ಚಿಮ್ಮಡ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ | ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಶರವೇಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಕ್ರೀಢೆ ಕಬ್ಬಡ್ಡಿಯಲ್ಲಿ ತರಬೇತಿ ಪಡೆಯುತ್ತಿರುವ ಗ್ರಾಮೀಣ ಭಾಗದ ಕ್ರೀಢಾ ಪಟುಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಬಾಗಲಕೋಟ ಜಿಲ್ಲಾ ಅಮೇಚೂರ ಅಧ್ಯಕ್ಷರಾದ ಶಾಸಣ್ಣ ಕುಬಕಡ್ಡಿ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶನಿವಾರ ಓಂ ಪ್ರಭುಲಿಂಗೇಶ್ವರ ನ್ಯೂ ಕಬ್ಬಡ್ಡಿ ತಂಡ ಹಾಗೂ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಅಮೇಚೋರ ಅಸೋಶಿಯೇಷನ್ ಸಂಯುಕ್ತ ಆಶೃಯದಲ್ಲಿ ಹಮ್ಮಿಕೊಂಡಿದ್ದ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಂದು ಉಪ ವಿಭಾಗ ಮಟ್ಟದಲ್ಲಿ ೭೦ಕ್ಕೂ ಅಧಿಕ ತಂಡಗಳಿದ್ದು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಇಂತಹ ಚಾಂಪಿಯನ್ ಟ್ರೋಫಿಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುವ ಮೂಲಕ ಅವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ ಎಂದರು.
ಬಾಗಲಕೋಟ ಜಿಲ್ಲಾ ಅಮೇಚೋರ ಅಸೋಶಿಯೇಷನ್ ಕಾರ್ಯದರ್ಶೀ ಮಹಾಂತೇಶ ಮುಕ್ಕನ್ನವರ ಮಾತನಾಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮಕ್ಕೆ ಅತಿ ಹೆಚ್ಚು ತಂಡಗಳು ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಜಿಲ್ಲೆಯ ತಂಡಗಳನ್ನು ಪಂದ್ಯಾವಳಿಯ ಸಮಯದಲ್ಲಿಯೇ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭು ನೇಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೆಫರಿ ಬೋರ್ಡ ಅಧ್ಯಕ್ಷ ಎಸ್.ಎಫ್. ಬಾರಡ್ಡಿ, ಪ್ರಮುಖರಾದ ಉಮೇಶ ಪೂಜಾರಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ರಬಕವಿ-ಬನಹಟ್ಟಿ ತಾಲೂಕಾ ಮೇಲ್ವಿಚಾರಕ ಆರ್.ವೈ. ಮೇತ್ರಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಲಿಂಗ ಮಾಯನ್ನವರ, ಬಾಳಪ್ಪಾ ಗಡೆಪ್ಪನವರ, ಮಹಾಲಿಂಗ ಬಳಗಾರ, ಪ್ರಭು ಮುದೋಳ, ಶ್ರೀಶೈಲ ಮಠಪತಿ, ಕೇಶವ ವಂದಾಲ, ಓಂ ಪ್ರಭುಲಿಂಗೇಶ್ವರ ನ್ಯೂ ಕಬ್ಬಡ್ಡಿ ತಂಡದ ಕ್ರೀಢಾಪಟುಗಳು ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಭೂಮಿಕಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮುತ್ತು ಢವಳೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

