Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಕೆಯುಡಬ್ಲೂಜೆ ಆಗ್ರಹ

ಐದಾರು ತಿಂಗಳಿಂದ ಸಾಮಾನ್ಯ ಸಭೆ ಮಾಡದ ನಾಲತವಾಡ ಪಪಂ

ದೂರಾದ ದಂಪತಿಗಳನ್ನು ಬೆಸೆದ ಲೋಕ್ ಅದಾಲತ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನ್ಯಾಯ ದೊರಕುವವರೆಗೂ ಹೋರಾಟ :ಮಠಾಧೀಶರ ಗುಡುಗು
(ರಾಜ್ಯ ) ಜಿಲ್ಲೆ

ನ್ಯಾಯ ದೊರಕುವವರೆಗೂ ಹೋರಾಟ :ಮಠಾಧೀಶರ ಗುಡುಗು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿಯಲ್ಲಿ ವ್ಹಿಎಚ್ಪಿ, ಭಜರಂಗದಳ ವತಿಯಿಂದ ಮಠಾಧೀಶರ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಪ್ರತಿಭಟನೆ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: “ಆಸ್ತಿ ಊರ ಮಗ್ಗಲಕ್ ಒಂದಚೂರ ಹೆಚ್ಚಿಗೆ ಇತ್ತು ಅಂದರೆ ಅದನ್ನು ವಕ್ಫ್ ಹೆಸರಿಗೆ ಮಾಡಿಕೊಳ್ಳುವ ಜೊತೆಗೆ ಮಠಮಾನ್ಯಗಳ ಆಸ್ತಿನೂ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ನಾಳೆ ನಮ್ಮ ಧರ್ಮದ ಉಳಿವಿಗಾಗಿಯೂ ನಾವು ಹೋರಾಡುವ ಪರಿಸ್ಥಿತಿ ಬರುತ್ತದೆ” ಎಂದು ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಚದ್, ಸಿಂದಗಿ ಬಜರಂಗದಳ ವತಿಯಿಂದ ಮಠಾಧೀಶರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರ, ಸಾರ್ವಜನಿಕರ ಜಮೀನು ಉಳಿವಿಗಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಕಾಯ್ದೆ ಜಾರಿಗೆ ಬರಬೇಕು. ಮುಸ್ಲಿಂರಿಗೊಂದು ಬೇರೆ ಕಾನೂನು ಇದು ಸಂವಿಧಾನ ಬಾಹಿರ. ರೈತರ, ಸಾರ್ವಜನಿಕರ ಮನೆ ಮಠದ ಆಸ್ತಿಗಳು ಯಾರದೋ ಪಾಲಾಗುವುದು ಬೇಡ. ಹಾಗೇನಾದರೂ ಆದರೆ ನಾವು ಮಠಾಧೀಶರು ಸುಮ್ಮನಿರುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಈ ವಿಷಯ ವ್ಯಾಪಕವಾಗಿ ಹರಡಿರುವುದನ್ನು ನೋಡಿದರೆ ಮುಂಬರುವ ದಿನಮಾನಗಳಲ್ಲಿ ಶೋಚನಿಯ ಸ್ಥಿತಿ ಎದುರಾಗಲಿದೆ. ಏಕೆಂದರೆ ರೈತರ, ಸಾರ್ವಜನಿಕರ, ಮಠಮಾನ್ಯ ಹಾಗೂ ದೇವಸ್ಥಾನಗಳ ಜಮೀನುಗಳನ್ನು ಹೇಳದೆ ಕೇಳದೆ ವಕ್ಪ್ ಹೆಸರಿನಿಂದ ನೋಂದಾಯಿಸಿಕೊಂಡಿದ್ದಾರೆ. ಒಬ್ಬರ ಆಸ್ತಿ ದಾನ ಮಾಡಬೇಕಾದರೆ ಆಸ್ತಿಯ ಮಾಲೀಕ ಬಂದು ಬಿಟ್ಟುಕೊಡಬೇಕಾಗುತ್ತದೆ. ಆದರೆ ಇಲ್ಲಿ ಅಂತಹ ಕಾರ್ಯ ಏನೂ ನಡೆದಿಲ್ಲ. ಏಕಾಏಕಿ ವಕ್ಪ್ ಬೋರ್ಡ್ ಹೆಸರಿನಲ್ಲಿ ೧೧ನೆಯ ಕಾಲಂನಲ್ಲಿ ಹೆಸರು ಸೇರ್ಪಡೆಯಾಗಿದ್ದನ್ನು ಖಂಡಿಸುತ್ತೇವೆ. ರೈತರ ಆಸ್ತಿಯನ್ನು ವಕ್ಪ್ ಬೋರ್ಡಿಗೆ ತೆಗೆದುಕೊಳ್ಳುವಂತಹದ್ದು ಇದು ಭಗವಂತನ ಬೋರ್ಡ್ಲ್ಲ. ರೈತರ ಜಮೀನುಗಳು ವಕ್ಪ್ ಬೋರ್ಡಿಗೆ ತೆಗೆದುಕೊಳ್ಳುತ್ತಿರುವ ಸ್ಥಿತಿ ಶೋಚನಿಯ ಎಂದರು.
ಈ ಮೊದಲು ವಿಶ್ವ ಹಿಂದೂ ಪರಿಷತ್, ಸಿಂದಗಿ ಭಜರಂಗದಳ, ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸಾರಂಗಮಠದಿಂದ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯಲ್ಲಿ ಆಲಮೇಲ ಶ್ರೀಗಳು, ಬೋರಗಿ ಶ್ರೀಗಳು, ಕನ್ನೊಳ್ಳಿ ಶ್ರೀಗಳು, ಕುಮಸಗಿ ಶ್ರೀಗಳು, ವಿರಕ್ತಮಠದ ಶ್ರೀಗಳು, ಅಲ್ಲಾಪೂರ ಶ್ರೀಗಳು, ನಾಗಣಸೂರ ಶ್ರೀಗಳು, ಗೀತಾ ಅಂಗಡಿ, ಶೇಖಕರಗೌಡ ಹರನಾಳ, ಡಾ.ಶರಣಗೌಡ ಬಿರಾದಾರ, ಶ್ರೀಮಂತ ದುದ್ದಗಿ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲು ಸಾವಳಸಂಗ, ಪೀರು ಕೆರೂರ, ಶ್ರೀಕಾಂತ ಬಿಜಾಪುರ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಶೈಲಜಾ ಸ್ಥಾವರಮಠ, ರಾಜಕುಮಾರ ಭಾಸಗಿ, ಕಾಜು ಬಂಕಲಗಿ, ಅಶೋಕ ನಾರಾಯಣಪುರ, ಸಾಹೇಬಗೌಡ ಅಡವಿ, ಶಿವರಾಜ ಗುತ್ತರಗಿ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಇದ್ದರು.

