Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಸದಸ್ಯರಾಗಿ ನೇಮಕಗೊಂಡಿರುವ ವಿಜಯ ಕರ್ನಾಟಕ ಪತ್ರಿಕೆ ವಿಜಯಪುರ ಜಿಲ್ಲಾ ಹಿರಿಯ ವರದಿಗಾರ ಸಂಗಮೇಶ ಟಿ. ಚೂರಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಸದಸ್ಯರ ವಿಶೇಷ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮಾಧ್ಯಮ ಅಕಾಡೆಮಿಗೆ ನೇಮಕಗೊಂಡ ಸಂಘದ ಜಿಲ್ಲಾಧ್ಯಕ್ಷರೂ ಆಗಿರುವ ಸಂಗಮೇಶ ಟಿ. ಚೂರಿ ಅವರಿಗೆ ಸಂಘದ ಪರವಾಗಿ ಹಿರಿಯ ಪತ್ರಕರ್ತ ಹಾಗೂ ಸಲಹಾ ಸಮಿತಿ ಸದಸ್ಯರಾದ ವಾಸುದೇವ ಹೆರಕಲ್ ಅವರು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಗಮೇಶ ಚೂರಿ ಅವರು ತುಂಬಾ ಕ್ರಿಯಾಶೀಲರಾಗಿದ್ದು, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಸಂಘವನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ, ಗೌರವ ಸಿಗಲೆಂದು ಹಾರೈಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರಜ್ಞೆ ಮತ್ತು ಜ್ಞಾನವನ್ನು ಹೊರತರಲು ಅತ್ಯಂತ ಉಪಯುಕ್ತವಾಗುತ್ತವೆ ಎಂದು ಬಿ.ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ಡಾ. ಸತೀಶ ಜಿಗಜಿನ್ನಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೈ ನಿವರೇಳಿಸುವ ವಿಜ್ಞಾನ ಮತ್ತು ಭಾಷಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಲೆಗಳಲ್ಲಿ ಇಂಥ ಪ್ರದರ್ಶನಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳತ್ತ ಹೆಚ್ಚು ಆಸಕ್ತಿ ಬೆಳೆಸಲು ಅನುಕೂಲವಾಗುತ್ತದೆ. ಅಲ್ಲದೇ, ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ವಿಜ್ಞಾನಿಗಳಾಗಲು ಪ್ರೋತ್ಸಾಹ ನೀಡುತ್ತವೆ ಎಂದು ಅವರು ಹೇಳಿದರು.ಇಗ್ನೋ ಪ್ರಾದೇಶಿಕ ನಿರ್ದೇಶಕ ರವಿಕಾಂತ ಕೆ. ಮಾತನಾಡಿ, ವಸ್ತು ಪ್ರದರ್ಶನಗಳು ಮಕ್ಕಳನ್ನು ವಿಜ್ಞಾನದ ಬಗ್ಗೆ ಜ್ಞಾನ ಒದಗಿಸುತ್ತವೆ. ಅಲ್ಲದೇ, ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಸ್ಪೂರ್ತಿ ನೀಡುತ್ತವೆ ಎಂದು ತಿಳಿಸಿದರು.ಕಾರ್ಯ ಸಂಯೋಜಕ ಆಶೀಶ ಕುಲಕರ್ಣಿ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಮಾಡಿರುವ ಮಾದರಿಗಳು, ಅದ್ಭುತವಾಗಿವೆ. ಅವರಲ್ಲಿರುವ ಕ್ರಿಯಾಶೀಲತೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಜನತೆಗೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಭಾರತ ಕೊಟ್ಟ ಅತ್ಯಮೂಲ್ಯ ಕೊಡುಗೆ ಎಂದು ಆರ್‌ಎಸ್‌ಎಸ್ ನ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ ಹೇಳಿದರು.