Author: editor.udayarashmi@gmail.com

ನಾಲತವಾಡ ಪಪಂ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಂಗಳವಾರ ಭೇಟಿ ನೀಡಿ, ಪಟ್ಟಣ ಪಂಚಾಯತಿಯಿಂದ ಸಂಗ್ರಹವಾಗುತ್ತಿರುವ ತೆರಿಗೆ ವಸೂಲಿ, ನೀರಿನ ಕರ ವಸೂಲಿ, ಅಂಗಡಿ ಮಳಿಗೆಗಳ ಬಾಡಿಗೆ, ಜಾಹೀರಾತು ಪರವಾನಿಗೆ ಸೇರಿದಂತೆ ವಿವಿಧ ವಿಷಯದ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ಪಟ್ಟಣದಲ್ಲಿ ಎಸ್.ಎಫ್.ಸಿ, 15ನೇ ಹಣಕಾಸು ಯೋಜನೆಯ 2021-22 ರಿಂದ 2024-25ನೇ ಅವಧಿಯವರೆಗೆ ಪ್ರಗತಿಯನ್ನು ಪರಿಶೀಲಿಸಿ ಉಳಿಕೆ ಅನುದಾನದ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದುಕೊಳ್ಳುವಂತೆಯೂ ಹಾಗೂ ಕಾಮಗಾರಿಗಳ ಆದೇಶ ನೀಡಿ ಪ್ರಗತಿ ಸಾಧಿಸಲು ಮುಖ್ಯಾಧಿಕಾರಿಗಳಿಗೆ ಮತ್ತು ಕಿರಿಯ ಅಭಿಯಂತರರಿಗೆ ಸೂಚಿಸಿದರು.ಅಂಬೇಡ್ಕರ ಸರ್ಕಲ್‌ದಲ್ಲಿ ಅಭಿವೃದ್ದಿ ಕುರಿತು,ಬಸವೇಶ್ವರ ವೃತ್ತದಲ್ಲಿ ಗೂಡಂಗಡಿಗಳ ತೆರವು ಕುರಿತು ಪರಿಶೀಲಿಸಿದ ಅವರು, ಅಭಿವೃಧ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ನಿವಾರಿಸಲು ಸೂಚಿಸಿದರು.ಎಸ್.ಎಫ್.ಸಿ ವಿಶೇಷ ಅನುದಾನದಡಿ ನಿರ್ಮಾಣವಾಗುತ್ತಿರುವ ಶಾಸಕರ ಮಾದರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಕಟ್ಟಡ ಕಾಮಗಾರಿ ಪರಿಶೀಲಿಸಿ ತ್ವರಿತವಾಗಿ…

