Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ. ಅವರನ್ನು ಜಾತಿಯಿಂದಲ್ಲ ನೀತಿಯಿಂದ ನೋಡಬೇಕಿದೆ ಎಂದು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್ ಎನ್ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ‘ಪ್ರಸ್ತುತ ಸಾಮಾಜಿಕ ನೆಲೆಯಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವರ್ಣಾಶ್ರಮದ ಕಾಲಘಟ್ಟದಲ್ಲಿ ತನ್ನ ಅಪಾರವಾದ ಜ್ಞಾನದಿಂದ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮೇಧಾವಿ ವಾಲ್ಮೀಕಿ. ರಾಮಾಯಣದ ಪ್ರತಿಯೊಂದು ಪದದಲ್ಲಿಯೂ ವಿಶೇಷವಾದ ಅರ್ಥವಿದೆ. ಅದನ್ನು ಅರಿತುಕೊಂಡಾಗ ಮಾತ್ರ ವಾಲ್ಮೀಕಿಯ ಜ್ಞಾನದ ನಿಜವಾದ ಪರಿಚಯವಾಗುತ್ತದೆ. ನಾವು ಮನಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗಲು ಹುಟ್ಟಿದ್ದೇವೆ ಎಂಬುದನ್ನು ರಾಮಾಯಣ ನಮಗೆ ತೋರಿಸಿಕೊಡುತ್ತದೆ.ರಾಮಾಯಣ ಕೇವಲ ಮನುಷ್ಯರನ್ನಷ್ಟೇ ಒಳಗೊಂಡಿಲ್ಲ, ಪ್ರಾಣಿ, ಪಕ್ಷಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಳ್ಳತನ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ ಪೊಲೀಸರು ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದು ಪೊಲೀಸ್ ಹಿರಿಯ ಅಧಿಕಾರಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಬೈಕ್ ಕಳ್ಳತನವಾದ ಬಗ್ಗೆ ಬಂದ ದೂರಿನ ಬೆನ್ನಟ್ಟಿದ ಪೊಲೀಸ್ ತಂಡ ಪ್ರಕರಣ ಆರೋಪಿ ಮೂಲತಃ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸಧ್ಯ ಆಶ್ರಯ ಕಾಲೋನಿಯಲ್ಲಿ ವಾಸವಾಗಿದ್ದ ಸಿಕಂದರ ನಾಯ್ಕೋಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ಈತನಿಂದ ಒಂದು ಹೋಂಡಾ ಶೈನ್, ಒಂದು ಹೀರೋ ಹೋಂಡಾ ಸ್ಪೆಂಡ್ಲರ್ ಪ್ಲಸ್, ಒಂದು ಬಜಾಜ್ ಪ್ಲಾಟೀನಾ ಹೀಗೆ ಮೂರು ಬೈಕ್‌ಗಳು ಮತ್ತು ೫ಗ್ರಾಂ ತೂಕದ ಒಂದು ೦೭ ಪೀಸ್ ಬಂಗಾರದ ಸರ, ೫ಗ್ರಾಂ ತೂಕದ ಬಂಗಾರದ ನಾಣ್ಯ, ೨೫ಗ್ರಾಂ ತೂಕದ ಒಂದು ಚಪ್ಪಲಾರ, ಒಂದು ಜೊತೆ ಕಿವಿಯಲ್ಲಿನ ಜುಮಕಿ, ೫ಗ್ರಾಂ ತಾಳಿಯ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ತಂಡದಲ್ಲಿನ ಪೊಲೀಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್‌ಎಲ್ ಮನ್ನಾಬಾಯಿ ಹಾಗೂ…
ಸಿದ್ದಲಿಂಗ ಪೈನ್ ಆರ್ಟ್ ಸೋಸೈಟಿ & ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹರೋಗದಲ್ಲಿ ಅಂತರರಾಷ್ಟ್ರೀಯ ಮುದ್ರಣ ಕಲಾಕೃತಿಗಳ ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪುರಾತನ ಕಾಲದಲ್ಲಿದ್ದ ಮುದ್ರಣ ಕಲೆಯು ಹಲವಾರು ಮಾಧ್ಯಮಗಳಲ್ಲಿ ಪ್ರಚಲಿತವಿದ್ದು, ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು. ರಾಜಾ ರವಿವರ್ಮ ಲಿಥೋಗ್ರಾಫೀ ಮುಖಾಂತರ ಹಲವಾರು ದೇವತೆಗಳ ಕಲಾಕೃತಿಗಳನ್ನು ಮುದ್ರಣ ಮಾಡಿ ಎಲ್ಲ ಕಡೆ ತಲಪುವಂತೆ ಮಾಡಿದ್ದಾರೆ. ಪ್ರಸ್ತುತ ಮುದ್ರಣ ಕಲೆ ದೃಶ್ಯಕಲಾ ಕ್ಷೇತ್ರದಲ್ಲಿ ಎಚ್ಚಿಂಗ್, ಲಿಥೋಗ್ರಾಫೀ, ಸ್ಕ್ರೀನ್ ಪ್ರಿಂಟ್, ಉಡ್‌ಕಟ್ ಹೀಗೆ ಹಲವಾರು ಮಾಧ್ಯಮಗಳಲ್ಲಿ ಪ್ರಸಿದ್ದಿಯಾಗಿದೆ ಎಂದು ಹಿರಿಯ ಕಲಾವಿದ ಎಂ.