Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆಯಲ್ಲಿ ೧೯,೦೭,೫೮೩ ಗಣತಿ ನಮೂನೆ ವಿತರಣೆ

ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ

ಜು.೧೬ ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಲಾವಿದರಿಗೆ ತಾಳ್ಮೆ ಮತ್ತು ಶೃದ್ದೆ ಬಹು ಮುಖ್ಯ :ಎಂ.ಎಸ್.ಹಳ್ಳಿ
(ರಾಜ್ಯ ) ಜಿಲ್ಲೆ

ಕಲಾವಿದರಿಗೆ ತಾಳ್ಮೆ ಮತ್ತು ಶೃದ್ದೆ ಬಹು ಮುಖ್ಯ :ಎಂ.ಎಸ್.ಹಳ್ಳಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿದ್ದಲಿಂಗ ಪೈನ್ ಆರ್ಟ್ ಸೋಸೈಟಿ & ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹರೋಗದಲ್ಲಿ ಅಂತರರಾಷ್ಟ್ರೀಯ ಮುದ್ರಣ ಕಲಾಕೃತಿಗಳ ಪ್ರದರ್ಶನ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಪುರಾತನ ಕಾಲದಲ್ಲಿದ್ದ ಮುದ್ರಣ ಕಲೆಯು ಹಲವಾರು ಮಾಧ್ಯಮಗಳಲ್ಲಿ ಪ್ರಚಲಿತವಿದ್ದು, ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು. ರಾಜಾ ರವಿವರ್ಮ ಲಿಥೋಗ್ರಾಫೀ ಮುಖಾಂತರ ಹಲವಾರು ದೇವತೆಗಳ ಕಲಾಕೃತಿಗಳನ್ನು ಮುದ್ರಣ ಮಾಡಿ ಎಲ್ಲ ಕಡೆ ತಲಪುವಂತೆ ಮಾಡಿದ್ದಾರೆ. ಪ್ರಸ್ತುತ ಮುದ್ರಣ ಕಲೆ ದೃಶ್ಯಕಲಾ ಕ್ಷೇತ್ರದಲ್ಲಿ ಎಚ್ಚಿಂಗ್, ಲಿಥೋಗ್ರಾಫೀ, ಸ್ಕ್ರೀನ್ ಪ್ರಿಂಟ್, ಉಡ್‌ಕಟ್ ಹೀಗೆ ಹಲವಾರು ಮಾಧ್ಯಮಗಳಲ್ಲಿ ಪ್ರಸಿದ್ದಿಯಾಗಿದೆ ಎಂದು ಹಿರಿಯ ಕಲಾವಿದ ಎಂ.ಎಸ್.ಹಳ್ಳಿ ಅಭಿಪ್ರಾಯಿಸಿದರು.
ಇತ್ತೀಚೆಗೆ ನಗರದ ಸಿದ್ದಲಿಂಗ ಪೈನ್ ಆರ್ಟ್ ಸೋಸೈಟಿಯು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಧನಸಹಾಯದೊಂದಿಗೆ ಏರ್ಪಡಿಸಿದ ಅಂತರರಾಷ್ಟ್ರೀಯ ಮುದ್ರಣ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಥ ಅಪರೂಪದ ಪ್ರದರ್ಶನ ವಿಜಯಪುರದ ಕಲಾಸಕ್ತರಿಗೆ ನೋಡಲು ಆಯೋಜನೆ ಮಾಡಿದ ಸಿದ್ದಲಿಂಗ ಫೈನ್ ಆರ್ಟ ಸೋಸೈಟಿ ಅಭಿನಂದನೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹೂವಿನ ಹಿಪ್ಪರಗಿಯ ಚಿತ್ರಕಲಾ ಮಹಾವಿದ್ಯಾಲಯದ ನಿವೃತ್ತ ಪಾಚಾರ್ಯ ಎಸ್.ಎಸ್.ಬಿರಾದಾರ ಮಾತನಾಡಿ, ವಿಜಯಪುರದಲ್ಲಿ ಹಲವಾರು ಕಲಾವಿದರು ರಾಷ್ಟ್ರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಕಲಾವಿದರಿದ್ದಾರೆ. ಅವರಿಗೆ ಇಲಾಖೆಯ ಸಹಕಾರ ಸಿಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ಕಲಾವಿದರು ಇಲಾಖೆಯ ಸದುಪಯೋಗ ಪಡೆದು ಪ್ರದರ್ಶನ ಏರ್ಪಡಿಸಿ ಕಲೆ, ಸಾಹಿತ್ಯ, ಸಂಗೀತದಿಂದ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಬಹುದು ಎಂದರು.
ಜಮಖಂಡಿಯ ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಬಿ.ಜಿ.ಚೌಧರಿ ವೇದಿಕೆ ಮೇಲಿದ್ದರು.
ಸಿದ್ದಲಿಂಗ ಫೈನ್ ಆರ್ಟ್ ಸೋಸೈಟಿಯ ಕಾರ್ಯದರ್ಶಿ ಲಿಂಗರಾಜ ಕಾಚಾಪುರ ಸ್ವಾಗತಿಸಿ, ಪ್ರಾಸ್ಥಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಿ.ಎಸ್. ಕಡೆಮನಿ, ಎಸ್.ಟಿ. ಕೆಂಭಾವಿ, ವಿದ್ಯಾಧರ ಸಾಲಿ, ರಾಜೇಶ್ವರಿ ಮೋಪಗಾರ ಬಿ.ಎಸ್.ಪಾಟೀಲ, ಬಸವರಾಜ ಗವಿಮಠ, ಮುಷ್ತಾಕ್ ತಿಕೋಟಾ, ರುದ್ರೇಶ ಕುಂಬಾರ, ಪ್ರಶಾಂತ ಮನಗೂಳಿ, ಗಂಗಾಧರ ಮಾಯಾಚಾರಿ, ದ್ರಾಕ್ಷಾಯಣಿ ಇಮನಾದ, ಶಶಿಕಲಾ ಹೂಗಾರ, ಉಪಸ್ಥಿತರಿದ್ದರು.
ನಿರೂಪಣೆಯನ್ನು ಆನಂದ ಝಂಡೆ ನೆರವೇರಿಸಿದರು. ಕಲಾವಿದ ರಮೇಶ ಚವ್ಹಾಣ ವಂದಿಸಿದರು.

ಕಲಾಕೃತಿಗಳ ಪ್ರದರ್ಶನ

ಕಲಾಕೃತಿಗಳ ಪ್ರದರ್ಶನದಲ್ಲಿ ಅನ್ನಾ ರಾಡ್ಕೊ, ಪೋಲೆಂಡ್, ಅನುಪಮಾ ದೇ, ಭಾನು ಶ್ರೀವಾಸ್ತವ್, ಬಿಸ್ವಜೀತ್ ರಾಯ್, ಜೋತಿರ್ಮಯಿ ದಳಪತಿ, ಮೇಟಾಕೀನ್ ಬೈಕುಂಠ, ಥೈಲ್ಯಾಂಡ್, ರಾಹುಲ್ ಕರೀಂ ರೂಪಾಯಿ, ಬಾಂಗ್ಲಾದೇಶ, ಭಾರತದ ಕಲಾವಿದರಾದ ಸಂಜಯ ಕುಮಾರ ಯಾದವ್, ಶೈಲಿಕಾ ಶ್ರೀವಾಸ್ತವ, ಶಬ್ನಮ್ ಕರ್ಪಸಂದ್, ಸುನೀಲ್ ದರ್ಜಿ, ಸುನೈನಾ ಭಗತ್, ವಿನಯಕುಮಾರ ರುದ್ರಸ್ವಾಮಿಮಠ ಯೋಸುಫ್, ಜ್ಯೋತ್ಸ್ನಾ ಮಂಡಪಕ್, ಜೀನಾ ಗಿಗಿ, ಲೋನಿಸ್ ಮೊನೊಗ್ವಿಯಾಸ್, ಆಯೋಫೆ ಲೇಟನ್, ಪ್ರೀತಮ್ ದೇವುಸ್ಕರ್‌ಜೇಸನ್ ರೈಟ್ಟಮ್, ಬಾಬುರಾವ್ ಎಚ್ ಬಿ.ಎಸ್. ಪಾಟೀಲ್ ಎಚ್.ಎಂ.ವಿಶ್ವನಾಥ, ಶ್ರೀಶೈಲ ಹೂಗಾರ, ಸಮೀರ್ ರಾವ್, ಮುಸ್ತಾಕ್ ತಿಕೋಟ, ಮಲ್ಲು ಚಿಂಚೋಳಿ, ಅಯಾಜ್ ಪಟೇಲ್, ರಮೇಶ ಚವ್ಹಾಣ, ರುದ್ರೇಶ್ ಕುಂಬಾರ, ಗಿರಿಜಾ ಬಿರಾದಾರ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟವು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆಯಲ್ಲಿ ೧೯,೦೭,೫೮೩ ಗಣತಿ ನಮೂನೆ ವಿತರಣೆ

ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ

ಜು.೧೬ ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ

ಸಂಪೂರ್ಣ ನಿಷ್ಕ್ರೀಯವಾಗಿರುವ ಕಾಂಗ್ರೆಸ್ ಸರ್ಕಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆಯಲ್ಲಿ ೧೯,೦೭,೫೮೩ ಗಣತಿ ನಮೂನೆ ವಿತರಣೆ
    In (ರಾಜ್ಯ ) ಜಿಲ್ಲೆ
  • ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ
    In (ರಾಜ್ಯ ) ಜಿಲ್ಲೆ
  • ಜು.೧೬ ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ನಿಷ್ಕ್ರೀಯವಾಗಿರುವ ಕಾಂಗ್ರೆಸ್ ಸರ್ಕಾರ
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಗಳಿಗೆ ನೀರು ಬಿಡಲು ವಿಳಂಬ :ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ವಿಶಿಷ್ಟವಾಗಿ ಜರುಗಿದ ಪಂಡರಪುರ ಸೈಕಲ್ ವಾರಿ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಮೋಹನ್ ಬಾಗವತ್ ರನ್ನು ಬರಮಾಡಿಕೊಂಡ ಉಮೇಶ ಕಾರಜೋಳ
    In (ರಾಜ್ಯ ) ಜಿಲ್ಲೆ
  • ಲಲಿತಕಲೆಗಳಿಂದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ :ಡಾ.ರಂಜಿತಾ
    In (ರಾಜ್ಯ ) ಜಿಲ್ಲೆ
  • ಜೋಡಿ ಕೆರೆ ಅಭಿವೃದ್ಧಿಗೆ ವೇಗ: ಗುಣಮಟ್ಟದಲ್ಲಿ ರಾಜಿ ಇಲ್ಲ
    In (ರಾಜ್ಯ ) ಜಿಲ್ಲೆ
  • ಡಾ.ಶಾಂತಕುಮಾರ ಗೆ ಡಾ.ಕಯ್ಯಾರ ಪ್ರಶಸ್ತಿ ಗರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.