Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಕಥಾ ವಿಭಾಗದಲಿ ಡಾ.ಲಕ್ಷ್ಮಣ ವಿ.ಎ ಅವರ ‘ಜಿರಿ ಮಳೆಯ ಕಣ್ಣು’ ಹಾಗೂ ಕಾವ್ಯಹಸ್ತಪ್ರತಿ ಬೆಂಗಳೂರಿನ ಭಾಗ್ಯವಸು ಅವರ ‘ರೆಪ್ಪೆಗಂಬದ ಮೇಲೆ ಕೂತ ಮರಿ ಹಕ್ಕಿ’ ಆಯ್ಕೆಯಾಗಿದೆ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ೨೦೨೩ರ ಸಾಲಿನ ಪುಸ್ತಕ ಪ್ರಶಸ್ತಿಗೆ ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ ಅವರ ಪರಿಮಳದ ಹಾದಿಯ ಪಯಣಿಗರು ಕೃತಿಯು ಆಯ್ಕೆಯಾಗಿದೆ ಎಂದು ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮಿ ಆರ್.ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಯುವಕವಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಯುವ ಕಾವ್ಯ ಪುರಸ್ಕಾರ ನೀಡಲು ಇದೇ ವರ್ಷದಿಂದ ನಿರ್ಧರಿಸಿದ್ದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪಿ. ನಂದಕುಮಾರ ಅವರ “ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ’ಹಸ್ತಪ್ರತಿ ಆಯ್ಕೆಯಾಗಿದೆ.ಬೆರಗು ಪ್ರಕಾಶನವು ಕಳೆದ ಐದು ವರ್ಷಗಳಿಂದಲೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು. ಪ್ರಸಕ್ತ ವರ್ಷದ ಪ್ರಶಸ್ತಿಗೆ ೧೫೭ ಪುಸ್ತಕಗಳು, ಹಾಗೂ ಹಸ್ತಪ್ರತಿ ಸ್ಪರ್ಧೆಗೆ ೭೪ ಹಸ್ತಪ್ರತಿಗಳು ನಾಡಿನ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವು ರೋಗಿಗಳ ಸೇವೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇದನ್ನು ಬೇಗನೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಡಯಾಲಿಸಿಸ್ ಕೇಂದ್ರವು ಬಡವರಿಗೆ ಅನುಕೂಲವಾಗಿದ್ದು, ೨೪ ಗಂಟೆಗಳ ಸೇವೆ ನೀಡಲಾಗುವುದು ಎಂದು ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಂಗಸ್ ಚಿಕಿತ್ಸೆ ಹಾಗೂ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ, ಪಟ್ಟಣಕ್ಕೆ ಹದಿನಾರುವರೆ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧವು ನಿರ್ಮಾಣವಾಗುವುದು. ಈಗಾಗಲೇ ಎಂಟುವರೆ ಕೋಟಿ ಹಣ ಬಿಡುಗಡೆಯಾಗಿದ್ದು, ಬೇಗನೆ ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಶ್ರಮಿಸುವೆನು. ವೈದ್ಯರು ರೋಗಿಗಳನ್ನು ದೇವರಂತೆ ಕಂಡು ಚಿಕಿತ್ಸೆ ನೀಡಬೇಕು ಎಂದರು.