ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ | ಸೂಕ್ತ ಕ್ರಮಕ್ಕೆ ಅಭಿನವ ಸಂಗನಬಸವ ಶಿವಾಚಾರ್ಯರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಸೋಮವಾರ ರೈತರ ಹಾಗೂ ಸಾರ್ವಜನಿಕ ಆಸ್ತಿ ಉಳಿವಿಗಾಗಿ ಸೋಮವಾರ ರಸ್ತಾ ರೋಖೋ ಹಾಗೂ ವಕ್ಫ್ ವಿರೋಧಿಸಿ ಹೋರಾಟ ಜರುಗಿತು.
ಪ್ರತಿಭಟನಾಕಾರರು ಕೆಲ ಹೊತ್ತು ವಕ್ಫ್ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ ಎಂ.ಎಸ್.ಜಾಗೀರದಾರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರು ದಶಕಗಳಿಂದ ಬಿತ್ತಿ ಬೆಳೆಯುತ್ತಿರುವ ಜಮೀನುಗಳನ್ನು, ಮಠ-ಮಂದಿರ, ಶಾಲೆಗಳ ಸ್ವತ್ತುಗಳನ್ನು ವಕ್ಫ್ ಮಂಡಳಿಯ ಆಸ್ತಿಯನ್ನಾಗಿ ಮಾಡಲು ಹೊರಟವರಿಗೆ ತಕ್ಕ ಪಾಠ ಕಲಿಸುವ ಸಾಮರ್ಥ್ಯ ನಮ್ಮ ರೈತ ಬಾಂಧವರಿಗೆ ಹಿಂದು ಸಮಾಜಕ್ಕೆ ಇದೆ. ಸರ್ಕಾರ ರೈತರ ಉತಾರೆಯಲ್ಲಿ ವಕ್ ಆಸ್ತಿ ದಾಖಲಿಸಿ ನೀಡಿದ ನೊಟೀಸ್ ಮರಳಿ ಪಡೆದರೆ ಸಾಲದು ಉತಾರೆ ಪಹಣಿಯ ಕಾಲಂ ನಂ.೧೧ ರಲ್ಲಿರುವ ವಕ್ಫ್ಆಸ್ತಿ ಎಂದು ಬರೆದಿರುವದನ್ನು ಶರತ್ಬದ್ಧ ದಾಖಲೆಗಳಿಲ್ಲದೇ ಮೊದಲಿನ ಉತಾರಿದಂತೆ ತಿದ್ದುಪಡಿ ಮಾಡುಬೇಕು. ರೈತ ಬಾಂಧವರಿಗೆ ಸರ್ಕಾರ ಯಾವುದೇ ರೀತಿಯಲ್ಲಿ ತೊಂದರೆ ಕೊಡಬಾರದು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದರು.
ಪ್ರತಿಭಟನೆ ಉದ್ದೇಶಿಸಿ ಮುಖಂಡರಾದ ಸಂಗನಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಡಾ.ಬಸವರಾಜ ಚವ್ಹಾಣ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರದೀಪ ಮುಂಜಾನೆ, ವಿವೇಕಾನಂದ ಕಲ್ಯಾಣಶೆಟ್ಟಿ, ಮಹೇಶ ಸಾಲವಾಡಗಿ, ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಮಲ್ಲನಗೌಡ ಅಥಣಿ, ರಾಹುಲ ಜಗತಾಪ, ಯಮನೂರಿ ಜಮಖಂಡಿ, ಮಣಿಕಂಠ ಕಲ್ಲೂರ, ಭಾಗ್ಯವಂತ ಇಂಗಳೇಶ್ವರ ಅಪ್ಪು ಭೂತನಾಳ, ಬಸವರಾಜ ಬಿಜಾಪುರ, ರಾಜು ಮುಳವಾಡ, ಮಹಾದೇವ ತಳವಾರ, ದಯಾನಂದ ಸಾರವಾಡ ಸೇರಿದಂತೆ ಇತರರು ಭಾಗವಹಿಸಿದ್ದರು.

