Author: editor.udayarashmi@gmail.com

ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮೋದಿ :ಜಿಗಜಿಣಗಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು. ದೇಶದ ಅಭಿವೃದ್ಧಿಗಾಗಿ ಅವರು ಹಗಲಿರುಳು ಶ್ರಮಿಸಿದ್ದಾರೆ ಎಂದು ಲೋಕಸಭಾ ಸದಸ್ಯ ರಮೇಶ ಜಿಗಜಣಗಿ ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ನಗರದ ವಾರ್ಡ್ ನಂ. ೬ ರಾಜೇಂದ್ರ ನಗರದಲ್ಲಿ ಏರ್ಪಡಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಸೇವಾ ಚಟುವಟಿಕೆಯಲ್ಲಿ ನಮ್ಮ ಕಾರ್ಯಕರ್ತರು ತೊಡಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ ಮುಂತಾದ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವೆಂದರು.ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟಿಲ ಕುಚಬಾಳ ಮಾತನಾಡಿ, ವಿಶ್ವಕರ್ಮ ಯೋಜನೆಯಡಿ ಇದೇ ೨೦ರಂದು ದೇಶದ ೨೦ ಲಕ್ಷ ವಿಶ್ವಕರ್ಮರಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತದೆ. ಮಹಿಳೆಯರ ಘನತೆ ಹೆಚ್ಚಿಸಲು ಶೌಚಾಲಯ ನಿರ್ಮಾಣ, ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಾಗಿದೆ. ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ಶಿವ ಚಿದಂಬರ ದೇವಾಲಯದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಸರ್ವಸಾಧಾರಣ ಸಭೆಯಲ್ಲಿ ಈ ಎಲ್ಲ ಆಯ್ಕೆ ಪ್ರಕ್ರಿಯೆ ಹಾಗೂ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಮಿತಿ ವತಿಯಿಂದ ಕೈಗೊಳ್ಳಬಹುದಾದ ಕಾರ್ಯಚಟುವಟಿಕೆಗಳ ಕುರಿತು ಕಾರ್ಯ ಯೋಜನೆ ರೂಪಿಸಲಾಯಿತು.ನಿಕಟಪೂರ್ವ ಉಪಾಧ್ಯಕ್ಷ ಮಹಾದೇವ ಜೋಶಿ ಅಧ್ಯಕ್ಷತೆ ವಹಿಸಿದ್ದರು.ಸಮಿತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ ಕುಲಕರ್ಣಿ, ಉಪಾಧ್ಯಕ್ಷರಾಗಿ ಅಂಬಾದಾಸ ಜೋಶಿ, ಕಾರ್ಯದರ್ಶಿಯಾಗಿ ವೆಂಕಟೇಶ ಜೋಶಿ ನಂದವಾಡಗಿ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾಗಿ ಶಂಕರ್ ಭಟ್ ಅಗ್ನಿಹೋತ್ರಿ, ಚಿದಂಬರ ಪಾಟೀಲ, ವಿ.ಸಿ. ಕುಲಕರ್ಣಿ, ರಾಘವೇಂದ್ರ ಜೋಶಿ ಸಂಕನಾಳ, ವೆಂಕಟೇಶ ಜೋಶಿ ಹಡ್ಲಿಗೇರಿ, ಮುಕುಂದ ಹಂಗರಗಿ, ಸುಧೀಂದ್ರ ಕುಲಕರ್ಣಿ, ಚಿದಂಬರ ಜೋಶಿ, ವಿಜಯ ಜೋಶಿ, ಉಪೇಂದ್ರ ದೇಸಾಯಿ ಅವರು ಆಯ್ಕೆಯಾದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದಪ್ರಾಣೇಶ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ರಾಘವೇಂದ್ರ ಆಲಗೂರ, ಎ.ಡಿ. ದೇಶಪಾಂಡೆ, ಆರ್.ಬಿ. ಕುಲಕರ್ಣಿ, ಕೃಷ್ಣಾ ಜೋಶಿ, ರಾಮಚಂದ್ರ, ಮೊರೆ ಚಿದಂಬರ ಮಮದಾಪೂರ, ಯಲಗೂರೇಶ ದೇಶಪಾಂಡೆ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಶ್ವಕರ್ಮ ಸಮಾಜವು ಜಗತ್ತಿಗೆ ಅನನ್ಯ ಕೊಡುಗೆ ನೀಡಿದ ಸಮಾಜ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೃಷಿಗೆ ಪೂರಕವಾದ ಸಾಮಾಗ್ರಿಗಳನ್ನು ಒದಗಿಸುವ ವಿಶ್ವಕರ್ಮ ಸಮಾಜ ರೈತರ ಬೆನ್ನೆಲುಬು ಆಗಿದ್ದಾರೆ ಎಂದು ಗ್ರೇಡ್ – 2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಹೇಳಿದರು.ಮಂಗಳವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿರುವ ವಿಶ್ವಕರ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಪೊದ್ದಾರ ಮಾತಾನಾಡಿ, ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ ವಿಶ್ವಕರ್ಮರ ಹಿನ್ನೆಲೆ, ಕಾರ್ಯವೈಖರಿ, ದೇವಾನುದೇವತೆಗಳನ್ನು ಮೂರ್ತರೂಪಕ್ಕೆ ತಂದದ್ದನ್ನು ಹಾಗೂ ಈಶ್ವರನಿಗೆ ತ್ರಿಶೂಲ, ಶ್ರೀಕೃಷ್ಣ ಪರಮಾತ್ಮನಿಗೆ ದ್ವಾರಕಾ ನಗರ, ರಾವಣನಿಗೆ ಅರಮನೆ, ಪಾಂಡವರಿಗೆ ಅರಮನೆಯಾಗಿದ್ದ ಇಂದ್ರ ಸ್ಥವನ್ನು, ಕಾರ್ತಿಕೇಯನಿಗೆ ಭರ್ಜಿಯನ್ನು ನಿರ್ಮಿಸಿಕೊಟ್ಟ ಬಗೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.ಇನ್ನು ಪಂಚಕುಲಕಸುಬಗಳನ್ನು ನಿರ್ವಹಿಸಲು ಯುವ ಸಮಾಜ ಮುಂದೆ ಬರುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳನ್ನು ಹಿನ್ನಡೆಯಾಗುತ್ತಿದೆ. ಉತ್ತಮ ಶಿಕ್ಷಣ ದೊರೆಯುತ್ತಿದ್ದರೆ ಕುಲಕಸುಬುಗಳು ಇಂದಿಗೂ ಉಳಿಯುತ್ತಿತ್ತು. ಕುಲ ಕಸುಬು ನಶಿಸಿದರೆ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದ್ದು, ಕುಲ…

