Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯಲಗೂರೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ರಾಮನವಮಿ

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ

ನೆಮ್ಮದಿ ಜೀವನಕ್ಕೆ ಸೈ ಎನಿಸಿಕೊಂಡ ಗ್ರಾಮೀಣ ಮಹಿಳೆ ಸಾವಿತ್ರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೆಚ್.ಓಬಳಾಪುರ ಭಕ್ತಾಧಿಗಳಿಂದ ಪಂಢರಾಪುರಕ್ಕೆ ಪಾದಯಾತ್ರೆ
(ರಾಜ್ಯ ) ಜಿಲ್ಲೆ

ಹೆಚ್.ಓಬಳಾಪುರ ಭಕ್ತಾಧಿಗಳಿಂದ ಪಂಢರಾಪುರಕ್ಕೆ ಪಾದಯಾತ್ರೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ದೇವರ ಹಿಪ್ಪರಗಿ: ಸತತ ೩೭ ವರ್ಷಗಳಿಂದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.
ಶನಿವಾರ ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ಬಳ್ಳಾರಿ, ಭದ್ರಾವತಿ, ಸೇರಿದಂತೆ ವಿವಿಧ ಪ್ರದೇಶಗಳ ನೂರಾನಲ್ವತ್ತಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಟ್ಟಣದ ಶಾಲಾ ಆವರಣದಲ್ಲಿ ಭದ್ರಾವತಿ ಗೋಂದಿಮಠದ ಶ್ರೀಸ್ವಾಮಿನಾಮ ದೇವಾನಂದ ಭಾರತಿ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿ ವಾಸ್ತವ್ಯ ಹೂಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಸದ್ಭಕ್ತರು ಯಾತ್ರಾರ್ಥಿಗಳಿಗೆ ಸಾಯಂಕಾಲದ ಫಳಾರ, ರಾತ್ರಿ ಊಟ, ನೀರು, ಬಾಳೆಹಣ್ಣು ಸೇರಿದಂತೆ ಲೈಟ್ ಸೇವೆ ಒದಗಿಸಿದರು.
ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಖಜಾಂಚಿ ರಮೇಶ ತೊಗರಿ ಮಾತನಾಡಿ, ಅಕ್ಟೋಬರ್ ೧೯ರಿಂದ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದಿಂದ ಆರಂಭಗೊಂಡ ಈ ಯಾತ್ರೆಯಲ್ಲಿ ೬೫ ಮಹಿಳೆಯರು ಸೇರಿ ನೂರಾನಲ್ವತ್ತಕ್ಕೂ ಹೆಚ್ಚು ಜನರಿದ್ದು, ಸತತವಾಗಿ ೨೨ ದಿನಗಳ ಕಾಲುನಡಿಗೆಯಲ್ಲಿ ಸಾಗಿ ನವೆಂಬರ್ ೯ ಶನಿವಾರ ಕಾರ್ತಿಕ ಶುದ್ಧ ಅಷ್ಟಮಿಯಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.
ಯಾತ್ರೆಯ ನೇತೃತ್ವವನ್ನು ಭದ್ರಾವತಿ ಗೋಂದಿಮಠದ ಸ್ವಾಮಿ ನಾಮದೇವಾನಂದ ಭಾರತಿ, ಚಂದ್ರಶೇಖರಸ್ವಾಮಿ ಗೋಂದಿಮಠ, ಎಂ. ಓಬಳೇಶ, ಕಿಂಡ್ರಿ ಕೊಟ್ರೇಶ, ನಾಣ್ಯಾಪೂರ ಸಂತೋಷ, ಸಣ್ಣ ಯಂಕಪ್ಪ, ಮಹಾದೇವಪ್ಪ, ಕುಮಾರಸ್ವಾಮಿ, ಚನ್ನಪ್ಪ, ಕಿಮ್ಯನಾಯ್ಕ, ಯಂಕನಾಯ್ಕ, ಪಿ.ತಿಮ್ಮಣ್ಣ, ದುರುಗಪ್ಪ, ಗೋವಿಂದಪ್ಪ, ಹುಲುಗಪ್ಪ, ಶಂಕರನಾಯ್ಕ ಲಕ್ಷö್ಮಣ, ಐಗಾರ ದುರುಗೇಶ, ನಾಗರಾಜ ಚೋರನೂರ ಮೈಸೂರು ರಮೇಶ ವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯಲಗೂರೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ರಾಮನವಮಿ

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ

ನೆಮ್ಮದಿ ಜೀವನಕ್ಕೆ ಸೈ ಎನಿಸಿಕೊಂಡ ಗ್ರಾಮೀಣ ಮಹಿಳೆ ಸಾವಿತ್ರಿ

ಏಪ್ರಿಲ್ ನಿಂದ ಭಾರತ ಜನಗಣತಿ-೨೦೨೭ ಆರಂಭ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯಲಗೂರೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ರಾಮನವಮಿ
    In (ರಾಜ್ಯ ) ಜಿಲ್ಲೆ
  • SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ
    In (ರಾಜ್ಯ ) ಜಿಲ್ಲೆ
  • ನೆಮ್ಮದಿ ಜೀವನಕ್ಕೆ ಸೈ ಎನಿಸಿಕೊಂಡ ಗ್ರಾಮೀಣ ಮಹಿಳೆ ಸಾವಿತ್ರಿ
    In ವಿಶೇಷ ಲೇಖನ
  • ಏಪ್ರಿಲ್ ನಿಂದ ಭಾರತ ಜನಗಣತಿ-೨೦೨೭ ಆರಂಭ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 27, 2026
    In ದಿನಪತ್ರಿಕೆ
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ
    In (ರಾಜ್ಯ ) ಜಿಲ್ಲೆ
  • ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ
    In (ರಾಜ್ಯ ) ಜಿಲ್ಲೆ
  • ಮುಂದುವರೆದ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.