ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಎರಡು ದಿನಗಳ ಹಿಂದೆ ಕಾಣೆಯಾದ ಯುವತಿಯೊಬ್ಬಳು ಅರೆ ನಗ್ನಾವಸ್ಥೆಯಲ್ಲಿ ಶವವಾಗಿ ತಾಲೂಕಿನ ಮುದ್ನಾಳ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿದ್ದಾಳೆ.
ಮೃತ ದುರ್ದೈವಿಯನ್ನು ಶೋಭಾ ಲಮಾಣಿ(೨೮) ಎಂದು ಗುರುತಿಸಲಾಗಿದೆ. ಮೃತ ದೇಹದ ಮೂಗಿನಲ್ಲ್ಲಿ ಬಂದ ನೊರೆ, ಅರೆನಗ್ನಾವಸ್ಥೆಯ ಸ್ಥಿತಿ ಸೇರಿದಂತೆ ಶೋಭಾಳ ಮೃತ ದೇಹ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಘಟನಾ ಸ್ಥಳಕ್ಕೆ ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆಯ ಬಗ್ಗೆ ಶೋಬಾಳ ತಾಯಿ ಶಾಂತವ್ವ ಮಾಧ್ಯಮದೊಂದಿಗೆ ಮಾತನಾಡಿ ಶೋಭಾ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಬುಧವಾರ ಶೋಭಾ ತನ್ನನ್ನು ಸಾಯಿಸ್ತಾರೆ. ಇಂದಿಗೆ ಈ ಭೂಮಿಯ ಮೇಲಿನ ನನ್ನ ಋಣ ಮುಗೀತು. ನಾನು ಸತ್ತರೆ ಪೊಲೀಸರಿಗೆ ಭಾಷಾ ನ ಹೆಸರನ್ನು ಬರೆಸು ಎಂದಿದ್ದಳು. ನಾನು ಸಮಾಧಾನ ಮಾಡಿದ್ದೆ. ರಾತ್ರಿ ಸೈಫ್ಯಾ ಎನ್ನುವ ವ್ಯಕ್ತಿ ಜಗಳಾ ತೆಗೆದಿದ್ದ. ಅದಾದ ನಂತರ ನನ್ನ ಮಗಳು ಕಾಣೆಯಾಗಿದ್ದಳು. ಈ ಕುರಿತು ಪೊಲೀಸರಿಗೆ ತಿಳಿಸಲೆಂದು ಠಾಣೆಗೆ ಹೋಗಿದ್ದೆ. ಅವರು ಆಕೆಯ ಪೊಟೋ ಕೇಳಿದ್ದರು, ಕೊಟ್ಟು ಬಂದಿದ್ದೆ. ಬಳಿಕ ಆಕೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ವಿವರಿಸಿದ್ದಾರೆ.
ಪ್ರಕರಣ ದಾಖಲು :
ಘಟನೆಗೆ ಸಂಬಂಧಿಸಿದಂತೆ ಮೃತ ಶೋಭಾಳ ತಾಯಿ ಶಾಂತವ್ವ ನನ್ನ ಮಗಳು ಪರಿಶಿಷ್ಟ ಜಾತಿಗೆ ಸೇರಿದ್ದವಳು ಅಂತ ಗೊತ್ತಿದ್ದರೂ ಮುಸ್ಲಿಂ ಸಮುದಾಯದ ಭಾಷಾ ಸುಗಂಧಿ ಆಕೆಯ ಜೊತೆ ಅನೈತಿಕ ಸಂಬಂಧ ಬೆಳೆಸಿ ಅವಳನ್ನು ಕೊಲೆ ಮಾಡಿರುತ್ತಾನೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಎಸ್‌ಸಿ-ಎಸ್‌ಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