Read More

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ) ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜಗತ್ತಿಗೆ ಸದಾ ನೆನಪಿರುವಂತಹ ಗೆಲುವು ರಾತ್ರೋರಾತ್ರಿ ದೊರೆಯುವಂಥದ್ದಲ್ಲ. ಅದು ಸಮಯವನ್ನು ಬೇಡುತ್ತದೆ. ಜತೆಗೆ ಅದಕ್ಕೆ ನಮ್ಮ ಕಠಿಣ ಪರಿಶ್ರಮ, ತುಡಿತ ಮತ್ತು ಏಕಾಗ್ರತೆಯ ಅವಶ್ಯಕತೆಯೂ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ತ್ಯಾಗವನ್ನು ಬೇಡುತ್ತದೆ. ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಇಂದಿನ ಯುವ ಜನತೆ ಅತಿ ಹೆಚ್ಚು ಪ್ರತಿಭಾವಂತರಿದ್ದಾರೆ. ಅಲ್ಲದೇ ದೊಡ್ಡ ದೊಡ್ಡ ಹೊಂಗನಸುಗಳನ್ನು ಕಾಣುತ್ತಾರೆ. ಅದರಲ್ಲಿ ಕೆಲ ಯುವಕರಂತೂ ಕನಸು ನನಸಾಗಿಸಲು ಸಾಕಷ್ಟು ಹಾತೊರೆಯುತ್ತಾರೆ. ಅದರೊಂದಿಗೆ ಹಗಲು ರಾತ್ರಿಯೆನ್ನದೇ ಶ್ರಮವಹಿಸುತ್ತಾರೆ. ಹೀಗಿದ್ದಾಗ್ಯೂ ಸಹ ಗೆಲುವು ಅವರಿಗೆ ಮರೀಚಿಕೆ ಆಗುತ್ತದೆ ಮೈಲಿಗಟ್ಟಲೇ ಇನ್ನೂ ಸಾಗುವುದಿದೆ ಏನೋ ಅನಿಸುತ್ತದೆ. ಗೆಲುವು ನನ್ನ ಪಾಲಿಗಿಲ್ಲವೆಂದು ಯುವ ಜನತೆ ಬೇಸರಪಟ್ಟುಕೊಂಡು ಪ್ರಯತ್ನವನ್ನು ನಿಲ್ಲಿಸಿಬಿಡುತ್ತಾರೆ. ಯಾಕೆ ಹೀಗೆ ಆಗುತ್ತದೆಂಬ ಪ್ರಶ್ನೆಗೆ ಉತ್ತರ ಹುಡುಕಹೊರಟಾಗ ಅವರು ಮಾಡುವ ತಪ್ಪುಗಳು, ಎದುರಾಗುವ ಅಡೆತಡೆಗಳು ನೆದರಿಗೆ ಬೀಳುತ್ತವೆ.ಯಶಸ್ಸು ನಿಧಾನ‘ಯಶಸ್ಸು ನಿಧಾನ ಪ್ರಕ್ರಿಯೆ, ಆದರೆ ಯಶಸ್ಸಿನ ಹಾದಿಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ವಿದ್ಯಾನಗರದಲ್ಲಿರುವ ಇಷ್ಟಲಿಂಗ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಿಂದಗಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ೧ಲಕ್ಷದ ೫೦ಸಾವಿರ ರೂ.ಅನುದಾನದ ಡಿಡಿಯನ್ನು ಜಿಲ್ಲಾ ನಿರ್ದೇಶಕ ಸಂತೋಷಕುಮಾರ್ ರೈ ಇಷ್ಟಲಿಂಗ ಸ್ವಾಮಿ ದೇವಸ್ಥಾನದ ಸಮಿತಿ ಸದಸ್ಯರಿಗೆ ವಿತರಣೆ ಮಾಡಿದರು.ಈ ವೇಳೆ ಕ್ಷೇತ್ರ ಯೋಜನಾಧಿಕಾರಿ ಕೃಷ್ಣಮೂರ್ತಿ, ಮೇಲ್ವಿಚಾರಕ ಸಿದ್ದಪ್ಪ ಚುಳುಕಿ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ೨೦೨೪-೨೫ನೆಯ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ (ಎಂಎ), ವ್ಯಾಲ್ಯು ಆಡೆಡ್ ಡಿಪ್ಲೋಮಾ ಹಾಗೂ ವ್ಯಾಲ್ಯು ಆಡೆಡ್ ಅಡ್ವಾನ್ಸ್ ಡಿಪ್ಲೋಮಾ ಮತ್ತು ಗ್ರಾಫಿಕ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗಳ ಪ್ರಥಮ ವರ್ಷದ ಉಳಿಕೆ ಸೀಟುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಯುಯುಸಿಎಂಎಸ್ ತಂತ್ರ‍್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಪತ್ರಿಕೋದ್ಯಮ ವಿಭಾಗದ ಎಂಎ ಕೋರ್ಸ್ನ ಉಳಿಕೆ ಸೀಟುಗಳಿಗೆ ಪ್ರವೇಶ ಪಡೆಯಲು ಈಗಾಗಲೇ ಯುಯುಸಿಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿಯ ವರೆಗೆ ಪ್ರವೇಶ ಪಡೆಯದೇ ಇರುವವರು ಮತ್ತು ಈಗಾಗಲೇ ಅರ್ಜಿ ಸಲ್ಲಿಸದೇ ಇರುವವರು ಸಹ ಅರ್ಜಿ ಸಲ್ಲಿಸಲು ನವೆಂಬರ್ ೧೫ ಕೊನೆಯ ದಿನವಾಗಿದ್ದು ಯುಯುಸಿಎಂಎಸ್ https://uucms.karnataka.gov.in/Login/Index ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ನೇರವಾಗಿ ಪತ್ರಿಕೋದ್ಯಮ ವಿಭಾಗಕ್ಕೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ೯೬೧೧೪೮೮೨೦೫ ಮೊಬೈಲ್…

