ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕನ್ನಡ ಸಾಹಿತ್ಯ ಪರಿಷತ್ತು ಸುರಪುರ ತಾಲೂಕು ಘಟಕದ ವತಿಯಿಂದ ಪ್ರತಿ ವರ್ಷ ಕೊಡಲ್ಪಡುವ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಈ ಬಾರಿಯ 2024ಕ್ಕೆ ಕೆಂಭಾವಿ ಪುರಸಭೆ ವ್ಯಾಪ್ತಿಯ ಪರಸನಹಳ್ಳಿಯ ಸಂಶೋಧಕ ಸಾಹಿತಿ ನಿಂಗನಗೌಡ ದೇಸಾಯಿ ಭಾಜನರಾಗಿದ್ದು ಸಂತಸ ತಂದಿದೆ ಎಂದು ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಹೇಳಿದರು.
ಈ ಕುರಿತು ಮಾತನಾಡಿದ ಅವರು ನಿಂಗನಗೌಡ ದೇಸಾಯಿ ಅವರು ಕನ್ನಡ ಸಾಹಿತ್ಯದ ಕಾವ್ಯ, ನಾಟಕ ಸಂಶೋಧನೆ, ಸಂಪಾದನೆ, ಚರಿತ್ರೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿದ್ದಾರೆ. ಐತಿಹಾಸಿಕ ಶಿಲ್ಪಗಳ ಕುರಿತು ಸುಮಾರು 60ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿರುವರು. ಪ್ರಸ್ತುತ ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯರಾಗಿರುವರು ಎಂದು ತಿಳಿಸಿದರು.
ಹರ್ಷ: ನಿಂಗನಗೌಡ ದೇಸಾಯಿಯವರು ಕಸಾಪ ತಾಲೂಕು ಘಟಕದಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಭಾಜನರಗಿದ್ದಕ್ಕೆ ಹಿರೇಮಠದ ಪೀಠಾಧಿಪತಿ ಚನ್ನಬಸ ಶಿವಾಚಾರ್ಯರು,
ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ. ಪಾಟೀಲ್, ಸುಮಿತ್ರಪ್ಪ ಅಂಗಡಿ, ಬಸಣ್ಣ ಬೂದೂರ, ಸಿದ್ದನಗೌಡ ಪೊ ಪಾಟೀಲ ಪರಸನಹಳ್ಳಿ, ವಾಮನರಾವ್ ದೇಶಪಾಂಡೆ, ಶರಣಬಸವ ಡಿಗ್ಗಾವಿ, ಸಂಜೀವರಾವ್ ಕುಲ್ಕರ್ಣಿ, ಡಾ. ಯಂಕನಗೌಡ ಪಾಟೀಲ್, ಸಿದ್ದನಗೌಡ ದೇಸಾಯಿ ಸೇರಿದಂತೆ ವಲಯದ ಸಾಹಿತಿ ಸಾಂಸ್ಕೃತಿಕ ಮನಸುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

