Author: editor.udayarashmi@gmail.com

ಸಾಕ್ಷರತಾ ದಿನ ಆಚರಣೆಯಲ್ಲಿ ಜಿಲ್ಲಾ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕಿ ಉಮಾದೇವಿ ಸೊನ್ನದ ಹೇಳಿಕೆ ವಿಜಯಪುರ: ನಗರದ ಕೇಂದ್ರ ಕಾರಾಗೃಹದಲ್ಲಿ ಸೆ.೯ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ಜಿಲ್ಲಾ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಶ್ರೀಮತಿ ಉಮಾದೇವಿ ಸೊನ್ನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿಯ ಅನಕ್ಷರಸ್ಥರನ್ನು ಗುರುತಿಸಿ, ಅಕ್ಷರಸ್ಥರನ್ನಾಗಿ ಮಾಡುವ ಉಲ್ಲಾಸ್ ಎನ್‌ಐಎಲ್‌ಪಿ, ೧೦೦೦ ಸಂಪೂರ್ಣ ಗ್ರಾಮ ಪಂಚಾಯತಿ ಹಾಗೂ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಸಾಕ್ಷರರನ್ನಾಗಿ ಮಾಡುವ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಮಾತನಾಡಿ, ಯಾವ ವ್ಯೆಕ್ತಿ ಜ್ಞಾನವೆಂಬ ಜ್ಯೋತಿಯನ್ನು ತನ್ನ ಜೀವನದಲ್ಲಿ ಬೆಳಗಿಸಿಕೊಳ್ಳುತ್ತಾನೋ ಆತನು ಸಮಾಜಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾನೆ. ನಿಮ್ಮಿಂದಲೇ ಈ ಬಂಧಿಖಾನೆ ಎಂಬ ವಿಷಯ ಕೊನೆಯಾಗಬೇಕು, ನಿವೇಲ್ಲರೂ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಮುಖಾಂತರ ಸ್ವುಸ್ತಿರ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಜಿಲ್ಲಾ…

Read More

ಇಟ್ಟಂಗಿಹಾಳದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿ.ಪಂ ಸಿಇಓ ರಿಷಿ ಆನಂದ ಸೂಚನೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಂಗನವಾಡಿ ಕೇಂದ್ರದ ಆಕರ್ಷಣೀಯ ಮತ್ತು ಸುಸಜ್ಜಿತ ಕಟ್ಟಡ ಮತ್ತು ಮಕ್ಕಳ ಕಲಿಕೆ, ವಿವಿಧ ಕ್ರಿಯಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅಲ್ಲಿರುವ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದುಕೊಂಡರು. ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಮಕ್ಕಳಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ಬೋಧನಾ ಉಪಕರಣದಲ್ಲಿ ವೈವಿಧ್ಯತೆಯನ್ನು ಬಳಸಿಕೊಂಡು ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆ ಬೆಳೆಸಬೇಕು ಎಂದು ಹೇಳಿದರು.ನಂತರ, ಅಂಗನವಾಡಿ ಕೇಂದ್ರದ ಒಳಾಂಗಣ ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಅದೇ ರೀತಿ ಕೇಂದ್ರದ ಹೊರಾಂಗಣ ಆಟದ ಮೈದಾನವನ್ನೂ ಸಹ ಉತ್ತಮವಾಗಿ ಅಭಿವೃದ್ಧಿಪಡಿಸಿ, ಸ್ವಚ್ಛತೆಯಿಂದ ನಿರ್ವಹಣೆ ಮಾಡುವುದು.…