Read More

ಉದಯರಶ್ಮಿ ದಿನಪತ್ರಿಕೆ ಬಿಜಾಪುರ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಎದೆ ನಡುಗಿಸಿದ, ಸಮ ಸಮಾಜಕ್ಕೆ ಶ್ರಮಿಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಕಾಂಗ್ರೇಸ್ ಪಕ್ಷದ ಜಿಲ್ಲಾ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಎಂ.ಬಿ.ಪಾಟೀಲ ಅವರಿಗೆ ಒತ್ತಾಯಿಸಿದರು.ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಭಾನುವಾರದಂದು ಟಿಎಸ್‌ಎಸ್ ಸಂಘಟನೆಯ ವತಿಯಿಂದ ನಡೆದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ದೇಶದಲ್ಲಿ ಈ ಹಿಂದೆ ಟಿಪ್ಪು ಸುಲ್ತಾನ್ ಅವರನ್ನು ಕಂಡರೆ ಬ್ರಿಟೀಷರು ಅಂಜುತ್ತಿದ್ದರು. ಆದರೆ ಇಂದು ಟಿಪ್ಪು ಸುಲ್ತಾನ್‌ಗೆ ಬಿಜೆಪಿ ಪಕ್ಷದವರು ಹೆದರುತ್ತಿದ್ದಾರೆ. ಯಾರೇ ಏನೆ ಅಂದರೂ ಟಿಪ್ಪು ಸುಲ್ತಾನ್ ಜಯಂತಿ ನಿಲ್ಲುವದಿಲ್ಲ ಎಂದು ನುಡಿದರು.ಅಹಿಂದ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಸಮಾಜದಲ್ಲಿ ಸಮಾನತೆಗೆ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ವಿರುದ್ದ…

Read More

ಸಿಂದಗಿಯಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ಹಿರಿಯ ಸಾಹಿತಿ ಹ. ಮ. ಪೂಜಾರ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ವಿಜ್ಞಾನ ಮೇಳಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚಾಣಿ ಹೇಳಿದರು.ಸಿಂದಗಿ ಪಟ್ಟಣದ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಇವುಗಳ ಸಹಯೋಗದಲ್ಲಿ ನಡೆದ ವಿಜ್ಞಾನ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಮುಖ್ಯ ಉದ್ದೇಶವಾಗಬೇಕು ಎಂದರು.ಈ ವೇಳೆ ಮಕ್ಕಳ ಹಿರಿಯ ಸಾಹಿತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮೇಳಗಳು ಮಕ್ಕಳಲ್ಲಿ ಹುದುಗಿಕೊಂಡಿರುವ ಸೃಜನಾತ್ಮಕ ಶಕ್ತಿಯನ್ನು ಹೊರಗಡೆ ಹಾಕುವಲ್ಲಿ ಹೆಚ್ಚು ಉಪಯುಕ್ತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ…

