದ್ದರೆ ಅದಕ್ಕಿಂತ ಒಳ್ಳೆಯ ವರದಾನ ಮತ್ತೊಂದಿಲ್ಲ ಎಂದರು.
ಡಾ.ಸುರೆಂದ್ರ ಕೆ, ಶೃತಿ ಪಾಟೀಲ, ಡಾ.ಪಿ.ಕೆ.ರಾಠೋಡ ಮಾತನಾಡಿದರು.
ಪ್ರಾದ್ಯಾಪಕರಾದ ಮಲ್ಲಿಕಾರ್ಜುನ ಕೋಣದೆ, ರಾಘವೇಂದ್ರ ಇಂಗನಾಳ, .ಪರಶುರಾಮ ಅಜಮನಿ, ಪಂಕಜ ಕುಲಕರ್ಣಿ, ಶೃತಿ ಬಿರಾದಾರ ಮತ್ತಿತರಿದ್ದರು.