Read More

’ಸ್ವಚ್ಚತಾ ಹೀ ಸೇವಾ’ ಅಭಿಯಾನಕ್ಕೆ ಚಾಲನೆ ನೀಡಿದ ಜಿಪಂ ಸಿಇಒ ರಿಷಿ ಆನಂದ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಚ್ಚತಾ ಹಿ ಸೇವಾ ಅಭಿಯಾನಕ್ಕೆ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಚಾಲನೆ ನೀಡಿದರು.ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತನ ಎಲ್ಲಾ ಕೊಠಡಿ, ವಾಹನ ನಿಲುಗಡೆ ಸ್ಥಳ, ಸಾರ್ವಜನಿಕರ ಭೇಟಿ ಸ್ಥಳ ಮತ್ತು ಉದ್ಯಾನ ಸ್ಥಳವು ಸೇರಿದಂತೆ ಒಳಾಂಗಣ ಮತ್ತು ಹೊರ ಆವರಣಗಳನ್ನು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯ ಸಹಯೋಗದೊಂದಿಗೆ ಇಂದು ಭಾರತದಾದ್ಯಂತ ಹಮ್ಮಿಕೊಂಡಿರುವ ಸ್ವಭಾವ ಸ್ವಚ್ಚತಾ, ಸಂಸ್ಕಾರ ಸ್ವಚ್ಚತಾ ಎಂಬ ಘೋಷವಾಕ್ಯದೊಂದಿಗೆ ಸೆಪ್ಟೆಂಬರ ೧೭ ರಿಂದ ಅಕ್ಟೋಬರ್ ೦೨ ರವರೆಗೆ ಎರಡು ವಾರಗಳ ಕಾಲ ಜಿಲ್ಲಾ ಹಾಗೂ ತಾಲೂಕು, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ದಿನವೂ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ’ ಎಂದು ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಇಸಿಒ ಎ.ಸಿ. ಹುಣಸಿಗಿ ಹೇಳಿದರು.ಪಟ್ಟಣದ ಪ್ರತಿಷ್ಠಿತ ಎಕ್ಸೆಲೆಂಟ್ ಆಂಗ್ಲ‌ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ನಡೆದ ಕ್ಲಸ್ಟರ್ -2 ರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತು 2024 ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ’ ಎಂದು ಹೇಳಿದರು.ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ…

