ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸಮೀಪವಿರುವ ನಗನೂರು ಗ್ರಾಮದ ರೈತ ದಂಪತಿ ಪದ್ಮಾವತಿ ಗಂಡ ಚಂದ್ರಶೇಖರ ಲಕ್ಕುಂಡಿ ಇವರ ಸುಪುತ್ರಿ ಕುಮಾರಿ ಶಿವಲೀಲಾ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಏಕೈಕ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಬೆಂಗಳೂರಲ್ಲಿ, 2018-19 ರಿಂದ 2023-24 ರವರೆಗೆ ಬ್ಯಾಚುಲರ್ ಆಫ್ ಹೋಮಿಯೋಪತಿ ವೈದ್ಯಕೀಯ ಶಿಕ್ಷಣ ಪೂರೈಸಿದ ಗ್ರಾಮೀಣ ಪ್ರತಿಭೆ.
ಇತ್ತೀಚೆಗೆ ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಲ್ಲಿ, ಹೋಮಿಯೋಪತಿ ರಾಷ್ಟ್ರೀಯ ಆಯೋಗ ನವದೆಹಲಿ, ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಮತ್ತು ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಜರುಗಿದ 34 ನೇ ಪದವಿ ಪ್ರಧಾನ ಸಮಾರಂಭದಲ್ಲಿ, ಡಾ ಶೈಲೇಂದ್ರ ಜಿ ಬೆಲ್ದಾಳೆ ಶಾಸಕರು ದಕ್ಷಿಣ ಮತಕ್ಷೇತ್ರ ಬೀದರ್. ಡಾ ರಿಯಾಜ್ ಬಾಷ, ಕುಲಸಚಿವರು ಮೌಲ್ಯ ಮಾಪನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು. ಡಾ ಎ ಬಿ ಪಾಟೀಲ್ ನಿವೃತ್ತ ನಿರ್ದೇಶಕರು ಆಯುಷ್ ಇಲಾಖೆ ಬೆಂಗಳೂರು, ಡಾ ವಿ ಗುರುಪ್ರಸಾದ್ ನಿವೃತ್ತ ಪ್ರಾಚಾರ್ಯರು ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬೆಂಗಳೂರು, ಡಾ ರಾಜೇಶ್ವರಿ ಕೆ ಪ್ರಾಚಾರ್ಯರು ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬೆಂಗಳೂರು ಇವರಿಂದ ‘ಡಾಕ್ಟರ್’ ಪದವಿ ಪಡೆದರು. ಸೋದರ ಮಾಮ ಡಾ ಯಂಕನಗೌಡ ಪಾಟೀಲ್, ತಾಯಿ ಪದ್ಮಾವತಿ, ತಮ್ಮ ಶಿವಶರಣ, ಗೆಳತಿ ರೇಣುಕಾ, ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿ ಸಂಭ್ರಮಿಸಿ, ಶುಭಹಾರೈಸಿದರು.

