Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ವಿಜಯಪುರ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರ ಕಾರ್ಯ ಅನನ್ಯವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಹಾಗೂ ನಗರ ವಲಯ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪಾಠ ಬೊಧನೆ ಮಾಡುವ ಮೂಲಕ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ಅಂತರಾಳವನ್ನು ಅರಿತು, ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ…
ವಿಜಯಪುರ: ಗಾಣಿಗ ಗುರುಪೀಠದ ಜಯದೇವ ಜಗದ್ಗುರುಗಳ ಜಯಂತಿ, ನೂತನ ಕರ್ತೃ ಗದ್ದುಗೆ ಉದ್ಘಾಟನೆ, ಪ್ರತಿಭಾ ಪುರಸ್ಕಾರವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಮತ್ತು ಶ್ರೀ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ, ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ 02-10-2024 ರಂದು ವನಶ್ರೀ ಸಂಸ್ಥಾನಮಠ ಗಾಣಿಗ ಗುರುಪೀಠದ ಜಯದೇವ ಜಗದ್ಗುರುಗಳ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಇದೇ ವೇಳೆ ಪೂಜ್ಯರ ಕರ್ತೃ ಗದ್ದುಗೆಯ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಜಿ.ಪಂ ಬಳಿಯ ವನಶ್ರೀ ಮಠದಲ್ಲಿ ಆಚರಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘದ ಅಧ್ಯಕ್ಷ ಬಿ.ಬಿ.ಪಾಸೋಡಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ 2023-24ನೇ ಸಾಲಿನ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿ/ನಿಯರಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ಪ್ರೋತ್ಸಾಹ ಧನದೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಕಾರಣ…
ವಿಜಯಪುರ: ಮಕ್ಕಳಲ್ಲಿ ಕಂಡುಬರುತ್ತಿರುವ ಪೌಷ್ಟಿಕತೆಯ ಕೊರತೆ ಕುರಿತು ಪಾಲಕರಲ್ಲಿ ಅರಿವು ಮೂಡಿಸುವದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಗರಗಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ. ವ್ಹಿ. ಎಸ್ ಆಯುರ್ವೇದ ಮಹಾವಿದ್ಯಾಲಯ ಕೌಮಾರಭೃತ್ಯ ವಿಭಾಗದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ದಿ ಸಹಯೊಗದಲ್ಲಿ ಶಿಶು ಅಭಿವೃದ್ದಿ ಯೋಜನೆ ಅಂಗವಾಗಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಮತ್ತು ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಹಾಗೂ ಮಕ್ಕಳ ಆರೊಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಉಂಟಾಗುತ್ತಿದೆ. ಈ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳ ಮೂಲಕ ಹಾಗೂ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜನಸಾಮಾನ್ಯರಲ್ಲಿ ಆಯುರ್ವೆದಿಯ ಪೋಷಣಮುಕ್ತ ಆಹಾರ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನಿಯ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಮಕ್ಕಳ…
