ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಂಜೂರಾತಿ ಹಾಗೂ ಮಳೆಯಿಂದ ಬೆಳೆಹಾನಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಹಾಗೂ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಗೋವಿನ ಜೋಳ ಮುಂತಾದ ಬೆಳೆಗಳು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಅವುಗಳಿಗೆ ಸೂಕ್ತ ಬೆಳೆ ಪರಿಹಾರ ಒದಗಿಸಬೇಕು. ಡೋಣಿ ಹೂಳೆತ್ತಲು ರಾಜ್ಯ ಸರಕಾರದ ವಿಜಯಪುರ ಜಿಲ್ಲೆಯ ಇಬ್ಬರು ಸಚಿವರು ರಾಜ್ಯ ಸರಕಾರದಿಂದ ಡೋಣಿ ಹೂಳೆತ್ತಲು ತಮ್ಮ ಪಾಲಿನ ಅನುದಾನ ನೀಡಿದರೆ ಕೇಂದ್ರ ಸರಕಾರದಿಂದ ಬರುವ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಭಾಗದ ರೈತರ ಭೂಮಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಉಮೇಶ ಕೋಳಕೂರ, ಸಂಜಯಗೌಡ ಬಿ. ಪಾಟೀಲ ರಾಜ್ಯ ರೈತ ಕಾರ್ಯಕಾರಿಣಿ ಸದಸ್ಯರು, ವಿವೇಕಾನಂದ ಡಬ್ಬಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷರು, ಈರಣ್ಣ ರಾವೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ ಮಂಡಲ ಪ್ರ. ಕಾರ್ಯದರ್ಶಿ ಬಿಜೆಪಿ, ಗುರಣ್ಣ ಜಂಗಮಶೆಟ್ಟಿ, ಗುರಣ್ಣ ಬೂದಿಹಾಳ, ಕಲ್ಮೇಶ ಹಿರೇಮಠ, ರಮೇಶ ಜುಮನಾಳ, ಆನಮದ ಸೋಮಕ್ಕನವರ, ಸಿದ್ದುಗೌಡ ಬಿರಾದಾರ, ವಿಠ್ಠಲ ರಾಮತೀರ್ಥ, ಎಂ.ಟಿ. ಪಾಟೀಲ, ಶ್ರೀಶೈಲ ಕೊಟ್ಯಾಳ, ಸಂಗಪ್ಪ ಕೊಟ್ಯಾಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