Read More

ಸಿಂದಗಿಯಲ್ಲಿ ವ್ಹಿಎಚ್ಪಿ, ಭಜರಂಗದಳ ವತಿಯಿಂದ ಮಠಾಧೀಶರ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: “ಆಸ್ತಿ ಊರ ಮಗ್ಗಲಕ್ ಒಂದಚೂರ ಹೆಚ್ಚಿಗೆ ಇತ್ತು ಅಂದರೆ ಅದನ್ನು ವಕ್ಫ್ ಹೆಸರಿಗೆ ಮಾಡಿಕೊಳ್ಳುವ ಜೊತೆಗೆ ಮಠಮಾನ್ಯಗಳ ಆಸ್ತಿನೂ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ನಾಳೆ ನಮ್ಮ ಧರ್ಮದ ಉಳಿವಿಗಾಗಿಯೂ ನಾವು ಹೋರಾಡುವ ಪರಿಸ್ಥಿತಿ ಬರುತ್ತದೆ” ಎಂದು ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಚದ್, ಸಿಂದಗಿ ಬಜರಂಗದಳ ವತಿಯಿಂದ ಮಠಾಧೀಶರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಕಾಯ್ದೆ ಜಾರಿಗೆ ಬರಬೇಕು. ಮುಸ್ಲಿಂರಿಗೊಂದು ಬೇರೆ ಕಾನೂನು ಇದು ಸಂವಿಧಾನ ಬಾಹಿರ. ರೈತರ, ಸಾರ್ವಜನಿಕರ ಮನೆ ಮಠದ ಆಸ್ತಿಗಳು ಯಾರದೋ ಪಾಲಾಗುವುದು ಬೇಡ. ಹಾಗೇನಾದರೂ ಆದರೆ ನಾವು ಮಠಾಧೀಶರು ಸುಮ್ಮನಿರುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಈ ಆಸ್ತಿ ಪತ್ರ, ಕಟ್ಟಡ ಪರವಾನಗಿ, ಹಿಂದುಳಿದ‌ ವಾರ್ಡಗಳಲ್ಲಿ ಸಮರ್ಪಕ‌ ಕುಡಿಯುವ ನೀರು ಪೂರೈಕೆ, ಪ್ರತಿ ತಿಂಗಳ ದಿನಾಂಕ 5 ರ ಒಳಗಾಗಿ ಎಸಿ ಎಸ್ಟಿ ಖಾತೆಗೆ ನಿವ್ವಳ ಲಾಭದ ಹಣವನ್ನು ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳು ‌ಮನವಿ ಸಲ್ಲಿಸಿದರು.ಸೋಮವಾರ ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮಾತನಾಡಿ, ಹಿಂದುಳಿದ ವಾರ್ಡ ನಂಬರ್ 16 ರಿಂ 20 ರವರೆಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಬೇಕು. ಮಾಹಿತಿ ಹಕ್ಕು ಅಧಿನಿಯಮ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳಿಗೆ ದಾಖಲೆ ಒದಗಿಸಬೇಕು. 20.10 ಖಾತೆಗೆ ಸರಕಾರದ ನಿರ್ದೇಶನದಂತೆ ಬಂದ ನಿವ್ವಳ ಲಾಭವನ್ನು ಎಸಿ ಎಸ್ಟಿ ಖಾತೆಗೆ ವರ್ಗಾವಣೆಗೊಳಿಸಬೇಕು. ಪೌರ ಕಾರ್ಮಿಕರಿಗೆ…

Read More

ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ | ಸೂಕ್ತ ಕ್ರಮಕ್ಕೆ ಅಭಿನವ ಸಂಗನಬಸವ ಶಿವಾಚಾರ್ಯರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಸೋಮವಾರ ರೈತರ ಹಾಗೂ ಸಾರ್ವಜನಿಕ ಆಸ್ತಿ ಉಳಿವಿಗಾಗಿ ಸೋಮವಾರ ರಸ್ತಾ ರೋಖೋ ಹಾಗೂ ವಕ್ಫ್ ವಿರೋಧಿಸಿ ಹೋರಾಟ ಜರುಗಿತು.ಪ್ರತಿಭಟನಾಕಾರರು ಕೆಲ ಹೊತ್ತು ವಕ್ಫ್ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ ಎಂ.ಎಸ್.ಜಾಗೀರದಾರ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರು ದಶಕಗಳಿಂದ ಬಿತ್ತಿ ಬೆಳೆಯುತ್ತಿರುವ ಜಮೀನುಗಳನ್ನು, ಮಠ-ಮಂದಿರ, ಶಾಲೆಗಳ ಸ್ವತ್ತುಗಳನ್ನು ವಕ್ಫ್ ಮಂಡಳಿಯ ಆಸ್ತಿಯನ್ನಾಗಿ ಮಾಡಲು ಹೊರಟವರಿಗೆ ತಕ್ಕ ಪಾಠ ಕಲಿಸುವ ಸಾಮರ್ಥ್ಯ ನಮ್ಮ ರೈತ ಬಾಂಧವರಿಗೆ ಹಿಂದು ಸಮಾಜಕ್ಕೆ ಇದೆ. ಸರ್ಕಾರ ರೈತರ ಉತಾರೆಯಲ್ಲಿ ವಕ್ ಆಸ್ತಿ ದಾಖಲಿಸಿ ನೀಡಿದ ನೊಟೀಸ್ ಮರಳಿ ಪಡೆದರೆ ಸಾಲದು ಉತಾರೆ ಪಹಣಿಯ ಕಾಲಂ ನಂ.೧೧ ರಲ್ಲಿರುವ ವಕ್ಫ್ಆಸ್ತಿ ಎಂದು…

Read More