ವಿಜಯಪುರ: ಗಣೇಶೋತ್ಸವ ಪ್ರಸಾದಕ್ಕೆ ಎಫ್.ಎಸ್.ಎಸ್.ಎ.ಐ ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ ಪಡೆಯಬೇಕೆಂಬ ನಿಯಮಾವಳಿ ಅವೈಜ್ಞಾನಿಕ ಹಾಗೂ ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ರಾಜ್ಯದ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದಲ್ಲಿ, ಇದೇ ನಿಯಮವನ್ನು ಹೋಟೆಲ್, ಡಾಬಾ ಹಾಗೂ ಹಲಾಲ್ ಮಾಂಸವನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೂ ಅನ್ವಯ ಆಗಬೇಕಾಗಿತ್ತು.ಇನ್ನೇನು, ಹಬ್ಬಕ್ಕೆ ಎರಡು ದಿನಗಳು ಇರಬೇಕಾದರೆ ಪಾಲಿಸಲಾಗದ ನಿಯಮವನ್ನು ಹೇರುವುದು ಸರ್ಕಾರದ ಹಿಂದೂ ವಿರೋಧಿ ನೀತಿ ತೋರಿಸುತ್ತದೆ. ಅನ್ಯಕೋಮಿನ ಹಬ್ಬಗಳಲ್ಲಿ ಬೀದಿ ಬೀದಿಯಲ್ಲಿ ಪ್ರಾಣಿಬಲಿ ನೀಡಿ, ಅದರಿಂದ ಮಾಂಸ ಮಾರಾಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ?ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ತಯಾರು ಮಾಡಬೇಕಾದರೆ ಎಫ್.ಎಸ್.ಎಸ್.ಎ.ಎಲ್ ಪರವಾನಗಿ ಪಡೆದವರಿಂದ ಸರ್ಕಾರ ಮಾಡಿಸುತ್ತಿದೆಯಾ? ಬೀದಿ, ಬೀದಿಗಳಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಉಪಯೋಗಿಸಿ ತಿಂಡಿ/ಊಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ?…
ಮುದ್ದೇಬಿಹಾಳ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಹಿರಂಗ ಸಭೆಗಳಿಗೆ ಬ್ರಿಟೀಷರು ಕಡಿವಾಣ ಹಾಕಿದ್ದರಿಂದ, ಸಂಘಟಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಗಣೇಶ ಪ್ರತಿಷ್ಠಾಪನೆಯ ಹಬ್ಬ ಬರಬರುತ್ತ ಕಳೆ ಕಳೆದುಕೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಅಂಗವಾಗಿ ಏರ್ಪಡಿಸಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ಗಣಪನ ಹಬ್ಬ ಇಂದು ಕಳೆ ಕಳೆದುಕೊಳ್ಳುತ್ತಿದೆ. ಪೊಲೀಸರು ಶಾಂತಿ ಸಭೆ ನಡೆಸೋವಷ್ಟು ನಾವು ಹಬ್ಬವನ್ನು ಹಾಳು ಮಾಡಿದ್ದೇವೆ. ಬಹಿರಂಗ ಪ್ರತಿಷ್ಠಾಪನೆ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು, ಮಧ್ಯ ಸೇರಿದಂತೆ ಇನ್ನೀತರ ಅಮಲಿನಲ್ಲಿ ಕುಣಿಯುವುದು ಮಾಡುತ್ತಿದ್ದೇವೆ. ಇದೆಲ್ಲವನ್ನೂ ಈ ವರ್ಷದಿಂದಲೇ ಕೊನೆಗೊಳಿಸಿ ಶ್ರದ್ಧಾ ಭಕ್ತಿಯಿಂದ, ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸೋಣ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ, ನಿಯಮಗಳನ್ನು ಪಾಲಿಸಿ ಶಾಂತಿ ಮತ್ತು ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸಿ ಎಂದರು.ಪಿಎಸ್‌ಐ ಸಂಜಿವ ತಿಪರೆಡ್ಡಿ ಮಾತನಾಡಿ, ಹಬ್ಬದಲ್ಲಿ ಯಾರಾದರೂ ದಾಂಧಲೆ ಮಾಡುವದು ಕಂಡು ಬಂದರೆ ಅಂಥವರ ಮೇಲೆ ಮುಲಾಜಿಲ್ಲದೇ…