ರಾಮಾಯಣ ಮತ್ತು ಮಹಾಭಾರತ ಪುರಾಣದ ಕಥೆಗಳಲ್ಲ ಅವು ಇತಿಹಾಸ. ರಾಮ ಕಾಲ್ಪನಿಕ ಪುರುಷನಲ್ಲ ಐತಿಹಾಸಿಕ ಪುರುಷ ಎನ್ನುವದು ಇಂದು ವೈಜ್ಞಾನಿಕವಾಗಿ ಸಿದ್ಧವಾಗುತ್ತಿದೆ. ದೆಹೆಲಿಯ ಸಂಶೋಧನಾ ಸಂಸ್ಥೆಯೊಂದು ೩೫ ವರ್ಷಗಳಿಂದ ಸಂಶೋದನೆ ಮಾಡಿ ರಾಮನ ಇತಿಹಾಸದ ಕುರುಗಳನ್ನ ಗುರುತಿಸಿದ್ದಾರೆ. ಶ್ರೀರಾಮ ಲಂಕೆಗೆ ಹೋಗುವಾಗ ಸಮುದ್ರದ ಮಧ್ಯೆ ಸೇತುವೆ ನಿರ್ಮಿಸಿದ್ದೂ ಕೂಡ ಶೋಧನೆಯಿಂದ ಖಚಿತವಾಗಿದೆ ಈ ಎಲ್ಲವನ್ನೂ ಗಮನಿಸಿದಾಗ ರಾಮ ಕಾಲ್ಪನಿಕ ಪುರುಷನಲ್ಲ ಇತಿಹಾಸ ಪುರುಷ ಎಂದು ಖಚಿತವಾಗಿದೆ ಎಂದರು.ಸಂಘದ ಶಾಖೆಯಲ್ಲಿ ಪ್ರತಿನಿತ್ಯ ಶಾರೀರಿಕ ಕಾರ್ಯಕ್ರಮಗಳಾದ ಸೂರ್ಯ ನಮಸ್ಕಾರ, ಯೋಗ, ದಂಡಾಭ್ಯಾಸ ಹೇಳಿಕೊಟ್ಟು ಶರೀರ, ಮನಸ್ಸು, ಬುದ್ಧಿಗಳಿಗೆ ಸಂಸ್ಕಾರ ಕೊಡುವ ಮೂಲಕ ವ್ಯಕ್ತಿ ನಿರ್ಮಾಣದ ಕೆಲಸ ಮಾಡಲಾಗುತ್ತೆ. ಇದರಿಂದ ಸಮಾಜದಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರು.ಜಾತಿ, ಮತ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೊಳಗಾದ ರೈತರ ಅಹವಾಲು ಕೇಳಲು ರಾಜ್ಯ ಬಿಜೆಪಿ ವತಿಯಿಂದ ತಂಡ ರಚಿಸಲಾಗಿದೆ.ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಕಲ್ಮರುಡಪ್ಪ ತಂಡವು ಅ.೨೯ ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸಮೀಪವಿರುವ ನಗನೂರು ಗ್ರಾಮದ ರೈತ ದಂಪತಿ ಪದ್ಮಾವತಿ ಗಂಡ ಚಂದ್ರಶೇಖರ ಲಕ್ಕುಂಡಿ ಇವರ ಸುಪುತ್ರಿ ಕುಮಾರಿ ಶಿವಲೀಲಾ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಏಕೈಕ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಬೆಂಗಳೂರಲ್ಲಿ, 2018-19 ರಿಂದ 2023-24 ರವರೆಗೆ ಬ್ಯಾಚುಲರ್ ಆಫ್ ಹೋಮಿಯೋಪತಿ ವೈದ್ಯಕೀಯ ಶಿಕ್ಷಣ ಪೂರೈಸಿದ ಗ್ರಾಮೀಣ ಪ್ರತಿಭೆ.ಇತ್ತೀಚೆಗೆ ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಲ್ಲಿ, ಹೋಮಿಯೋಪತಿ ರಾಷ್ಟ್ರೀಯ ಆಯೋಗ ನವದೆಹಲಿ, ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಮತ್ತು ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಜರುಗಿದ 34‌ ನೇ ಪದವಿ ಪ್ರಧಾನ ಸಮಾರಂಭದಲ್ಲಿ, ಡಾ ಶೈಲೇಂದ್ರ ಜಿ ಬೆಲ್ದಾಳೆ ಶಾಸಕರು ದಕ್ಷಿಣ ಮತಕ್ಷೇತ್ರ ಬೀದರ್. ಡಾ ರಿಯಾಜ್ ಬಾಷ, ಕುಲಸಚಿವರು ಮೌಲ್ಯ ಮಾಪನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು. ಡಾ ಎ ಬಿ ಪಾಟೀಲ್ ನಿವೃತ್ತ ನಿರ್ದೇಶಕರು ಆಯುಷ್ ಇಲಾಖೆ ಬೆಂಗಳೂರು, ಡಾ ವಿ ಗುರುಪ್ರಸಾದ್ ನಿವೃತ್ತ…

