ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಜನತೆಗೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಭಾರತ ಕೊಟ್ಟ ಅತ್ಯಮೂಲ್ಯ ಕೊಡುಗೆ ಎಂದು ಆರ್‌ಎಸ್‌ಎಸ್ ನ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ ಹೇಳಿದರು.
ರಾಮಾಯಣ ಮತ್ತು ಮಹಾಭಾರತ ಪುರಾಣದ ಕಥೆಗಳಲ್ಲ ಅವು ಇತಿಹಾಸ. ರಾಮ ಕಾಲ್ಪನಿಕ ಪುರುಷನಲ್ಲ ಐತಿಹಾಸಿಕ ಪುರುಷ ಎನ್ನುವದು ಇಂದು ವೈಜ್ಞಾನಿಕವಾಗಿ ಸಿದ್ಧವಾಗುತ್ತಿದೆ. ದೆಹೆಲಿಯ ಸಂಶೋಧನಾ ಸಂಸ್ಥೆಯೊಂದು ೩೫ ವರ್ಷಗಳಿಂದ ಸಂಶೋದನೆ ಮಾಡಿ ರಾಮನ ಇತಿಹಾಸದ ಕುರುಗಳನ್ನ ಗುರುತಿಸಿದ್ದಾರೆ. ಶ್ರೀರಾಮ ಲಂಕೆಗೆ ಹೋಗುವಾಗ ಸಮುದ್ರದ ಮಧ್ಯೆ ಸೇತುವೆ ನಿರ್ಮಿಸಿದ್ದೂ ಕೂಡ ಶೋಧನೆಯಿಂದ ಖಚಿತವಾಗಿದೆ ಈ ಎಲ್ಲವನ್ನೂ ಗಮನಿಸಿದಾಗ ರಾಮ ಕಾಲ್ಪನಿಕ ಪುರುಷನಲ್ಲ ಇತಿಹಾಸ ಪುರುಷ ಎಂದು ಖಚಿತವಾಗಿದೆ ಎಂದರು.
ಸಂಘದ ಶಾಖೆಯಲ್ಲಿ ಪ್ರತಿನಿತ್ಯ ಶಾರೀರಿಕ ಕಾರ್ಯಕ್ರಮಗಳಾದ ಸೂರ್ಯ ನಮಸ್ಕಾರ, ಯೋಗ, ದಂಡಾಭ್ಯಾಸ ಹೇಳಿಕೊಟ್ಟು ಶರೀರ, ಮನಸ್ಸು, ಬುದ್ಧಿಗಳಿಗೆ ಸಂಸ್ಕಾರ ಕೊಡುವ ಮೂಲಕ ವ್ಯಕ್ತಿ ನಿರ್ಮಾಣದ ಕೆಲಸ ಮಾಡಲಾಗುತ್ತೆ. ಇದರಿಂದ ಸಮಾಜದಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರು.
ಜಾತಿ, ಮತ, ಪಂಥ ಎಲ್ಲವನ್ನೂ ಬಿಟ್ಟು ನಾವೆಲ್ಲರೂ ಭಾರತ ಮಾತೆಯ ಪುತ್ರರು ಒಂದಾಗಿ ಬರಬೇಕು, ಹಿಂದೂ ಸಮಾಜ ಸಂಘಟಿತವಾಗಬೇಕೆನ್ನುವ ದೃಷ್ಟಿಯಿಂದ ಸಂಘವನ್ನ ಸ್ಥಾಪಿಸಲಾಯಿತು. ಹಿಂದೆ ಯಾರೂ ಕೂಡ ತಮ್ಮನ್ನು ತಾವು ಹಿಂದೂಗಳೆಂದು ಹೇಳಿಕೊಂಡು ಮುಂದೆ ಬರುತ್ತಿರಲಿಲ್ಲ. ಮುಜೆ ಗಧಾ ಕಹೋ ಹಿಂದೂ ಮತ್ ಕಹೋ ಎಂದು ಅನೇಕ ಪ್ರಮುಖರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೇವಲ ೧೫ ಯುವರಿಂದ ಶುರುವಾದ ಶಾಖೆ ಪ್ರಬಲವಾಗಿ ಬೆಳೆಯುತ್ತಿತ್ತು. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದವರೂ ಸಂಘವನ್ನು ತುಳಿಯುವ ಪ್ರಯುತ್ನ ಮಡಿತ್ತು. ಅದೆಲ್ಲವಿರೋಧವನ್ನೂ ಎದುರಿಸಿದ ಪರಿಣಾಮ ಇಂದು ಪ್ರತೀ ಊರಲ್ಲೂ ಗರ್ವಸದಿಂದ ಹೇಳು ನಾನೊಬ್ಬ ಹಿಂದೂ ಎನ್ನುವ ಫ್ಲೆಕ್ಸ್ಗಳು ಕಾಣುತ್ತಿವೆ ಎಂದರು.
ಗಣ್ಯ ವ್ಯಾಪಾರಸ್ಥ ಬಸವರಾಜ ಮೋಟಗಿ ಮುಖ್ಯ ಅತಿಥಿಯಾಗಿದ್ದರು.
ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ, ಪ್ರಭು ಕಡಿ, ಕಸಾಪ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ, ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಸಂಘದ ತಾಲೂಕು ಕಾರ್ಯವಾಹ ಚೇತನ ಮೂಗನೂರ, ನಗರ ಕಾರ್ಯವಾಹ ಪ್ರಭು ನಂದೆಪ್ಪನವರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