ವಿಜಯಪುರ: ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಮಾನವೀಯ ಮೌಲ್ಯ ಪಡೆದ ಮಕ್ಕಳು ಜಗದ್ವಿಖ್ಯಾತರಾಗಲು ಸಾಧ್ಯವಾಗುತ್ತದೆ ಎಂದು ಚಿತ್ತರಗಿಯ ಶಿವಯೋಗ ಮತ್ತು ನಿಸರ್ಗ ಚಿಕಿತ್ಸೆ ಕೇಂದ್ರದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ನೇತೃತ್ವದಲ್ಲಿ ಗುರುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇಶದಲ್ಲಿ ದೊಡ್ಡ ಗೌರವ ಸೀಗುವುದು ಶಿಕ್ಷಕರಿಗೆ ಮಾತ್ರ, ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುದು ಜಾಗೃತಿ ಮಾಡುವವರು ಶಿಕ್ಷಕರು, ವಿದ್ಯೆ ಬಹುದೊಡ್ಡ ಸಂಪತ್ತು, ಅದನ್ನು ಗುರುಗಳು ಧಾರೆ ಎರೆಯುತ್ತಾರೆ. ಹೃದಯದಿಂದ ಮಕ್ಕಳಿಗೆ ಮಾನವೀಯ ಮೌಲ್ಯ ಬೆಳೆಸಬೇಕು. ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಶಿಕ್ಷಕ. ಜಗತ್ವಿಖ್ಯಾತ ವ್ಯಕ್ತಿ ಮಾಡುವ ಸಾಮರ್ಥ್ಯ ಇರುವದು ಶಿಕ್ಷಕನಿಗೆ ಮಾತ್ರ ಎಂದರು.ತಿಕೋಟಾ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ…
ವಿಜಯಪುರ: ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಮಾನವೀಯ ಮೌಲ್ಯ ಪಡೆದ ಮಕ್ಕಳು ಜಗದ್ವಿಖ್ಯಾತರಾಗಲು ಸಾಧ್ಯವಾಗುತ್ತದೆ ಎಂದು ಚಿತ್ತರಗಿಯ ಶಿವಯೋಗ ಮತ್ತು ನಿಸರ್ಗ ಚಿಕಿತ್ಸೆ ಕೇಂದ್ರದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ನೇತೃತ್ವದಲ್ಲಿ ಗುರುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇಶದಲ್ಲಿ ದೊಡ್ಡ ಗೌರವ ಸೀಗುವುದು ಶಿಕ್ಷಕರಿಗೆ ಮಾತ್ರ, ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುದು ಜಾಗೃತಿ ಮಾಡುವವರು ಶಿಕ್ಷಕರು, ವಿದ್ಯೆ ಬಹುದೊಡ್ಡ ಸಂಪತ್ತು, ಅದನ್ನು ಗುರುಗಳು ಧಾರೆ ಎರೆಯುತ್ತಾರೆ. ಹೃದಯದಿಂದ ಮಕ್ಕಳಿಗೆ ಮಾನವೀಯ ಮೌಲ್ಯ ಬೆಳೆಸಬೇಕು. ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಶಿಕ್ಷಕ. ಜಗತ್ವಿಖ್ಯಾತ ವ್ಯಕ್ತಿ ಮಾಡುವ ಸಾಮರ್ಥ್ಯ ಇರುವದು ಶಿಕ್ಷಕನಿಗೆ ಮಾತ್ರ ಎಂದರು.ತಿಕೋಟಾ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ…