ಎಸ್.ಹಳ್ಳಿ ಅಭಿಪ್ರಾಯಿಸಿದರು.ಇತ್ತೀಚೆಗೆ ನಗರದ ಸಿದ್ದಲಿಂಗ ಪೈನ್ ಆರ್ಟ್ ಸೋಸೈಟಿಯು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಧನಸಹಾಯದೊಂದಿಗೆ ಏರ್ಪಡಿಸಿದ ಅಂತರರಾಷ್ಟ್ರೀಯ ಮುದ್ರಣ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂಥ ಅಪರೂಪದ ಪ್ರದರ್ಶನ ವಿಜಯಪುರದ ಕಲಾಸಕ್ತರಿಗೆ ನೋಡಲು ಆಯೋಜನೆ ಮಾಡಿದ ಸಿದ್ದಲಿಂಗ ಫೈನ್ ಆರ್ಟ ಸೋಸೈಟಿ ಅಭಿನಂದನೆ ಎಂದು ಶ್ಲಾಘಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಹೂವಿನ ಹಿಪ್ಪರಗಿಯ ಚಿತ್ರಕಲಾ ಮಹಾವಿದ್ಯಾಲಯದ ನಿವೃತ್ತ ಪಾಚಾರ್ಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಸಹಾಯಹಸ್ತ ಚಾಚಿದ್ದು, ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದಾರೆ.ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಭಾಗ್ಯಶ್ರಿ ದೇವರ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆಯಲ್ಲಿ 49707 ರ್ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರ ಇನಸ್ಟಿಟ್ಯೂಟ್ ಆಫ್ ಸಾಯಿನ್ಸ್ ನಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾಳೆ. ಈ ವಿದ್ಯಾರ್ಥಿನಿಗೆ ಪೋಷಕರಿಗೆ ಸಂಸ್ಥೆಯ ವತಿಯಿಂದ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ವರ್ಷದ ಶೈಕ್ಷಣಿಕ ಶುಲ್ಕ, ಹಾಸ್ಟೆಲ್ ಮತ್ತು ಊಟದ ಖರ್ಚಿಗೆ ಅಗತ್ಯವಾಗಿರುವ ಪ್ರಥಮ ಕಂತಿನ ಹಣ ರೂ. 1 ಲಕ್ಷ 57 ಸಾವಿರದ 250 ಚೆಕ್ ನ್ನು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸೋಮವಾರ ವಿತರಿಸಿದರು. ವಿದ್ಯಾರ್ಥಿನಿಯ ತಂದೆ ಶಂಕರ ಮತ್ತು ತಾಯಿ ರಾಜೇಶ್ವರಿ ಅವರು ತಮ್ಮ ಮಗಳ ಪರವಾಗಿ ಚೆಕ್ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ವಿದ್ಯಾರ್ಥಿನಿ ಭವಿಷ್ಯದಲ್ಲಿ ಉತ್ತಮ ವೈದ್ಯೆಯಾಗಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಬಬಲೇಶ್ವರ ಗ್ರಾಮದ ಮಂಜುನಾಥ ದೊಡಮನಿ ಅವರಿಗೆ ಪುದುಚೆರಿ (ಪಾಂಡಿಚೇರಿ)ಯ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಲಾಗಿದೆ.ಇದರಿಂದ ಸಮಾಜ ಸೇವೆ ಮಾಡಲು ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಪದವಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಆಡಳಿತ ಮಂಡಳಿಗೆ ಮಂಜುನಾಥ ದೊಡಮನಿ ಹಾಗೂ ಅವರ ಆಪ್ತ ಬಳಗ ಕೃತಜ್ಞತೆ ಸಲ್ಲಿಸಿದೆ.