ಚಡಚಣ ಏತ ನೀರಾವರಿ ಯೋಜನೆ ಬೇಗನೆ ಪ್ರಾರಂಭಿಸಲಾಗಿ ೪ ತಿಂಗಳಲ್ಲಿ ನೀರು ಬರುವಂತೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವೆ. ಇಲ್ಲಿ ವೈದ್ಯರ ಕೊರತೆಯಿದ್ದು ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು. ಸಿಬ್ಬಂದಿಯ ಕೊರತೆಯನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವೆನು. ಯಾವುದೇ ದೂರು ಬರದಂತೆ ಕಾರ್ಯ ನಿರ್ವಹಿಸಿರಿ ಎಂದು ಶಾಸಕ ಕಟಕಧೊಂಡ ಹೇಳಿದರು.ಪ್ರಾಸ್ತಾವಿಕವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಕಾಡಿನಲ್ಲಿಒಂಟಿ ಬದುಕುಹೊಟ್ಟೆಗಾಗಿಬಣ್ಣ ಬದಲಿಸುತ್ತಿತ್ತುನಿರುಪದ್ರವ ಜೀವಿಊಸರವಳ್ಳಿಶ್ರೀಗಂಧ ಕಳ್ಳರುಕಾಡಿಗೆ ಬೆಂಕಿಗಣಿ ಲೂಟಿಮರಳು ದಂದೆಹುಲಿ ಚರ್ಮ ಆನೆ ಕೊಂಬಿನಭರ್ಜರಿ ಮಾರಾಟಕೆರೆ ಹಳ್ಳ ನದಿ ಅತಿಕ್ರಮಣಲೋಕಾಯುಕ್ತದಿಂದಎಸ ಆಯ್ ಟಿ ಯಿಂದಕ್ಲೀನ್ ಚಿಟ್ ಪ್ರಾಮಾಣಿಕರುಚುನಾವಣಾ ಬಂದಾಗಶ್ವೇತ ಶುಭ್ರ ಖಾದಿ ಜುಬ್ಬಬುದ್ಧ ಬಸವ ಗಾಂಧಿ ಹಬ್ಬಸಂವಿಧಾನ ಹೆಸರಲ್ಲಿಮಂತ್ರಿಯಾಗಿ ಪ್ರಮಾಣ ವಚನಬೇಸರಗೊಂಡಿತು ಊಸರವಳ್ಳಿಒಂದು ದಿನ ಬೆಳ್ಳಂಬೆಳಿಗ್ಗೆಮರಕ್ಕೆ ಹಗ್ಗ ಬಿಗಿದುಆತ್ಮಹತ್ಯೆ ಮಾಡಿಕೊಂಡಿತ್ತು .ಕೈಯಲ್ಲಿ ಏನೋ ಒಂದು ಚೀಟಿತೆಗೆದು ನೋಡಿದರೆದುಷ್ಟ ರಾಜಕಾರಣಿಗಳೇನಿಮ್ಮಷ್ಟು ನನಗೆ ಬರಲಿಲ್ಲಬಣ್ಣ ಬದಲಾಯಿಸಲುನನ್ನ ಸಾವಿಗೆ ನಾನೇ ಕಾರಣಓದಿದ ನಾವು ನಗಬೇಕೋಇಲ್ಲ ಅಳಬೇಕೊ ?ಗೊತ್ತಾಗಲೊಲ್ಲದು – ಡಾ.ಶಶಿಕಾಂತ ಪಟ್ಟಣರಾಮದುರ್ಗ

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಇಂದಿರಾನಗರದ ಶಿರೋಳ ರಸ್ತೆಯಲ್ಲಿರುವ ಕೊಳಚೆ ಮಂಡಳಿಯವರು ನೀಡಿದ್ದರು ಎನ್ನಲಾದ ಜಾಗೆಯಲ್ಲಿನ ಶಡ್‌ಗಳನ್ನು ಪುರಸಭೆಯವರು ಶುಕ್ರವಾರ ತೆರವುಗೊಳಿಸಿದರು.ಕಳೆದ ಕೆಲವು ದಿನಗಳ ಹಿಂದೆ ಇಲ್ಲಿರುವ ಶಡ್‌ಗಳನ್ನು ತೆರವುಗೊಳಿಸುವದಾಗಿ ಪುರಸಭೆಯವರು ತಿಳಿಸಿದ್ದರು. ಈ ಬಗ್ಗೆ ಕೆಲವರು ಕೊಳಚೆ ಮಂಡಳಿಯವರು ಮತ್ತು ಪುರಸಭೆಯವರು ಜಂಟಿಯಾಗಿ ಸರ್ವೇ ಮಾಡಿ ಈ ಜಾಗೆಯನ್ನು ನಮಗೆ ನೀಡಿದ್ದಾರೆ. ನಮಗೆ ಈ ಜಾಗೆಯಿಲ್ಲದೇ ವಾಸ್ತವಕ್ಕೆ ಬೇರೆ ಜಾಗೆಗಳಿಲ್ಲ. ದಯವಿಟ್ಟು ನಮ್ಮ ಮನೆಗಳನ್ನು ತೆವುಗೊಳಿಸಬೇಡಿ ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೊಳಚೆ ಮಂಡಳಿ ನೀಡಿದ ಜಾಗೆ ಬೇರೆ ಈ ಷಡ್ ನಿರ್ಮಿಸಿದ ಜಾಗೆ ಬೇರೆ. ಇಲ್ಲಿ ಜಾಗೆ ಕೊಡಿಸುವದಾಗಿ ಸುಳ್ಳು ಹೇಳಿ ಬಡವರ ಬಳಿ ಮತ್ತು ನಮ್ಮೂರಿನವರಲ್ಲದವರ ಬಳಿ ಕೆಲವರು ದುಡ್ಡು ಪಡೆದು ಮೋಸ ಮಾಡಿದ್ದಾರೆ ಎಂದು ಪುರಸಭೆ ಸದಸ್ಯ ಹಣಮಂತ ಭೋವಿ ಆರೋಪಿಸಿದ್ದರು. ಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿ ಮತ್ತೊಮ್ಮೆ ಸರ್ವೇ ಮಾಡಿ ಅನಧಿಕೃತವಾಗಿದ್ದರೆ ಶಡ್‌ಗಳನ್ನು ತೆರವುಗೊಳಿಸಬೇಕೆಂದು ಶಾಸಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರನ್ನು ನಾಮಕರಣ ಮಾಡುವುದರ ಜೊತೆಗೆ ನಡೆದಾಡುವ ದೇವರು ಸಿದ್ದೇಶ್ವರ ಅಪ್ಪನವರ ಹೆಸರನ್ನು ವಿಜಯಪುರ ರೇಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕು ಎಂದು ಜಿಲ್ಲಾ ಜೈಕರ್ನಾಟಕ ಸಂಘಟನೆ ಅಧ್ಯಕ್ಷ ಸಂಗಮೇಶ ದಾಶ್ಯಾಳಗೌಡ, ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಜ ಹೊಳಿ ಆಗ್ರಹಿಸಿದರು.ಶನಿವಾರ ನಗರದ ಖಾಸಗಿ ಹೋಟೇಲನಲ್ಲಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಸಂಸದ ರಮೇಶ ಜಿಗಜಿಣಗಿ ಅವರು ಪ್ರಧಾನ ಮಂತ್ರಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಮ್ಮ ಜಿಲ್ಲೆಯ ಜನರ ಭಾವನೆಗಳೊಂದಿಗೆ ಸ್ಪಂದಿಸಬೇಕು ಎಂದರು.ಜೊತೆಗೆ ವಿಜಯಪುರದ ಮಹಾತ್ಮಾ ಗಾಂಧಿ ವೃತ್ತವನ್ನು ನವೀಕರಣಗೊಳಿಸಿ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಲ್ಲಿ ನಗರಕ್ಕೆ ಸೌಂದರ್ಯ ಬರುವದರ ಜೊತೆಗೆ ರಾಷ್ಟ್ರಪಿತರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹಾಗೂ ನಗರ ಕಿತ್ತೂರ ಚೆನ್ನಮ್ಮ ರಂಗಮಂದಿರವನ್ನು ಮಹಾನಗರ ಪಾಲಿಕೆ ಸುಪರ್ಧಿಗೆ ಪಡೆದು ನವೀಕರಣಗೊಳಿಸಿ ರಂಗಭೂಮಿ ಕಲಾವಿದರಿಗೆ ದಿನನಿತ್ಯ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ಉಸ್ತುವಾರಿ ಸಚಿವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ನೀರಾವರಿ ಜೊತೆಗೆ ಮೂಲಭೂತ ಸೌಕರ್ಯ, ಶಿಕ್ಷಣ, ಗುಣಮಟ್ಟದ ವಿದ್ಯುತ್ ಪೂರೈಕೆ, ಕೈಗಾರಿಕೆಗೆ ಉತ್ತೇಜನಕ್ಕೆ ಒತ್ತು ನೀಡಲಾಗಿದೆ ಎಂದು ವಿಧಾನಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಶನಿವಾರ ಹೊನವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ನಂತರ ತಿಕೋಟಾ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ತಲಾ ರೂ. 50 ಲಕ್ಷ ವೆಚ್ಚದಲ್ಲಿ ಪಟ್ಟಣದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಮತ್ತು ಗೈರಾಣ ಕಾಲನಿಯ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಪ. ಪಂ. ವತಿಯಿಂದ ರೂ 112.23 ಲಕ್ಷ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ತಿಕೋಟಾದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ವಾರ್ಡವಾರು ಬೇಡಿಕೆಗಳನ್ನು ಕ್ರೂಢಿಕರಿಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ವರದಿ ನೀಡಬೇಕು ಎಂದು ಪ.ಪಂ ಅಧಿಕಾರಿಗಳಿಗೆ ಸೂಚನೆ…