Read More

ವಿಜಯಪುರ: ಮೊನ್ನೆಯಷ್ಟೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತು ಮಾಡುವಲ್ಲಿ ಯಶಸ್ವಿಯಾಗಿದ್ದ ವಿಜಯಪುರ ಪೊಲೀಸರು ಈಗಬಂಗಾರ ಆಭರಣಗಳನ್ನು ಕಳವು ಮಾಡುವ ಅಂತರ ರಾಜ್ಯ ಆರೋಪಿತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನುಮಹಾರಾಷ್ಟ್ರದ ಸೊಲ್ಲಾಪೂರ ನಿವಾಸಿ ನಂದಾಬಾಯಿ ನಂದಾ ನಂದಿಯ ಚಾಯಾ ವಿಠಲ ಗಾಯಕವಾಡ (55), ಗಣೇಶ ನಾಗೇಶ ವಿಲಾಸ ಜಾಧವ (35) ಮಹಾದೇವಪಿಂಟು ಹಣಮಂತ ಗಾಯಕವಾಡ (35), ಸುಂದರಾಬಾಯಿ ಮಾಣಿಕ ಜಾಧವ (38) ಎಂದು ಗುರುತಿಸಲಾಗಿದೆ.ಆರೋಪಿಗಳಿಂದ ೧೫ ಲಕ್ಷ ರೂ. ಮೌಲ್ಯದ ೨೦೮ ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ.ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ಮಾತನಾಡಿ, ಈ ಆರೋಪಿಗಳು ಸಂಶಯಾಸ್ಪದವಾಗಿ ತಿರುಗಾಡುವ ವೇಳೆ ಬರಗಟಗಿ ಎಲ್ ಟಿ ಹತ್ತಿರ ಪೊಲೀಸ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ ಎಂದರು. ಆರೋಪಿತರಿಗೆ ವಿಚಾರಣೆಗೆ ಒಳಪಡಿಸಿ ಆರೋಪಿತರು ಸುಮಾರು 2 ವರ್ಷದಿಂದ ಮಹಾರಾಷ್ಟ್ರದಿಂದ ಬಂದು ವಿಜಯಪೂರದ ಡೋಮನಾಳ ಗ್ರಾಮದಲ್ಲಿ, ವಿಜಯಪೂರ ಶಿವಗಿರಿ ಹತ್ತಿರ, ದೇವರಹಿಪ್ಪರಗಿ…

Read More

ಮುದ್ದೇಬಿಹಾಳ: ಕರ್ನಾಟಕ ಅಂತರ್ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್-೧೯ ತಂಡಕ್ಕೆ ಆಯ್ಕೆಯಾದ ವಿಶಾಲ್ ಚಲವಾದಿ ಯನ್ನ ಚೈತನ್ಯ ಶೀಲ ಗೆಳೆಯರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಪುರಸಭೆ ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ, ಅಜ್ಜು ಡವಳಗಿ, ಡೊಂಗ್ರಿಸಾಬ್ ಕೂಡಗಿ, ಲಾಡ್ಲೆಮಶಾಕ ನಾಯ್ಕೋಡಿ, ರಾಘು ಕುಲಕರ್ಣಿ, ಕುಮಾರಸ್ವಾಮಿ ಶಿವಯೋಗಿಮಠ, ಆನಂದ ಪತ್ತಾರ, ರಜಾಕ್ ಪಟೇಲ್, ಅಪ್ಪು ಡವಳೇಶ್ವರ, ಅಶೋಕ ಬಿರಾದಾರ, ನಿಂಗಣ್ಣ ಓತಗೇರಿ, ಮೋಹನ ಹೂಲ್ಲೂರು, ಶ್ರೀನಿವಾಸ ಇಲ್ಲೂರ, ಗುರಯ್ಯ ಮುದ್ನೂರಮಠ, ವಿಕ್ರಂ ಓಸ್ವಾಲ, ರವೀಂದ್ರ ನಂದಪ್ಪನವರ ಸೇರಿದಂತೆ ಮತ್ತೀತರರು ಇದ್ದರು.

Read More

ಪ್ರಥಮ ಬಾರಿ 4 ಬೆಳೆಗೆ ಬೆಂಬಲ ಬೆಲೆ | ಸುದ್ದಿಗೋಷ್ಠಿಯಲ್ಲಿ ಸಚಿವ ಶಿವಾನಂದ ಪಾಟೀಲ ಮಾಹಿತಿ ಬೆಂಗಳೂರು: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶುಕ್ರವಾರ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು ಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಗುರುವಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರು ಕಾಳು ಖರೀದಿ ಮಾಡಲಿದೆ. ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಕ್ವಿಂಟಲ್ ಗೆ ರೂ 4,892 ಹಾಗೂ ಉದ್ದಿನ ಕಾಳಿಗೆ…