ಕೃಷಿ ಪಂಪಸೆಟ್ ಗೆ ಆಧಾರ ಜೋಡಣೆ & ಮೀಟರ್ ಅಳವಡಿಕೆ ಕೂಡಲೇ ಕೈ ಬಿಡಲು ಸಚಿವರಿಗೆ ಮನವಿ ವಿಜಯಪುರ: ಕೃಷಿ ಪಂಪ್ ಸೆಟ್ ಗೆ ಆಧಾರ ಜೋಡಣೆ ಹಾಗೂ ಮೀಟರ್ ಅಳವಡಿಕೆ ಕೂಡಲೇ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿಜಯಪುರ ವತಿಯಿಂದ ಅಧೀಕ್ಷಕ ಅಭಿಯಂತರರು ಹೆಸ್ಕಾಂ (ವಿ) ವಿಜಯಪುರ ಇವರ ಮುಖಾಂತರ ರಾಜ್ಯದ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಲ್ಲ, ಅವರ ಆಸಕ್ತಿಗಳೆಲ್ಲ ಕಾರ್ಪೋರೇಟ್ ಕಂಪನಿಗಳ ಪರ. ಈಗ ಸರ್ಕಾರ ಮತ್ತೆ ವಿದ್ಯುತ್ ಖಾಸಗಿಕರಣದ ಕಡಗೆ ಹೊರಟಿದೆ. ಖಾಸಗಿ ವ್ಯಕ್ತಿಗಳಿಗೆ ಈ ಕಂಪನಿ ವರ್ಗಾವಣೆಗೆ ಮುಂಚೆ ಆಧಾರ ಲಿಂಕ್ ಮಾಡಿ ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಸಂಚು ಇದಾಗಿದೆ ಎಂದು ಆರೋಪಿಸಿದರು.ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ರವರು ಮಾತನಾಡಿ ಸರಕಾರ ವಿದ್ಯುತ್ ನಗರ, ಹಳ್ಳಿ ತಾರತಮ್ಯ…
ಚಡಚಣ: ಪಟ್ಟಣದ ಪಂಚಾಯತ ಮಟ್ಟದ ಕ್ರೀಡಾಕೂಟದಲ್ಲಿ ಸಂಗಮೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಮೋಘ ಸಾಧನೆ ಮಾಡಿದ್ದಾರೆ.ಬಾಲಕರ ವಯಕ್ತಿಕ ವಿಭಾಗದಲ್ಲಿ 400 m ಓಟ ಸಿದ್ದರಾಮ ಚೌದ್ರಿ ಪ್ರಥಮ, ರೋಹನ ಬನಸೋಡೆ ತೃತೀಯ, ಗುಂಡು ಎಸೆತ ಶ್ರೀನಾಥ್ ನಿಂಬರಗಿ ಪ್ರಥಮ,ಉದ್ದಜಿಗಿತ ಸಿದ್ದರಾಮ ಚೌದರಿ ಪ್ರಥಮ, 80 ಮೀಟರ್ ಅಡೆತಡೆ ಓಟ ಸಿದ್ಧರಾಮ ಚೌದರಿ ದ್ವಿತೀಯ, ಗುಂಪು ಆಟದಲ್ಲಿ ರಿಲೇ ಕಬ್ಬಡ್ಡಿ ವಾಲಿಬಾಲ್ ಥ್ರೋ ಬಾಲ್ ನಾಲ್ಕು ಆಟದಲ್ಲಿ ಪ್ರಥಮ ಸ್ಥಾನ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.ಬಾಲಕಿಯರ ವಿಭಾಗದಲ್ಲಿ 400 ಮೀಟರ್ ಗೌರಿ ಬಗಲಿ ತೃತೀಯ 600 m ರೀತು ನಿಗಡಿ ತೃತೀಯ, ಚಕ್ರ ಎಸೆತ ರೇವತಿ ಅವಟಿ ಪ್ರಥಮ, ಎತ್ತರ ಜಿಗಿತ ಅಂಕಿತಾ ಕೋಣ ಪ್ರಥಮ,ಉದ್ದ ಜಿಗಿತ ನಿಖಿತಾ ಉಪ್ಪಾರ ದ್ವಿತೀಯ, ಸ್ಥಾನ ಪಡೆದು ಅಮೊಘ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಈ ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಡೋಣಗಾವ್,ಮತ್ತು ಆಡಳಿತ ಅಧಿಕಾರಿಗಳಾದ ಡಾ.ಎಸ್ ಎಸ್ ಜೋರಗಿ…
ಚಿಮ್ಮಡ: ಗ್ರಾಮದ ಪಿಕೆಪಿಎಸ್ ನಿರ್ದೆಶಕ ನಿಂಗಣ್ಣ ಪೂಜಾರಿಯವರಿಗೆ ಸ್ಥಳಿಯ ಪಿಕೆಪಿಎಸ್ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.ರಾಜಸ್ಥಾನದ ಜೈಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಕ್ಕರೆ ಎಕ್ಸಪೋ-೨೦೨೪ ಕಾರ್ಯಕ್ರಮದಲ್ಲಿ ಭಾರತೀಯ ಸಕ್ಕರೆ ತಂತ್ರಜ್ಞಾನ ಸಂಸ್ಥೆ ನೀಡುವ ರಾಷ್ಟ್ರಮಟ್ಟದ ‘ಪ್ರಗತಿಪರ ರೈತ ಪ್ರಶಸ್ತಿ ಪಡೆದ ಪ್ರಯುಕ್ತ ನಿಂಗಣ್ಣ ಪೂಜಾರಿಗೆ ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ಹಣಮಂತ ನೇಸೂರ, ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ನಿರ್ದೇಶಕರಾದ ವಿರುಪಾಕ್ಷ ಕುದರಿ, ಚನ್ನಪ್ಪಾ ಬಿಳ್ಳೂರ, ವ್ಯವಸ್ಥಾಪಕ ಎಂ.ವ್ಹಿ ವಜ್ಜರಮಟ್ಟಿ ಉಪಸ್ಥಿತರಿದ್ದರು.