Read More

ವಿಜಯಪುರದ ಅರ್ಕಾಟ್ ದರ್ಗಾದಲ್ಲಿ ಉದ್ಯೋಗ ಮೇಳದ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉದ್ಯೋಗ ಒದಗಿಸುವ ವೇದಿಕೆಯಾಗುವುದು ಒಂದು ಪುಣ್ಯದ ಕಾರ್ಯ ಎಂದು ಸಮಾಜ ಸೇವಕ ಅಬ್ದುಲ್ ರಜಾಕ್ ಹೊರ್ತಿ ಹೇಳಿದರು.ವಿಜಯಪುರದ ಐತಿಹಾಸಿಕ ಹಜರತ್ ಸುಲ್ತಾನ ಸೈಯ್ಯದ್ ಷಹಾ ಅಬ್ದುಲ್ ರೆಹಮಾನ್ ಖಾದ್ರಿ ದರ್ಗಾದ ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಒದಗಿಸಿದರೆ ಉದ್ಯೋಗ ಪಡೆದ ಕುಟುಂಬವೇ ಉದ್ಧಾರವಾಗುತ್ತದೆ, ಹೀಗಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಉದ್ಯೋಗ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು.ಐತಿಹಾಸಿಕ ಅರ್ಕಾಟ್ ದರ್ಗಾ ಆಧ್ಯಾತ್ಮಿಕತೆ ಹಾಗೂ ಭಾವೈಕ್ಯತೆ ಸಂಗಮ. ದರ್ಗಾ ಉರುಸು ಅಂಗವಾಗಿ ಉದ್ಯೋಗ ಮೇಳ ಆಯೋಜಿಸಿರುವುದು ಅರ್ಥಪೂರ್ಣ ಎಂದರು.ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರ ವಾಸುದೇವ ಹೆರಕಲ್ಲ ಮಾತನಾಡಿ, ಅರ್ಕಾಟ್ ದರ್ಗಾ ದವಾ ಹಾಗೂ ದುವಾ ಹೆಸರುವಾಸಿ. ಉದ್ಯೋಗದಾತರು ಉದ್ಯೋಗಿಯ ಸ್ವಭಾವ, ಹಾವಭಾವ ಎಲ್ಲವನ್ನೂ ವೀಕ್ಷಿಸುತ್ತಾರೆ, ಹೀಗಾಗಿ ಶ್ರೇಷ್ಠವ್ಯಕ್ತಿತ್ವ, ಕೌಶಲ್ಯ ರೂಪಿಸಿಕೊಂಡು ಮುನ್ನಡೆಯಬೇಕು ಎಂದರು.ಸನ್ಮಾನ ಸ್ವೀಕರಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ…

Read More

ಅತಿ ವಿರಳ “ಅಪ್ಲ್ಯಾಸ್ಟಿಕ್‌” ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲಕ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿದ್ದ ಕಾರಣ ಅತಿ ವಿರಳ ಕಾಯಿಲೆಯಾದ “ಅಪ್ಲ್ಯಾಸ್ಟಿಕ್” ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್‌ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ.ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿಯ ಸಲಹೆಗಾರರಾದ ಡಾ ತನುಶ್ರೀ ಪಾಲ್ ಅವರ ವೈದ್ಯ ತಂಡ ಈ ಬಾಲಕನಿಗೆ ಸಮಯೋಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಾಲಕನ ಜೀವ ಉಳಿಸಲಾಗಿದೆ.ಈ ಕುರಿತು ಮಾತನಾಡಿದ ಡಾ. ನೀತಿ ರೈಜಾದಾ, ಆಫ್ರೀಕಾ ಮೂಲಕ 16 ವರ್ಷದ ಮೈಕೆಲ್ ಎಂಬ ಬಾಲಕನು ಕಳೆದ ಎರಡು ತಿಂಗಳಿನಿಂದ ತೀವ್ರವಾದ ಜ್ವರ, ಆಯಾಸ, ದೌರ್ಬಲ್ಯಗಳಿಂದ ಬಳಲುತ್ತಿದ್ದರು, ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗಲು ಪ್ರಾರಂಭಗೊಂಡಿತ್ತು. ಇದರಿಂದ ಭಯಭೀತಗೊಂಡ ಅವರ ಕುಟುಂಬ ಆಫ್ರಿಕಾದಲ್ಲಿರುವ…