Read More

– ನಳಿನಾ ದ್ವಾರಕಾನಾಥ್ ಉದಯರಶ್ಮಿ ದಿನಪತ್ರಿಕೆ ಜೀವಜೀವಗಳು ಬೆಸೆವ ಮಧುರ ಮಿಲನವುಹೃದಯವೇ ಸುಮಧುರ ಸುಂದರ ತಾಣವುಮಧುರವಾಗಿದೆ ರಸಮಯ ಒಲವಗಾನವುಚೆಲುವಿನ ಒಲವಿನ ಸುಂದರವಾದ ಕ್ಷಣವು ಜೀವಗಳ ಭಾವದಲ್ಲಿದೇ ಸುಮಧುರ ಚೇತನಹೊಸತನದಿ ಹೊಮ್ಮಿ ಬಂದಿದೆ ನಲಿವಮನಅಂತರಂಗವು ಹೇಳ ಬಯಸಿದೆ ಮಧುವನಅದುವೇ ಇಂಪಾದ ಪ್ರೀತಿಯ ಮಧುರಗಾನ ಚೆಂದದ ಚೆಲುವಿನಲಿ ಮೂಡಿದೆ ಅನುರಾಗಮನಗಳೆರಡು ಬೆರೆತು ತಂದಿದೆ ಶುಭಯೋಗಮನಮನ ಸ್ಪಂದಿಸುತಾ ಹಾಡಿವೆ ಹೊಸರಾಗತೋರಿವೆ ಒಲವಿನ ಸುಂದರ ಪ್ರೇಮಾನುರಾಗ

Read More

ಲೇಖನ – ಡಾ. ರಾಜಶೇಖರ ನಾಗೂರ ಉದಯರಶ್ಮಿ ದಿನಪತ್ರಿಕೆ ಜವಾಬ್ದಾರಿ ಎನ್ನುವುದು ಚಿಕ್ಕ ಪದ ಆದರೆ ಸಾಗರರದಷ್ಟು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಜವಾಬ್ದಾರಿ ಎಲ್ಲರಿಂದ ಸಾಧ್ಯವೂ ಇಲ್ಲಾ. ಸಮಾಜವಿರಲಿ, ರಾಜಕೀಯವಿರಲಿ, ಕುಟುಂಬವಿರಲಿ, ಗುಂಪುಗಳಲ್ಲಿ ಜವಾಬ್ದಾರಿ ಹೊರುವವ ಮಾತ್ರ ನಾಯಕನಾಗಲು ಸಾಧ್ಯ. ಜಪಾನ್ ದೇಶದಲ್ಲಿ ಸಾಗರ/ಸಮುದ್ರದ ಹಬ್ಬ ಎಂದು ಆಚರಿಸುವ ರೂಢಿ ಇದೆ. ಆ ದಿನ ಸಾಗರದ ದಡದಲ್ಲಿರುವ ಊರಿನವರು ಸಾಗರದ ಹತ್ತಿರ ಬಂದು ಸಾಗರದ ಮರಳಿನಲ್ಲಿ ಉಂಡು, ತಿಂದು, ನಲಿದು ದೇವರ ಆರಾಧನೆ ಮಾಡಿ ಮನೆಗೆ ಮರಳುವುದು. ಜಪಾನಿನ ಸಾಗರದ ದಡವೊಂದರ ಹತ್ತಿರವಿರುವ ಎತ್ತರದ ಬೆಟ್ಟದ ಮೇಲೆ ನೂರಾರು ಮನೆಗಳಿರುವ ಊರೊಂದಿತ್ತು. ಆ ಸಾಗರದ ಹಬ್ಬವನ್ನು ಆಚರಿಸಲು ಆ ಊರಿನ ಎಲ್ಲ ಮಕ್ಕಳು, ಹಿರಿಯರು, ಕಿರಿಯರು ಆ ಬೆಟ್ಟದ ಮೇಲಿಂದ ಕೆಳಗಿಳಿದು ಹತ್ತಿರದ ಸಾಗರದ ಮರಳಿನ ಮೇಲೆ ಬಂದಿಳಿದು, ನಕ್ಕು-ನಲಿದು ಹಬ್ಬವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಚರಿಸತೊಡಗಿದ್ದರು. ಈ ಹಬ್ಬದ ದಿನದಂದು ಎಲ್ಲರೂ ಕೆಳಗಡೆ ಬಂದಾಗ ಆ ಊರಿನ ಮನೆಗಳನ್ನು ಕಾಯುವವರು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಇಸ್ರೇಲ್ ಹಾಗೂ ಇರಾಕ್ ಎರಡು ದೇಶದ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮದಿಂದ ಹವಾಮಾನ ವೈಪರೀತ್ಯ ಉಂಟಾಗಿ ವಿಶ್ವದ ಅನೇಕ ದೇಶಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ ಎಂದು ಕಾಲಜ್ಞಾನ ಬ್ರಹ್ಮ ಡಾ.ಶರಣಬಸವ ಮಹಾಸ್ವಾಮಿಗಳು ತಳ್ಳಿಹಾಳ ಕೋಡಿಮಠ ಗಜೇಂದ್ರಗಡ ಹೇಳಿದರು.