ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದ ಒಟ್ಟು ೧೩ ಜನರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಚಾಂದಸಾಬ ಕುಂಟೋಜಿ, ನಜೀರ ಕರಡಿ, ಹುಸೇನಭಾಷಾ ಮಾಗಿ, ಉಮ್ಮಿದ ನಾಯ್ಕೋಡಿ, ಹಾಜಿಸಾಬ ಜಾತಗಾರ, ಸಿದ್ರಾಮಯ್ಯ ಹಿರೇಮಠ, ಬಸವರಾಜ ಢವಳಗಿ, ಸೋಮಪ್ಪ ಚಲವಾದಿ, ಹುಸೇನಬಾಷಾ ಸಂಕನಾಳ, ಮಹ್ಮದ ಇಸ್ಮಾಯಿಲ್ ಮಾಮನಿ, ಇಬ್ರಾಹಿಂ ಮಸರಕಲ್, ಅಬ್ದುಲರಜಾಕ್ ನಾಡಿ, ಶಂಕರ ನಾಟಕಾರ ಇವರ ಮೇಲೆ ಪ್ರಕರಣ ದಾಖಲಾಗಿದ್ದು, ಪಟ್ಟಣದ ಬನಶಂಕರಿ ವೃತ್ತದ ಬಳಿ ೬ ಜನರ ಗುಂಪು ಮತ್ತು ೭ ಜನರ ಒಂದು ಗುಂಪು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಆಟವಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಈ ಪೈಕಿ ೬ ಜನರ ತಂಡದ ಮೇಲೆ ಸಿಎಚ್‌ಸಿ ಎಂ.ಚಿ.ಅಂಗಡಗೇರಿ ಮತ್ತು ೭ ಜನರ ತಂಡದ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿವೆ.