Read More

ಮುದ್ದೇಬಿಹಾಳ: ಪಾದಚಾರಿ ಯುವಕರ ಮೇಲೆ ದ್ವಿಚಕ್ರ ವಾಹನ ಹರಿದು ಸ್ಥಳದಲ್ಲೇ ಮೂವರು ಆಸ್ಪತ್ರೆಯಲ್ಲೊಬ್ಬ ದುರ್ಮರಣ ಹೊಂದಿದ ಮತ್ತು ಇನ್ನೂ ನಾಲ್ವರು ಯುವಕರಿಗೆ ಗಂಬೀರ ಗಾಯಗಳಾದ ಘಟನೆ ತಾಲೂಕಿನ ಕುಂಟೋಜಿಯ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.ಮೃತ ದುರ್ದೈವಿಗಳಾದ ಉದಯಕುಮಾರ ಪ್ಯಾಟಿ, ಅನೀಲ ಕೈನೂರ, ನಿಂಗರಾಜ ಚೌಧರಿ ಸ್ಥಳದಲ್ಲೇ ಸಾವನ್ನಪ್ಪಿದರೆ, ರಾಯಪ್ಪ ಬಾಗೇವಾಡಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಣಮಂತ ಕುರುಬಗೌಡರ, ಪ್ರಶಾಂತ ಕುರುಬಗೌಡರ, ಶಾಹೀದ ಹುನಗುಂದ, ಶಂಕರಪ್ಪ ಕೊಂಡಗೂಳಿ ಇವರುಗಳಿಗೆ ಗಂಬೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ಜಾತ್ರೆಯ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ವೀಕ್ಷಿಸಲು ಟಂ ಟಂ ಮೂಲಕ ಆಗಮಿಸಿದ್ದ ಯುವಕರು ರಸ್ತೆ ದಾಟುವಾಗ ಜೋರಾಗಿ ಬಂದ ದ್ವಿಚಕ್ರ ವಾಹನ ಸವಾರ ಯುವಕರ ಮೇಲೆ ಹರಿಸಿದ್ದಾನೆ. ವಾಹನ ಸವಾರ, ಹಿಂಬದಿ ಕುಳಿತ ಯುವಕ ಮತ್ತು ಪಾದಾಚಾರಿ ಇಬ್ಬರು ಯುವಕರು ಈ ಘಟನೆಯಲ್ಲಿ ದುರ್ಮರಣ ಹೊಂದಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ…

Read More

ಅಧಿಕಾರಿಗಳ ತಪ್ಪಿನಿಂದಾಗಿ ಜಿಲ್ಲೆಯಲ್ಲಿ ಅನೇಕ ರೈತರ ಪರದಾಟ ವಿಜಯಪುರ: ವಿಜಯಪುರ ಜಿಲ್ಲೆಯ ನಾಗಠಾಣ ಸಮೀಪದ ಗುಗದಡ್ಡಿ ಗ್ರಾಮದ ರೈತರಾದ ಕಲ್ಲವ್ವ ಬಸಪ್ಪ ವಾಘೆ ಸರ್ವೇ ನಂಬರ -೩೩ ರಲ್ಲಿ ಜಮೀನನಲ್ಲಿ ಕಳೆದ ೧೦-೧೨ ವರ್ಷಗಳಿಂದ ವಾಸವಿದ್ದು, ಜಮೀನಿನ ಉಳುಮೆ ಮಾಡಿಕೊಂಡು ಬಂದಿರುತ್ತಾರೆ, ಇತ್ತಿಚಿಗೆ ತಿಪ್ಪಣ್ಣ ಸೋಮಪ್ಪ ರೋಣಿಹಾಳ ಎಂಭ ರೈತರ ಹೆಸರು ಅಧಿಕಾರಿಗಳ ನೆದರ ಚೂಕಿನಿಂದ ಆಗಿರುವ ತಪ್ಪಿನಿಂದಾಗಿ ಇವರ ಉತ್ತಾರೆಯಲ್ಲಿ ಡಮ್ಮಿ(ಪೋಕಳಾ ಪಾಣಿ) ಬಂದು ಸೇರಿರುವುದರಿಂದ ಸಮಸ್ಯೆಯಾಗುತ್ತಿದೆ, ಕಾರಣ ಅದನ್ನು ರದ್ದುಪಡಿಸಿ ನಿಜವಾದ ರೈತರ ಜಮೀನಿನ ಕಾಗದ ಪತ್ರವನ್ನು ಮೊದಲಿನಂತೆ ಸರಿ ಮಾಡಿಕೊಡಬೇಕೆಂದು ವಿಜಯಪುರ ತಾಲುಕಾ ತಹಶಿಲ್ದಾರರಾದ ಪ್ರಶಾಂತ ಚನ್ನಗೊಂಡ ಅವರಲ್ಲಿ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು, ಅಧಿಕಾರಿಗಳ ನೆದರ ಚೂಕಿನಿಂದ ಆಗಿರುವ ತಪ್ಪಿನಿಂದಾಗಿ ಈ ಘಟನೆ ನಡೆದಿರುತ್ತದೆ, ಕಾಗದ ಪತ್ರಗಳನ್ನು ಪರಿಶೀಲಿಸಿ ನೈಜ ಹಕ್ಕುದಾರರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆವೆ.…

Read More

ಇಂಡಿ: ಮಹಾರಾಷ್ಟ್ರದ ಮುರಮದಿಂದ ಪ್ರಾರಂಭವಾಗಿ ವಿಜಯಪುರಕ್ಕೆ ತಲುಪುವ 548 ಬಿ ರಾಷ್ಟ್ರೀಯ ಹೆದ್ದಾರಿ ಸೆ- 9 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಧನಶೆಟ್ಟಿ ಮಂಗಲಕಾರ್ಯಾಲಯದಲ್ಲಿಸಂಸದ ರಮೇಶ್ ಜಿಗಜಿಣಿಗಿ ಅವರ ನೇತೃತ್ವದಲ್ಲಿ ಅಡಿಗಲ್ಲು ಸಮಾರಂಭ ನಡೆಯುತ್ತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.ಶುಕ್ರವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ದಿನಗಳ ಬಹು ಬೇಡಿಕೆಯಾಗಿದ್ದ ಈ ರಾಜ್ಯ ರಸ್ತೆ, ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಅಡಿಗಲ್ಲು ಸಮಾರಂಭಕ್ಕೆ ‌ಕಾರಣವಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಒಟ್ಟು 102.310 ಮೀ ಇದ್ದು, 984 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹೊರವರ್ತುಲ ರಸ್ತೆ, 1 ಮೇಲುಸೇತುವೆ, 4 ಬೃಹತ್ ಸೇತುವೆಗಳು, 173 ಕಲ್ವರ್ಟಗಳನ್ನು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು 2 ವರ್ಷದಲ್ಲಿ ಕಾಲಾವಧಿ ಹೊಂದಿದೆ ಎಂದು ಹೇಳಿದರು. ಈ ಭಾಗದಲ್ಲಿ ಜನರು ಅತೀ ಹೆಚ್ಚಾಗಿ ಮಹಾರಾಷ್ಟ್ರದ ಜೊತೆ ವ್ಯಾಪಾರ,…

Read More

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಎದುರು ಟ್ರಾಕ್ಸ್ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಗಣೇಶನ ಪ್ರತಿಷ್ಠಾಪನೆ ಹಬ್ಬದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು.ಮುಸ್ಲಿಂ ಸಮುದಾಯ ಬಾಂಧವರಾದ ಜಾಕೀರ ಮುಲ್ಲಾ, ಶರೀಪ ನಾಯ್ಕೋಡಿ, ಲಾಡ್ಲೇಮಶಾಕ ನಾಯ್ಕೋಡಿ, ಆರೀಪ ಬೆಕನಾಳ, ಬುಡ್ಡಾ ಅವಟಿ ಸೇರಿದಂತೆ ಮತ್ತೀರರು ಭಾಗಿಯಾಗಿದ್ದು ಸೌಹಾರ್ಧತೆಗೆ ಸಾಕ್ಷೀಕರಿಸಿತ್ತು.

Read More