ನಾಡು ಸಂಚಾರ ಪ್ರಯುಕ್ತ ಭಕ್ತರ ತಿಂಗಳ ಬೇಟಿ ಕಾರ್ಯಕ್ರಮದ ನಿಮಿತ್ಯ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಗದ್ಗುರು ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಸಂಘದವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕಾರ್ತೀಕ ಮಾಸದ ಕಾಲಜ್ಞಾನವನ್ನು ನುಡಿದ ಅವರು ಈ ತಿಂಗಳಿನಲ್ಲಿ ಮಕ್ಕಳಿಗೆ ಯುವಕರಿಗೆ ಶೀತಭಾದೆ ಚಳಿಜ್ವರದಂತಹ ರೋಗವು ವ್ಯಾಪಕವಾಗಿ ಹರಡುವದು ಸ್ವಾಮಿಗಳಿಗೆ ಕಂಟಕ ಬರುವುದು ಎಂದ ಅವರು ಇದರಿಂದ ಭಾರತ ದೇಶದ ಜನರಿಗೆ ಅಷ್ಟೇನು ಮಾರಕವಲ್ಲ ರಾಜಕೀಯದಲ್ಲಿ ಸ್ಥಾನಪಲ್ಲಟ ಏರಿಳಿತವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ರಾಜಶೇಖರಯ್ಯ ಹಿರೇಮಠ, ಗುರುಸಿದ್ದಯ್ಯ ಪರಡಿಮಠ, ರುದ್ರಯ್ಯ ಮಠಪತಿ, ವಿದ್ಯಾಧರ ದೇಸಾಯಿ, ಬಸಯ್ಯ ಗಣಾಚಾರಿ, ಈರಯ್ಯ ಗಣಕುಮಾರ ಹಾಗೂ ಬ್ಯಾಂಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Read More

ಚಿಮ್ಮಡ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ | ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಶರವೇಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಕ್ರೀಢೆ ಕಬ್ಬಡ್ಡಿಯಲ್ಲಿ ತರಬೇತಿ ಪಡೆಯುತ್ತಿರುವ ಗ್ರಾಮೀಣ ಭಾಗದ ಕ್ರೀಢಾ ಪಟುಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಬಾಗಲಕೋಟ ಜಿಲ್ಲಾ ಅಮೇಚೂರ ಅಧ್ಯಕ್ಷರಾದ ಶಾಸಣ್ಣ ಕುಬಕಡ್ಡಿ ಹೇಳಿದರು.ಇಲ್ಲಿನ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶನಿವಾರ ಓಂ ಪ್ರಭುಲಿಂಗೇಶ್ವರ ನ್ಯೂ ಕಬ್ಬಡ್ಡಿ ತಂಡ ಹಾಗೂ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಅಮೇಚೋರ ಅಸೋಶಿಯೇಷನ್ ಸಂಯುಕ್ತ ಆಶೃಯದಲ್ಲಿ ಹಮ್ಮಿಕೊಂಡಿದ್ದ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಂದು ಉಪ ವಿಭಾಗ ಮಟ್ಟದಲ್ಲಿ ೭೦ಕ್ಕೂ ಅಧಿಕ ತಂಡಗಳಿದ್ದು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಇಂತಹ ಚಾಂಪಿಯನ್ ಟ್ರೋಫಿಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುವ ಮೂಲಕ ಅವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ ಎಂದರು.ಬಾಗಲಕೋಟ ಜಿಲ್ಲಾ ಅಮೇಚೋರ ಅಸೋಶಿಯೇಷನ್ ಕಾರ್ಯದರ್ಶೀ ಮಹಾಂತೇಶ ಮುಕ್ಕನ್ನವರ ಮಾತನಾಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮಕ್ಕೆ ಅತಿ…

Read More