ಅ.೧೪ರಂದು ವಿಜಯಪುರದಲ್ಲಿ ಮೆರವಣಿಗೆ ಮೂಲಕ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ದಶಕಗಳ ಹೋರಾಟದ ಫಲದಿಂದ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ದೊರತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ಇದನ್ನು ಖಂಡಿಸಿ ಜಿಲ್ಲೆಯ ತಳವಾರ ಸಮಾಜದ ಜನರು ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಲೀಖಿತ ಮನವಿ ಸಲ್ಲಿಸಲಿದ್ದೇವೆ ಅದಕ್ಕೆ ಆಲಮೇಲ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದೆವೆ ಎಂದು ತಳವಾರ ಸಮಾಜದ ಮುಖಂಡ ಪ್ರಭು ವಾಲಿಕಾರ ತಿಳಿಸಿದರು.
ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು, ತಳವಾರ ಸಮಾಜ ಜನರ ದಶಕಗಳ ಹೋರಾಟದಿಂದ ಹಿಂದಿನ ಬಿಜೆಪಿ ಸರ್ಕಾರ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನೀಡಿದ್ದು, ಈಗಾಗಲೆ ಅದರ ಲಾಭ ಪಡೆದುಕೊಳ್ಳುತ್ತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ರಾಜ್ಯದಲ್ಲಿ ತಳವಾರ ಸಮಾಜ ೮ ಲಕ್ಷ ಜನಸಂಖ್ಯೆ ಹೊಂದಿದ್ದು ನಮ್ಮ ಸಮಾಜ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ರಾಜಕೀಯವಾಗಿ ಎಲ್ಲ ರಂಗದಲ್ಲಿ ಹಿಂದುಳಿದಿದ್ದು ಈ ಬಗೆಗೆ ಸಮಗ್ರ ಅಧ್ಯಯನ ಮಾಡಿ ಹಿಂದಿನ ಬಿಜೆಪಿ ಸರ್ಕಾರ ಎಸ್‌ಟಿ ಮೀಸಲಾತಿ ನೀಡಿದೆ. ಅದನ್ನು ಯಾವುದೆ ಕಾರಣಕ್ಕೂ ಹಿಂಪಡೆಯುವ ಕೆಲಸ ಮಾಡಲು ಮುಂದಾಗಬಾರದು ಎಂದು ಆಗ್ರಹಿಸಿದರು.
ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಿದ್ದೇವೆ. ಅಕ್ಟೋಬರ್ ೧೪ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಮೇರವಣಿಗೆ ಮೂಲಕ ಪ್ರತಿಭಟಿಸುತ್ತ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಳವಾರ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು ಅದಕ್ಕೆ ಆಲಮೇಲ ತಾಲೂಕಿನಿಂದಲು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದವಲಪ್ಪ ಸೊನ್ನ, ವಿಠ್ಠಲ ಯರಗಲ, ಸಿದ್ದುಗೌಡ ಬಿರಾದಾರ, ಕಾಂತು ಗುರಕಾರ, ಭೀಮರಾಯ ವಡಗೇರಿ, ನಾಗಪ್ಪ ತಳವಾರ, ಕಲ್ಲು ಕಣಮೇಶ್ವರ, ಸಿದ್ದು ಹಾವಳಗಿ, ಸಿದ್ದರಾಯ ತಳವಾರ, ಶಿವು ಗುರುಕಾರ ಮುಂತಾದವರು ಇದ್ದರು

