– ನಳಿನಾ ದ್ವಾರಕಾನಾಥ್
ಉದಯರಶ್ಮಿ ದಿನಪತ್ರಿಕೆ
ಜೀವಜೀವಗಳು ಬೆಸೆವ ಮಧುರ ಮಿಲನವು
ಹೃದಯವೇ ಸುಮಧುರ ಸುಂದರ ತಾಣವು
ಮಧುರವಾಗಿದೆ ರಸಮಯ ಒಲವಗಾನವು
ಚೆಲುವಿನ ಒಲವಿನ ಸುಂದರವಾದ ಕ್ಷಣವು
ಜೀವಗಳ ಭಾವದಲ್ಲಿದೇ ಸುಮಧುರ ಚೇತನ
ಹೊಸತನದಿ ಹೊಮ್ಮಿ ಬಂದಿದೆ ನಲಿವಮನ
ಅಂತರಂಗವು ಹೇಳ ಬಯಸಿದೆ ಮಧುವನ
ಅದುವೇ ಇಂಪಾದ ಪ್ರೀತಿಯ ಮಧುರಗಾನ
ಚೆಂದದ ಚೆಲುವಿನಲಿ ಮೂಡಿದೆ ಅನುರಾಗ
ಮನಗಳೆರಡು ಬೆರೆತು ತಂದಿದೆ ಶುಭಯೋಗ
ಮನಮನ ಸ್ಪಂದಿಸುತಾ ಹಾಡಿವೆ ಹೊಸರಾಗ
ತೋರಿವೆ ಒಲವಿನ ಸುಂದರ ಪ್ರೇಮಾನುರಾಗ