ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ವಿದ್ಯುನ್ಮಾನ ಯುಗದಲ್ಲಿ ಹಬ್ಬಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗುತ್ತರಗಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವದು ಇತಿಹಾಸ ಸೃಷ್ಠಿಸುವಂತಿದೆ. ಅಂತೆಯೇ ದಕ್ಷಿಣ ಕರ್ನಾಟಕದಲ್ಲಿ ದಸರಾ ಉತ್ಸವ ಶ್ರೀ ಚಾಮುಂಡೇಶ್ವರಿ ಉತ್ಸವ ವಿಜೃಂಭಿಸುತ್ತಿರುವುದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಅದೇ ರೀತಿಯಲ್ಲಿ ಇಡೀ ಜಿಲ್ಲೆಯಲ್ಲಿ ಗುತ್ತರಗಿ ಗ್ರಾಮದ ಕಡೆ ಗಮನ ಹರಿಸುವ ಕಾರ್ಯ ಈ ಭುವನೇಶ್ವರಿ ದೇವಿ ಮಾಡಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಗುತ್ತರಗಿ ಗ್ರಾಮದಲ್ಲಿ ನಡೆದ ನಾಡದೇವತೆ ಶ್ರೀ ಭುವನೇಶ್ವರ ದೇವಿ ಉತ್ಸವದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿ, ನವರಾತ್ರಿ ಉತ್ಸವ ಎಂದರೆ ೯ ದಿನಗಳ ಕಾಲ ಮೈಸಾಸೂರನ ನಡುವೆ ನವದುರ್ಗಿಯರಿಂದ ಯುದ್ಧವಾಗಿ ಮೈಸಾಸೂರನ ಮರ್ಧನವಾಗಿದ್ದರಿಂದ ವಿಜಯದಶಮಿಯನ್ನು ಎಲ್ಲೆಡೆ ಆಚರಿಸುವ ಪದ್ದತಿ ರೂಢಿಯಲ್ಲಿ ಬಂದಿದೆ. ಗುತ್ತರಗಿ ಗ್ರಾಮದಲ್ಲಿ ನಿವೃತ್ತ ಆಯ್.ಎ.ಎಸ್ ಅಧಿಕಾರಿ ಪಿ.ಜಿ.ನಾಯಕ ಅವರ ತೋಟದಲ್ಲಿ ತಮ್ಮ ಸ್ವಂತ ಹಣದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನವನ್ನು ನಿರ್ಮಿಸಿ ನಾಡಹಬ್ಬಕ್ಕೆ ಮೆರಗು ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ನಿವೃತ್ತ ಆಯ್.ಎ.ಎಸ್ ಅಧಿಕಾರಿ ಪಿ.ಜಿ.ನಾಯಕ, ಬೆಂಗಳೂರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ ನಾಯಕ, ಬೆಳಗಾವಿ ಚೀಪ ಇಂಜನೀಯರ ಬಿ.ಆರ್.ರಾಠೋಡ, ನಿವೃತ್ತ ಪಿಡಿ ರಮೇಶ ಶಂ.ನಾಯಕ, ಸುನೀಲ ಪಿ.ನಾಯಕ, ರಾಘವೇಂದ್ರ ನಾಯಕ, ಕಾವ್ಯ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಚಂದ್ರಶೇಖರ ನಾಗರಬೇಟ್ಟ, ಕಸಾಪ ಅಧ್ಯಕ್ಷ ಶಿವಕುಮಾರ ಬಡಾನೂರ, ಸಂಗನಗೌಡ ಪಾಟೀಲ ಅಗಸಬಾಳ, ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ರಾಮು ಶಂ. ಚವ್ಹಾಣ, ಲಾಲು ಲ ರಾಠೋಡ, ಶಿವಾನಂದ ಪವಾರ, ಪ್ರಕಾಶ ಲೋಣಿ, ಎಂ.ಎಸ್.ಬಿರಾದಾರ, ಕಾಂಚನಾ ನಾಗರಬೇಟ್ಟ ಸೇರಿದಂತೆ ಅನೇಕರು ಇದ್ದರು.