Read More

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹೆಣ್ಣು ಮಕ್ಕಳನ್ನು ಕಾಪಾಡುವ ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವಿಶೇಷ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಎಲ್ಲ ಕಾನೂನುಗಳ ಬಗ್ಗೆ ದೇಶದ ಪ್ರತಿಯೊಬ್ಬ ಹೆಣ್ಣು ಮಗು ತಿಳಿದುಕೊಂಡಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ ಅಂತ್ಯವಾಗಲಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಇತರೆ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ, ವರದಕ್ಷಿಣೆ ಪಿಡುಗು, ಸತಿ ಸಹಗಮನ ಪದ್ಧತಿಯಂತಹ ಅನೇಕ ಪಿಡುಗುಗಳು ಮಹಾಮಾರಿಯಾಗಿ ಸಮಾಜದ ವ್ಯವಸ್ಥೆಯನ್ನು ಹಾಳು ಮಾಡಿದ್ದವು. ಇದರಿಂದ ಹೊರಬರಲು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸತ್ಸಂಗದಿಂದ ಜೀವನ ಪಾವನವಾಗುತ್ತದೆ ಎಂದು ಬ.ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಪ್ರವಚನಕಾರ ಜಕ್ಕಣ್ಣ ಶಾಸ್ತ್ರಿಗಳು ಹೇಳಿದರು.ಗುರುವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಶ್ರೀ ಶಿವಸಿದ್ದ ಭೀರಲಿಂಗೇಶ್ವರ ದೊಡ್ಡಬ್ಬದ ನಿಮಿತ್ಯ ಭೀರಲಿಂಗೇಶ್ವರ ಮಹಾಪುರಾಣ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ, ಭಕ್ತಿ ಮಾರ್ಗಗಳನ್ನು ಕಲಿಸಿಕೊಡುತ್ತದೆ ಎಂದ ಅವರು, ಹಿರೇಬೇವನೂರ ಗ್ರಾಮದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಈ ರೀತಿಯ ಭೀರಲಿಂಗೇಶ್ವರ ಮಹಾಪುರಾಣ, ಭೀರದೇವರ ಜೀವನ ಚರಿತ್ರೆ, ಹಾಲುಮತದ ಮೂಲ ಬೆಳವಣಿಗೆ ಅವರು ಮಾಡಿದ ಪವಾಡಗಳನ್ನು ಸುಮಾರು ೧೦ ದಿನಗಳ ಕಾಲ ಮಹಾಪುರಾಣವನ್ನು ನಿರ್ಮಲ ಮನಸ್ಸಿನಿಂದ ತಾವುಗಳು ಕೇಳಿ ಪುನೀತರಾಗಿ ಎಂದರು.ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ಸಾಹಿತಿ, ಶಿಕ್ಷಕ ದಶರಥ ಕೋರಿ, ಶಿಕ್ಷಕ ಪುಂಡಲಿಕ ಕಲ್ಮನಿ ಮಾತನಾಡಿ, ಹಾಲುಮತ ಸಂಪ್ರದಾಯ ಬಹಳ ವಿಶಿಷ್ಟವಾದುದು. ಯಾರ ಜತೆಗೂ ಜಗಳ, ವಿರೋಧ ಕಟ್ಟಿಕೊಳ್ಳುವ ಜನ ಹಾಲುಮತದವರಲ್ಲ. ಗುಡ್ಡಗಾಡಿನಲ್ಲಿದ್ದ ಜನ ನಾಡಿಗೆ ಬಂದು ಎಲ್ಲರೊಂದಿಗೆ ಹೊಂದಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಸಮುದಾಯವು ಸಮಾಜಕ್ಕೆ ಹಾಲು,…

Read More