ಉದಯರಶ್ಮಿ ದಿನಪತ್ರಿಕೆ
ಢವಳಗಿ: ಸಮೀಪದ ಗುಂಡಕರ್ಜಗಿ ಗ್ರಾಮದ ಶ್ರೀ ಮಹಿಬೂಬಸುಬಹಾನಿ ಜಾತ್ರಾ ಮಹೋತ್ಸವವು ಅಕ್ಟೋಬರ್ 14 ರಿಂದ ಅಕ್ಟೋಬರ್ 16ರ ವರೆಗೆ ಹಣಮಂತ ಶರಣರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುವುದು.
14 ಸೋಮವಾರದಂದು ರಾತ್ರಿ 10 ಗಂಟೆಗೆ ಶ್ರೀ ಮಹಿಬೂಬಸುಬಹಾನಿ ದೇವರಿಗೆ ಕುದುರೆಯ ಮುಖಾಂತರ ಗಂಧ ಒಯ್ಯುವುದು. ನಂತರ ಗ್ರಾಮದ ಸಮಸ್ತ ದೈವ ಮಂಡಳಿಯಿಂದ ಗಂಧ ಏರುವುದು ಮತ್ತು ಮದ್ದು ಸುಡುವುದು. ನಂತರ ಸುತ್ತ ಮುತ್ತಲಿನ ಗ್ರಾಮಸ್ಥರಿಂದ ಶಿವಭಜನೆ ನಡೆಯುವುದು.
15 ಮಂಗಳವಾರದಂದು ಮುಂಜಾನೆ 6 ಗಂಟೆಗೆ ಗ್ರಾಮದ ಶ್ರೀ ಕಾಶಿಲಿಂಗೇಶ್ವರ ದೇವರಿಗೆ ಅಭಿಷೇಕ ನಂತರ ಶ್ರೀ ಮಹಿಬೂಬಸುಬಹಾನಿ ಉರುಸು ನಡೆಯುವುದು. ನಂತರ ಮುಂಜಾನೆ 11 ಗಂಟೆಗೆ ಎತ್ತಿನಗಾಡಿ ರೇಸ್ ಇರುವುದು.ಒಂದನೇ ಬಹುಮಾನ 15001, ಎರಡನೇ 10001, ಮೂರನೇ 7001, ನಾಲ್ಕನೇ 5001, ಐದನೇ ಬಹುಮಾನ 2001 ಇರುವುದು.
ಅಂದೇ ರಾತ್ರಿ 10 ಗಂಟೆಗೆ ಜಮಖಂಡಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ಎಂಬ ಸುಂದರ ಸಾಮಾಜಿಕ ನಾಟಕ ಇರುವುದು.
16 ಬುಧವಾರದಂದು ಮುಂಜಾನೆ 10 ಗಂಟೆಗೆ ಸಾಧು ಮಹಾರಾಜರಿಗೆ ಬಟ್ಟೆ ವಿತರಣೆ. ನಂತರ 11 ಗಂಟೆಗೆ ತೇರಬಂಡಿ ಸ್ಪರ್ಧೆ ನಡೆಯುವುದು. ಒಂದನೇ ಬಹುಮಾನ 25001, ಎರಡನೇ 15001,ಮೂರನೇ 10001,ನಾಲ್ಕನೇ ,7001,ಐದನೇ 5001,ಆರನೇ 3001, ಏಳನೇ ಬಹುಮಾನ 2001,ವಿಷೇಶ ಸೂಚನೆ ಡಾಂಬರ್ ರಸ್ತೆಯಲ್ಲಿ ನಡೆಯುವುದು. ಮತ್ತು ಒಂದು ಜವಾರಿ ಎತ್ತು ಮತ್ತು ಒಂದು ಜೆರ್ಸಿ ಎತ್ತು ಗಳಿ ಮಾತ್ರ ಅವಕಾಶ ಎಂದು ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8105859118 ಮತ್ತು 9880101976 ಈ ಸಂಖ್ಯೆಗೆ ಸಂಪರ್ಕಿಸಿರಿ ಎಂದು ತಿಳಿಸಿದರು.

