ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೆಂಕಟೇಶ ನಗರ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ಯ ವೆಂಕಟೇಶ ನಗರದಿಂದ ದೇವಿಯ ಭವ್ಯ ಮೆರವಣಿಕೆ ಸಕಲ ವಾದ್ಯ ವೃಂದಗಳೊಂದಿಗೆ ಅದ್ಧೂರಿಯಾಗಿ ಜರುಗಿತು.
೧೦೦೧ ಜನ ಮಹಿಳೆಯರು ಕುಂಭ ಹೊತ್ತು ಮಹಿಳೆಯರು ಸಾಗಿ ಮೆರವಣಿಗೆ ಮೆರಗು ತಂದರು.
ಓಣಿಯಲ್ಲಿ ಕುಂಭ ಮೇಳದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸುಮಂಗಲೆಯರು ಆಗಮಿಸುವರು. ಮತ್ತು ಡೊಳ್ಳು ಕುಣಿತ ಮೆರವಣಿಗೆ, ಕರಡಿ ಮಜಲು, ಶ್ರೀ ವೀರಭದ್ರ ಪುರವಂತರು ಹಾಗೂ ಗೊಂಬೆ ಕುಣಿತ ಇನ್ನಿತರ ಕಲಾ ತಂಡಗಳ ಸಮೇತ ಪಲ್ಲಕ್ಕಿ ಶ್ರೀ ಮರಗಮ್ಮ ದೇವಸ್ಥಾನ, ಶ್ರೀ ಲಕ್ಕಮ್ಮ ದೇವಸ್ಥಾನ ಮೂಲಕ ಮರಳಿ ಅದೇ ಮಾರ್ಗದಿಂದ ಶ್ರೀ ಲಕ್ಷ್ಮೀ ದೇವಸ್ಥಾನದ ವರೆಗೆ ಆಗಮಿಸಿತು.
ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆ ಸದಸ್ಯರದಾ ಶ್ರೀ ಕುಮಾರ ಗಡಗಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಶ್ರೀ ಲಕ್ಷ್ಮೀ ದೇವಿಯು ಪ್ರತಿಯೊಬ್ಬರಿಗೆ ಒಳಿತನ್ನು ಮಾಡಲಿ. ದೇವಿ ಮಹಾತ್ಮೆ ಅಪಾರವಿದೆ. ಭಕ್ತರು ದೇವಿಯ ಕೃಪೆ ಪಡೆದು ಪುನೀತರಾಗಬೇಕು. ಅದರಂತೆ ಜಾತ್ರೆಗಳು ಸೌಹಾರ್ದಕ್ಕೆ ಹೆಸರುವಾಗಿಯಾಗಿವೆ. ಮನುಷ್ಯ ಮನುಷ್ಯ ನಡುವೆ ಬಾಂಧವ್ಯದ ಕೊಂಡಿಯನ್ನು ಬೆಸೆಯಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾ ಬಸವರಾಜ ಎಸ್. ಶಿವಶರಣರ, ಕಾರ್ಯದರ್ಶಿ ಚಂದ್ರಶೇಖರ ಮೈಲಿಕರ, ಉಪಾಧ್ಯಕ್ಷರಾದ ದಾವು ಕೇಸು ರಾಠೋಡ, ಖಜಾಂಚಿ ಹರಿದಾಸ ವಾಲಿಕಾರ, ಸಂತೋಷ ಮೈಲಿಕರ, ರಂಗಪ್ಪ ಕಾಮರಡ್ಡಿ, ರುದ್ರಪ್ಪ ಪಟ್ಟಣ, ಗಿರಿಮಲ್ಲಪ್ಪ ಕವಟಗಿ, ಮಾಮಲ್ಲಪ್ಪ ಶಾಬಾದಿ , ಶ್ರೀನಿವಾಸ ಗೆ ಬೆಳೆಮಕರ ಸೇರಿದಂತೆ ಅಪಾರ ಭಕ್ತಾಧಿಕಾರಿಗಳು ಉಪಸ್ಥಿತರಿದ್ದರು.