ತುಘಲಕ್ ದರ್ಬಾರಿನಂತೆ ವರ್ತಿಸುತ್ತಿರುವ ಹಣಕಾಸು ವಿಭಾಗ | ನೇಮಕಾತಿಗೆ ಹೊಸ ನಿಯಮ ಕಾಲದೂಡುವ ಉಪಾಯ | ಮಾಜಿ ಎಂಎಲ್ಸಿ ಅರುಣ ಶಹಾಪುರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರ ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸುವ ಕಾಲ ಇದೀಗ ಪಕ್ವವಾಗಿದೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ನಿವೃತ್ತಿಯ ಅಂಚಿನಲ್ಲಿದ್ದು, ಸರಕಾರದ ಯಾವುದೇ ವೇತನ ತೆಗೆದುಕೊಳ್ಳದೇ ನಿವೃತ್ತಿಯಾಗುವುದರಿಂದ ಅವರ ಕೌಟುಂಬಿಕ ಹಾಗೂ ಆರ್ಥಿಕ ಅಭದ್ರತೆಗೆ ಸರಕಾರವೇ ನೇರ ಹೊಣೆಯಾಗುತ್ತಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಬೇಸರ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಮಂಗಳವಾರ ಸಂಜೆ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೫ರ ನಂತರ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳಿಗಾಗಿ ಸರಕಾರವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹೊಸ ನಿಯಮ ಜಾರಿ ಮಾಡಿದ್ದು, ಆದರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕೇತರ ಸಿಬ್ಬಂದಿಯ ನೇಮಕಾತಿ ಇಲ್ಲ. ಅಲ್ಲದೇ ಗಣಕಯಂತ್ರದ ವ್ಯವಸ್ಥೆಯಿಲ್ಲ. ಆನ್‌ಲೈನ್ ಮಾಡಬೇಕಾದರೆ ಸಾಫ್ಟ್ವೇರ್ ಅಭಿವೃದ್ದಿ ಪಡಿಸಬೇಕು.…
ನ.13 ರಂದು ನಡೆಯುವ ಚನ್ನಪಟ್ಟಣ ಉಪ ಚುನಾವಣೆ | ಸಿಪಿವೈ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸುವ ವದಂತಿ ಮೈಸೂರು: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಖಾಡ ರಂಗೇರಿದೆ.ವಿಧಾನಪರಿಷತ್ ಸದಸ್ಯತ್ವಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ ಬಿಜೆಪಿಯ ಸಿ. ಪಿ. ಯೋಗೇಶ್ವರ್, ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾಂಗ್ರೆಸ್ ಸಿದ್ಧಾಂತ ಒಪ್ಪಿ, ಯಾರೇ ಬಂದರೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು, ಸಿ.ಪಿ. ಯೋಗೇಶ್ವರ್ ಅವರೊಂದಿಗೆ ನಾನು ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರು ಚನ್ನಪಟ್ಟಣ ವಲಯದವರಾಗಿದ್ದು, ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ. ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಅವರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.ಇನ್ನು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ. ಪಿ. ಯೋಗೇಶ್ವರ್, ಅದು ಸಿದ್ದರಾಮಯ್ಯ ಅವರ ದೊಡ್ಡಗುಣ. ಮುಖ್ಯಮಂತ್ರಿಗಳು ಹಾಗೆ ಮಾತಾಡಿದ್ದಾರೆ ಅಂದ್ರೆ ಸಂತೋಷವಾಗುತ್ತಿದೆ. ನಾನು ಹಿಂದೆ ಕಾಂಗ್ರೆಸ್ ನಲ್ಲೇ ಇದ್ದವನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಂಜೂರಾತಿ ಹಾಗೂ ಮಳೆಯಿಂದ ಬೆಳೆಹಾನಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಹಾಗೂ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಗೋವಿನ ಜೋಳ ಮುಂತಾದ ಬೆಳೆಗಳು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಅವುಗಳಿಗೆ ಸೂಕ್ತ ಬೆಳೆ ಪರಿಹಾರ ಒದಗಿಸಬೇಕು. ಡೋಣಿ ಹೂಳೆತ್ತಲು ರಾಜ್ಯ ಸರಕಾರದ ವಿಜಯಪುರ ಜಿಲ್ಲೆಯ ಇಬ್ಬರು ಸಚಿವರು ರಾಜ್ಯ ಸರಕಾರದಿಂದ ಡೋಣಿ ಹೂಳೆತ್ತಲು ತಮ್ಮ ಪಾಲಿನ ಅನುದಾನ ನೀಡಿದರೆ ಕೇಂದ್ರ ಸರಕಾರದಿಂದ ಬರುವ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಭಾಗದ ರೈತರ ಭೂಮಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಉಮೇಶ ಕೋಳಕೂರ, ಸಂಜಯಗೌಡ ಬಿ. ಪಾಟೀಲ ರಾಜ್ಯ ರೈತ ಕಾರ್ಯಕಾರಿಣಿ ಸದಸ್ಯರು, ವಿವೇಕಾನಂದ ಡಬ್ಬಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷರು, ಈರಣ್ಣ ರಾವೂರ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಮಹಾತ್ಮ ಗಾಂಧೀಜಿ ಪ್ರೌಢಶಾಲೆಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84ನೇ ಜಯಂತಿ ಕಾರ್ಯಕ್ರಮ ಜರುಗಿತುಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹೊನವಾಡ ಗ್ರಾಮದ ಪ್ರವಚನಕಾರ ಬಾಬುರಾವ್ ಮಹಾರಾಜರು, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸರಳತೆಯ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದರು. ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ನಾಡು ಪುಣ್ಯ ಭೂಮಿ. ಈ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು ಎಂದು ಹೇಳಿದರು.ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿ ನಾವು ಕನ್ನಡ ಮಣ್ಣಿನ ಋಣ ತೀರಿಸಬೇಕು. ಎಲ್ಲ ಭಾಷೆ ಕಲಿಯೋಣ ಅದು ಇಂದಿನ ದಿನಗಳಲ್ಲಿ ಅವಶ್ಯಕ. ಆದರೆ ಕನ್ನಡ ಭಾಷೆ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಧೃಡ ಸಂಕಲ್ಪ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬಾನಗರದ ಮಹಾತ್ಮ ಗಾಂಧೀಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಕ್ಕಳು ಬೆಳೆಯುತ್ತಾ ಹೋದಂತೆ ಮಾತಿನ ನಡುವೆ ತೊದಲುತ್ತಿದ್ದರೆ ಪೋಷಕರು ಇದನ್ನು ತಿದ್ದುವ ಪ್ರಯತ್ನ ಮಾಡಬೇಕು. ಇಲ್ಲವೇ ಅದಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವದು ಬಹಳ ಮುಖ್ಯವಾಗಿದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ಶರಣುಬಸು ಗುದ್ದಿ ಹೇಳಿದರು.ತಾಲೂಕಿನ ದಿಂಡವಾರ ಗ್ರಾಮದ ತಿಮ್ಮಾಪುರ ಬಡಾವಣೆಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ತೊದಲುವಿಕೆ ಅಭ್ಯಾಸವಾಗಿ ಬಿಟ್ಟರೆ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಾಕಷ್ಟು ಅವಮಾನಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಸಮಾಜವು ಆ ವ್ಯಕ್ತಿಗಳು ಮಾತನಾಡುವ ರೀತಿಗೆ ತಮಾಷೆ ಮಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ತೊದಲುವಿಕೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ೨೨ ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಶಾಲೆಯ ಮುಖ್ಯಗುರು ಮಹಿಬೂಬ ನದಾಫ ಮಾತನಾಡಿ, ತೊದಲುವಿಕೆಯಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಜನರನ್ನು ನಾವು ಸುತ್ತಮುತ್ತಲೂ ನೋಡುತ್ತೇವೆ.…
