ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿಯೊಂದು ಸೋಲು ಗೆಲುವಿಗೂ ಕನ್ನಡ ಮಾಧ್ಯಮ. ದೇಹದಲ್ಲಿ ಹೃದಯ, ರಕ್ತ ಎಷ್ಟು ಮುಖ್ಯವೋ ಮಾತನಾಡಲು ಕನ್ನಡವೂ ಅಷ್ಟೇ ಮುಖ್ಯ ಎಂದು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು, ನಮ್ಮ ರಾಜ್ಯದ ನಕಾಶೆ ಬೇರೆ ರಾಜ್ಯಗಳ ನಕಾಶೆಗಿಂತ ಸುಂದರ. ಇವತ್ತು ಕಾಡು, ಗುಡ್ಡ, ಪ್ರಕೃತಿಯನ್ನು ತುಂಬ ಬಿಂಬಿಸುತ್ತದೆ. ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಕನ್ನಡ ನಮ್ಮ ಭಾಷೆ. ಈ ಭಾಷೆಯ ಕಾಗುಣಿತ, ಅಮ್ಮ ಅನ್ನುವ ಪದ ಎಲ್ಲವೂ ಸೊಗಸು. ಕನ್ನಡವನ್ನು ನಾವು ತುಂಬಾ ಪ್ರೀತಿಸುತ್ತೇವೆ. ಬದುಕು ಸಾಗಿಸಲು ದಿನನಿತ್ಯದ ಆಗುಹೋಗುಗಳಿಗೆ ಎಲ್ಲದಕ್ಕೂ ಕನ್ನಡ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ಎಸ್.ಸಿ.ಜೋಗೂರ, ವ್ಹಿ.ಕೆ.ಹಿರೇಮಠ, ವಿಜಯಲಕ್ಷಿö್ಮÃ ಕನ್ನೊಳ್ಳಿ, ಗವಿಸಿದ್ದಪ್ಪ ಆನೆಗುಂದಿ, ವಿಶ್ವನಾಥ ನಂದಿಕೋಲ, ರಾಜಶ್ರೀ ಗಾಣಗೇರ್, ಜೆ.ಎಂ.ಗಾಣಗೇರ್, ಚಂದ್ರು ಬಬಲೇಶ್ವರ್, ಎಸ್.ಜಿ.ಮಾರ್ಸನಳ್ಳಿ, ಪ್ರಸನ್ ಜೋಗೂರ, ರಾಹುಲ ನಾರಾಯಣಕರ್, ಎನ್.ಎಂ.ಶೆಳ್ಳಗಿ, ಸುಭಾಸ ಹೊಸಮನಿ, ಉದಯ ಶಿವಸಿಂಪಿಗೇರ ಸೇರಿದಂತೆ ಇನ್ನಿತರರು ಇದ್ದರು.