“ಕೆಲವು ದಿನಗಳ ಹಿಂದೆ ಸಚಿವ ಜಮೀರಅಹ್ಮದ ಖಾನ್ ಅವರು ಮಾಧ್ಯಮದಲ್ಲಿ ಹೇಳಿದ್ದನ್ನು ಕೇಳಿದ್ದೇವೆ. ಜಮೀನುಗಳನ್ನು ಅಲ್ಲಾನ್ ಹೆಸರಲೇ ಮಾಡು ಎಂದು ಅಲ್ಲಾ ನನಗೆ ವಕ್ಪ್ ಬೋರ್ಡಿಗೆ ವರ್ಗಾಯಿಸು ಎಂದು ಹೇಳಿದ್ದಾನೆ ಅದಕ್ಕೆ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲಾ ಎಂದರೆ ಏನು ಎಂಬುದನ್ನು ಅವರಿಗೆ ಕೇಳಬೇಕು. ಏಕೆಂದರೆ ಈ ಭೂಮಂಡಲದಲ್ಲಿ ಭಗವಂತ ಎಲ್ಲರಿಗೂ ಆಸರೆ ನೀಡಿದ್ದಾನೆ.”

– ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಾರಂಗಮಠ, ಸಿಂದಗಿ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಕೆಯುಡಬ್ಲೂಜೆ ಆಗ್ರಹ

ಐದಾರು ತಿಂಗಳಿಂದ ಸಾಮಾನ್ಯ ಸಭೆ ಮಾಡದ ನಾಲತವಾಡ ಪಪಂ

ದೂರಾದ ದಂಪತಿಗಳನ್ನು ಬೆಸೆದ ಲೋಕ್ ಅದಾಲತ್

ಆಷಾಢ ಏಕಾದಶಿ ದಿಂಡಿಯಾತ್ರೆ, ಪಂಢರಾಪುರಕ್ಕೆ ಪಾದಯಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಕೆಯುಡಬ್ಲೂಜೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಐದಾರು ತಿಂಗಳಿಂದ ಸಾಮಾನ್ಯ ಸಭೆ ಮಾಡದ ನಾಲತವಾಡ ಪಪಂ
    In (ರಾಜ್ಯ ) ಜಿಲ್ಲೆ
  • ದೂರಾದ ದಂಪತಿಗಳನ್ನು ಬೆಸೆದ ಲೋಕ್ ಅದಾಲತ್
    In (ರಾಜ್ಯ ) ಜಿಲ್ಲೆ
  • ಆಷಾಢ ಏಕಾದಶಿ ದಿಂಡಿಯಾತ್ರೆ, ಪಂಢರಾಪುರಕ್ಕೆ ಪಾದಯಾತ್ರೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ತಾಲ್ಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಪ್ರಕರಣ ಶೀಘ್ರ ಇತ್ಯರ್ಥಪಡಿಸುವಲ್ಲಿ ಲೋಕ್ ಅದಾಲತ್ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಮಹಿಳಾ ಘಟಕಗಳನ್ನು ಸ್ಥಾಪಿಸಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸಿ
    In (ರಾಜ್ಯ ) ಜಿಲ್ಲೆ
  • ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರು ಹರಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿಶ್ವ ಜನಸಂಖ್ಯಾ-ಡೆಂಗೀ ಮಾಸಾಚರಣೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಕೃಷ್ಣೆಗೆ ಇಳಿದು ರೈತರ ವಿನೂತನ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.