ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯ ಚಂಡಿ ಹೋಮ ಕಾರ್ಯಕ್ರಮ ನಡೆಯಿತು.
ಗಾಣಗಾಪುರದ ಅರ್ಚಕರಾದ ವಿಶ್ವೇಶ್ವರ ಭಟ್ಟ, ಸರ್ವೇಶ ಭಟ್ಟ ಮತ್ತು ಸುಶಾಂತ ಭಟ್ಟ ಹಾಗೂ ಇಂಡಿಯ ಶಿವಾನಂದ ಪೂಜಾರಿ ಶಾಂತು ಪೂಜಾರಿ ಚಂಡಿ ಹೋಮ ನಡೆಸಿ ಕೊಟ್ಟರು.
ಚಂಡಿ ಹೋಮ ಕಾರ್ಯಕ್ರಮದಲ್ಲಿ ದಂಪತಿಗಳಾದ ಬಸವರಾಜ ವಳಸಂಗ ಮತ್ತು ಸವಿತಾ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ದೇವಸ್ಥಾನಕ್ಕೆ ದೇವಿಗೆ ಕಿರೀಟಕ್ಕೆ ಬಂಗಾರ ನೀಡಿದ ಡಾ|| ಬಸವರಾಜ ಹತ್ತಿ, ವೀರ ಭಾರತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸನ್ಮಾಥ ಹಳ್ಳಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚಂದ್ರು ದೇವರ, ಉದ್ದಿಮೆದಾರ ಬಾಲಾಜಿ ಇಪಕ್ವಾಯಿಲ್, ಮಂಜುನಾಥ ಕಾಮಗೊಂಡ, ಮಹಾದೇವ ಬಾರಿಕಾಯಿ, ಸಿದ್ರಾಮ ನಿಗಡಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಬಾಳು ಕಠಾರೆ, ಬಾಪು ಮಹೀಂದ್ರಕರ, ಸುನೀಲ ಸುಲಾಖೆ, ಬಾಬುರಾವ ಸುಲಾಖೆ, ಕಿರಣ ಬಳಮಕರ, ಗಣೇಶ ಮಹಿಂದ್ರಕರ, ಸುಬಾಶ ಬಳಮಕರ, ಸಂಜಯ ಸುಲಾಖೆ, ವಿಶ್ವನಾಥ ಮಹೀಂದ್ರಕರ, ಆದಿತ್ಯ ಸುಲಾಖೆ, ಅಮರ ಪತಂಗೆ, ಸಿದರೇಶ ಅಂಬರಕರ, ಕಿರಣ ಕೋಳೆಕರ ಮತ್ತಿತರಿದ್ದರು.

