Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಾಡಿನಾದ್ಯಂತ ದಸರಾ ಹಬ್ಬವೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಪಿಎಸ್‌ಐ ಆರೀಫ್ ಮುಷಾಪುರಿ ಹೇಳಿದರು,ಪಟ್ಟಣದ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಯುಧ ಪೂಜೆ ಜರುಗಿಸಿ ಮಾತನಾಡಿದ ಅವರು, ನವರಾತ್ರಿ ಹಬ್ಬದ ೯ನೆಯ ದಿನದಂದು ಆಯುಧಗಳಿಗೆ ಪ್ರಜೆ ಮತ್ತು ಗೌರವವನ್ನು ಸಲ್ಲಿಸುವುದಕ್ಕೆ ಆಯುಧ ಪೂಜೆಯನ್ನು ನೇರವೇರಿಸಲಾಗಿತ್ತದೆ ಎಂದು ಹೇಳಿದರು.ಯಾವಾಗಲೂ ಜನಜಂಗುಳಿ, ಕೇಸ್, ತಕರಾರು ಎಂದಿರುವ ಪೊಲೀಸ್ ಠಾಣೆ ಬನ್ನಿ, ಬಂಗಾರದ ಕಡ್ಡಿ, ಬಲೂನ್, ಮಾಲೆ ಸೇರಿದಂತೆ ವಿವಿಧ ಅಲಂಕಾರಗಳಿಂದ ಕಂಗೊಳಿಸಿತು.ಇದೇ ಸಂದರ್ಭದಲ್ಲಿ ವಾಹನ, ಶಸ್ತಾçಸ್ತç, ಕೈಕೋಳ, ಗಣಕಯಂತ್ರ ಹೀಗೆ ಠಾಣೆಯಲ್ಲಿರುವ ಆಯುಧಗಳಿಗೆ ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್‌ಐ ಆರೀಫ್ ಮುಷಾಪುರಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಪೂಜಾ ಕಾರ್ಯಕ್ರಮದಲ್ಲಿ ಸಿಪಿಐ, ಪಿಎಸ್‌ಐ ಸಿಬ್ಬಂದಿಗಳು ಕುಟುಂಬವು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಸುರೇಶ ಕೊಂಡಿ, ಗೊಲ್ಲಾಳ ಈಜೇರಿ, ಪರಶುರಾಮ ಹಂಡರಗಲ್ಲ, ಪ್ರಭುಗೌಡ, ಶೈಲಶ್ರೀ ನ್ಯಾಮಣ್ಣವರ, ಬಸವರಾಜ ಪಟೇದ ಸೇರಿದಂತೆ ಅನೇಕರಿದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗೊಲ್ಲರ ಸಮುದಾಯದಲ್ಲಿ ಶಿಕ್ಷಣದ ಕೊರತೆ ಇರಬಹುದು. ಆದರೆ ಸಂಸ್ಕಾರ ಮತ್ತು ಸಂಸ್ಕೃತಿಯ ಕೊರತೆಯಿಲ್ಲ. ಧರ್ಮದ ಬಗ್ಗೆ ಅಪಾರ ಅಭಿಮಾನ ಮತ್ತ ನಂಬಿಕೆಯುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ರೇಣುಕಾ ನಗರದಲ್ಲಿ ಶುಕ್ರವಾರ ಸಾಯಂಕಾಲ ಹಮ್ಮಿಕೊಂಡ ರೇಣುಕಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಈ ಕೂಡ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಯಾದವ (ಗೊಲ್ಲರ) ಸಮಾಜವನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಯುವಕರ ಶ್ರಮ ಬಹಳವಿದೆ. ಜಾತ್ರೆ, ಪುರಾಣ, ಪ್ರವಚನ ಇಂದು ನಿನ್ನೆಯದದಲ್ಲ ಹಿಂದಿನ ಕಾಲದಿಂದಲೂ ಬೆಳೆದು ಬಂದಿದೆ. ಈ ದೇಶದ ಸಂಸ್ಕೃತಿ ಸಂಸ್ಕಾರ ದೊಡ್ಡದು. ಧರ್ಮದ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು. ಈ ಸಮಾಜದ ಅಭಿವೃದ್ಧಿ ಮತ್ತು ಚಿಂತನೆಗೆ ಸದಾ ಸಿದ್ದ. ಹನುಮಾನ ದೇವಸ್ಥಾನಕ್ಕೆ ೧೦ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದಿನ ವಿದ್ಯುನ್ಮಾನ ಯುಗದಲ್ಲಿ ಹಬ್ಬಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗುತ್ತರಗಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವದು ಇತಿಹಾಸ ಸೃಷ್ಠಿಸುವಂತಿದೆ. ಅಂತೆಯೇ ದಕ್ಷಿಣ ಕರ್ನಾಟಕದಲ್ಲಿ ದಸರಾ ಉತ್ಸವ ಶ್ರೀ ಚಾಮುಂಡೇಶ್ವರಿ ಉತ್ಸವ ವಿಜೃಂಭಿಸುತ್ತಿರುವುದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಅದೇ ರೀತಿಯಲ್ಲಿ ಇಡೀ ಜಿಲ್ಲೆಯಲ್ಲಿ ಗುತ್ತರಗಿ ಗ್ರಾಮದ ಕಡೆ ಗಮನ ಹರಿಸುವ ಕಾರ್ಯ ಈ ಭುವನೇಶ್ವರಿ ದೇವಿ ಮಾಡಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಗುತ್ತರಗಿ ಗ್ರಾಮದಲ್ಲಿ ನಡೆದ ನಾಡದೇವತೆ ಶ್ರೀ ಭುವನೇಶ್ವರ ದೇವಿ ಉತ್ಸವದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿ, ನವರಾತ್ರಿ ಉತ್ಸವ ಎಂದರೆ ೯ ದಿನಗಳ ಕಾಲ ಮೈಸಾಸೂರನ ನಡುವೆ ನವದುರ್ಗಿಯರಿಂದ ಯುದ್ಧವಾಗಿ ಮೈಸಾಸೂರನ ಮರ್ಧನವಾಗಿದ್ದರಿಂದ ವಿಜಯದಶಮಿಯನ್ನು ಎಲ್ಲೆಡೆ ಆಚರಿಸುವ ಪದ್ದತಿ ರೂಢಿಯಲ್ಲಿ ಬಂದಿದೆ. ಗುತ್ತರಗಿ ಗ್ರಾಮದಲ್ಲಿ ನಿವೃತ್ತ ಆಯ್.ಎ.ಎಸ್ ಅಧಿಕಾರಿ ಪಿ.ಜಿ.ನಾಯಕ ಅವರ ತೋಟದಲ್ಲಿ ತಮ್ಮ ಸ್ವಂತ ಹಣದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನವನ್ನು ನಿರ್ಮಿಸಿ ನಾಡಹಬ್ಬಕ್ಕೆ ಮೆರಗು…
ಉದಯರಶ್ಮಿ ದಿನಪತ್ರಿಕೆ ಮೈಸೂರು: ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ದೊರೆಯಿತು.ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ದೊರೆತಿದ್ದು, ಕೋಟ್ಯಾಂತರ ಭಕ್ತರು ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾದ ನಾಡದೇವಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡರು.ಅಭಿಮನ್ಯು ಆನೆ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಹೆಜ್ಜೆ ಹಾಕಿತು. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ನೆರೆದ ಜನತೆ ದಸರಾ ವೈಭವವನ್ನು ಕಣ್ತುಂಬಿಕೊಂಡರು.ಜಂಬೂಸವಾರಿ ಪೂರ್ಣಗೊಂಡ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಿತು. ತಡವಾಗಿ ನೆರವೇರಿದ ಪುಷ್ಪಾರ್ಚನೆ ನಿಗದಿತ ಸಮಯಕ್ಕಿಂತ ತಡವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ನೆರವೇರಿತು. 4.40 ರಿಂದ 5 ಗಂಟೆಯ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಉಪ್ಪಾರ್ಚನೆ ಆಗಬೇಕಿತ್ತು. ಆದರೆ 9 ನಿಮಿಷಗಳು ತಡವಾಗಿದೆ.
ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ | ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ದನಿ ಎತ್ತಿ | ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ‘ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ತನಗಿರುವ ಎಲ್ಲ ಗೌರವವನ್ನು ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲನ್ನು ಪಡೆಯಲು ಹೇಗೆ ಮುಂದುವರೆಯಬೇಕೆನ್ನುವ ಚರ್ಚೆ ಸಾರ್ವಜನಿಕವಾಗಿ ನಡೆಯಬೇಕಿದೆ. ಇಂತಹ ರಚನಾತ್ಮಕ ಚರ್ಚೆ ವಿಜಯದಶಮಿಯ ಶುಭದಿನದಿಂದಲೇ ಶುರುವಾಗಲಿ. ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕೇಂದ್ರದ ಎನ್‍ಡಿಎ ಸರಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ. 28ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂ.ಬಿಡುಗಡೆಗೊಳಿಸಿರುವ ಕೇಂದ್ರ ಸರಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ. ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು…
ಉದಯರಶ್ಮಿ ದಿನಪತ್ರಿಕೆ ಢವಳಗಿ: ಸಮೀಪದ ಗುಂಡಕರ್ಜಗಿ ಗ್ರಾಮದ ಶ್ರೀ ಮಹಿಬೂಬಸುಬಹಾನಿ ಜಾತ್ರಾ ಮಹೋತ್ಸವವು ಅಕ್ಟೋಬರ್ 14 ರಿಂದ ಅಕ್ಟೋಬರ್ 16ರ ವರೆಗೆ ಹಣಮಂತ ಶರಣರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುವುದು.14 ಸೋಮವಾರದಂದು ರಾತ್ರಿ 10 ಗಂಟೆಗೆ ಶ್ರೀ ಮಹಿಬೂಬಸುಬಹಾನಿ ದೇವರಿಗೆ ಕುದುರೆಯ ಮುಖಾಂತರ ಗಂಧ ಒಯ್ಯುವುದು. ನಂತರ ಗ್ರಾಮದ ಸಮಸ್ತ ದೈವ ಮಂಡಳಿಯಿಂದ ಗಂಧ ಏರುವುದು ಮತ್ತು ಮದ್ದು ಸುಡುವುದು. ನಂತರ ಸುತ್ತ ಮುತ್ತಲಿನ ಗ್ರಾಮಸ್ಥರಿಂದ ಶಿವಭಜನೆ ನಡೆಯುವುದು.15 ಮಂಗಳವಾರದಂದು ಮುಂಜಾನೆ 6 ಗಂಟೆಗೆ ಗ್ರಾಮದ ಶ್ರೀ ಕಾಶಿಲಿಂಗೇಶ್ವರ ದೇವರಿಗೆ ಅಭಿಷೇಕ ನಂತರ ಶ್ರೀ ಮಹಿಬೂಬಸುಬಹಾನಿ ಉರುಸು ನಡೆಯುವುದು. ನಂತರ ಮುಂಜಾನೆ 11 ಗಂಟೆಗೆ ಎತ್ತಿನಗಾಡಿ ರೇಸ್ ಇರುವುದು.ಒಂದನೇ ಬಹುಮಾನ 15001, ಎರಡನೇ 10001, ಮೂರನೇ 7001, ನಾಲ್ಕನೇ 5001, ಐದನೇ ಬಹುಮಾನ 2001 ಇರುವುದು.ಅಂದೇ ರಾತ್ರಿ 10 ಗಂಟೆಗೆ ಜಮಖಂಡಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ಎಂಬ ಸುಂದರ ಸಾಮಾಜಿಕ…
ಅ.೧೪ರಂದು ವಿಜಯಪುರದಲ್ಲಿ ಮೆರವಣಿಗೆ ಮೂಲಕ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ದಶಕಗಳ ಹೋರಾಟದ ಫಲದಿಂದ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ದೊರತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ಇದನ್ನು ಖಂಡಿಸಿ ಜಿಲ್ಲೆಯ ತಳವಾರ ಸಮಾಜದ ಜನರು ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಲೀಖಿತ ಮನವಿ ಸಲ್ಲಿಸಲಿದ್ದೇವೆ ಅದಕ್ಕೆ ಆಲಮೇಲ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದೆವೆ ಎಂದು ತಳವಾರ ಸಮಾಜದ ಮುಖಂಡ ಪ್ರಭು ವಾಲಿಕಾರ ತಿಳಿಸಿದರು.ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು, ತಳವಾರ ಸಮಾಜ ಜನರ ದಶಕಗಳ ಹೋರಾಟದಿಂದ ಹಿಂದಿನ ಬಿಜೆಪಿ ಸರ್ಕಾರ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನೀಡಿದ್ದು, ಈಗಾಗಲೆ ಅದರ ಲಾಭ ಪಡೆದುಕೊಳ್ಳುತ್ತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ರಾಜ್ಯದಲ್ಲಿ ತಳವಾರ ಸಮಾಜ ೮…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೆಂಕಟೇಶ ನಗರ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ಯ ವೆಂಕಟೇಶ ನಗರದಿಂದ ದೇವಿಯ ಭವ್ಯ ಮೆರವಣಿಕೆ ಸಕಲ ವಾದ್ಯ ವೃಂದಗಳೊಂದಿಗೆ ಅದ್ಧೂರಿಯಾಗಿ ಜರುಗಿತು.೧೦೦೧ ಜನ ಮಹಿಳೆಯರು ಕುಂಭ ಹೊತ್ತು ಮಹಿಳೆಯರು ಸಾಗಿ ಮೆರವಣಿಗೆ ಮೆರಗು ತಂದರು.ಓಣಿಯಲ್ಲಿ ಕುಂಭ ಮೇಳದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸುಮಂಗಲೆಯರು ಆಗಮಿಸುವರು. ಮತ್ತು ಡೊಳ್ಳು ಕುಣಿತ ಮೆರವಣಿಗೆ, ಕರಡಿ ಮಜಲು, ಶ್ರೀ ವೀರಭದ್ರ ಪುರವಂತರು ಹಾಗೂ ಗೊಂಬೆ ಕುಣಿತ ಇನ್ನಿತರ ಕಲಾ ತಂಡಗಳ ಸಮೇತ ಪಲ್ಲಕ್ಕಿ ಶ್ರೀ ಮರಗಮ್ಮ ದೇವಸ್ಥಾನ, ಶ್ರೀ ಲಕ್ಕಮ್ಮ ದೇವಸ್ಥಾನ ಮೂಲಕ ಮರಳಿ ಅದೇ ಮಾರ್ಗದಿಂದ ಶ್ರೀ ಲಕ್ಷ್ಮೀ ದೇವಸ್ಥಾನದ ವರೆಗೆ ಆಗಮಿಸಿತು.ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆ ಸದಸ್ಯರದಾ ಶ್ರೀ ಕುಮಾರ ಗಡಗಿ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಶ್ರೀ ಲಕ್ಷ್ಮೀ ದೇವಿಯು ಪ್ರತಿಯೊಬ್ಬರಿಗೆ ಒಳಿತನ್ನು ಮಾಡಲಿ. ದೇವಿ ಮಹಾತ್ಮೆ ಅಪಾರವಿದೆ. ಭಕ್ತರು ದೇವಿಯ ಕೃಪೆ ಪಡೆದು ಪುನೀತರಾಗಬೇಕು. ಅದರಂತೆ ಜಾತ್ರೆಗಳು ಸೌಹಾರ್ದಕ್ಕೆ ಹೆಸರುವಾಗಿಯಾಗಿವೆ. ಮನುಷ್ಯ ಮನುಷ್ಯ ನಡುವೆ…
ಗಡಿಗ್ರಾಮ ಉಮರಜದಲ್ಲಿ ನಾಡದೇವಿ ಪ್ರಭಾತಪೇರಿ ೬೮ರ ಸಂಭ್ರಮಕ್ಕೆ ತೆರೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೮ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟçಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ…
S* ಗಡಿಗ್ರಾಮ ಉಮರಜದಲ್ಲಿ ನಾಡದೇವಿ ಪ್ರಭಾತಪೇರಿ ೬೮ರ ಸಂಭ್ರಮಕ್ಕೆ ತೆರೆ B*ಗಡಿಗ್ರಾಮದಲ್ಲಿ ಕನ್ನಡ ಭಾಷಾಭಿಮಾನದ ’ಪ್ರಭಾತಪೇರಿ’ ಸಂಪನ್ನ ಉದಯರಶ್ಮಿ ದಿನಪತ್ರಿಕೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೮ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟçಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ…