Read More

ಕಳೆದ 4 ತಿಂಗಳಿಂದ ಬಾರದ ಗೌರವಧನ | ಕುಟುಂಬ ನಿರ್ವಹಣೆಗೆ ಅತಿಥಿ ಶಿಕ್ಷಕರ ಪರದಾಟ ಉದಯರಶ್ಮಿ ದಿನಪತ್ರಿಕೆ ಇಂಡಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ 4 ತಿಂಗಳಿನಿಂದ ಗೌರವಧನ ಬಾರದೆ ಕುಟುಂಬ ನಿರ್ವಹಣೆಗೆ ಅತಿಥಿ ಶಿಕ್ಷಕರು ಪರದಾಡುವಂತಾಗಿದೆ. ಕೂಡಲೇ ಬಾಕಿ ಇರುವ ಗೌರವಧನವನ್ನು ಬಿಡುಗಡೆಗೊಳಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದರೆ ಉಪವಾಸ ಜೊತೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಡಿ ಎಮ್ ಕಲಕೇರಿ ಹೇಳಿದರು.ಮಂಗಳವಾರ ಪಟ್ಟಣದ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಸಲ್ಲಿಸಿ ಅವರು ಮಾತನಾಡಿದರು.ಪ್ರಸಕ್ತ ಮಾರ್ಚ 2024-25 ನೇ ಸಾಲಿನ ವೇತನವನ್ನು ಇ.ಪಿ.166 ಹಾಗೂ ಎಸ್.ಇ.ಎಸ್ 2023 ರ ಸರ್ಕಾರದ ಆರ್ಥಿಕ ಇಲಾಖೆಯ ಆದೇಶದಂತೆ ಪ್ರಾಥಮಿಕ ಅತಿಥಿ ಶಿಕ್ಷಕರಿಗೆ 15000 ಹಾಗೂ ಫ್ರೌಢಶಾಲಾ ಅತಿಥಿ ಶಿಕ್ಷಕರಿಗೆ 16000 ರೂ. ಸಂಬಳವನ್ನು ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ನೇಮಕಗೊಂಡ ಮುಖ್ಯಗುರುಗಳ…

Read More

ಮುದ್ದೇಬಿಹಾಳದಲ್ಲಿ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣ ವರ್ಗ ಭಗವದ್ಗೀತೆ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ :ಮಣಿ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಧರ್ಮದ ವಿರುದ್ಧವೇ ಧರ್ಮವಾಗಿದೆ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಭಗವದ್ಗೀತಾ ಅಭಿಯಾನ ಪ್ರಶಿಕ್ಷಣ ಪ್ರಮುಖ ಅರುಣ ಶಹಾಪೂರ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ, ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನಡೆಸುತ್ತಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿರುವ ಪ್ರಶಿಕ್ಷಣ ವರ್ಗದಲ್ಲಿ ವರು ಮಾತನಾಡಿದರು.ಭಾಷೆಯ ಸ್ಪಷ್ಟ ಉಚ್ಛಾರಣೆ ಮತ್ತು ಜ್ಞಾನದ ಅಭಿವೃದ್ಧಿಗೆ ಸಂಸ್ಕೃತ ಭಾಷೆಯ ಅಧ್ಯಯನದ ಅವಶ್ಯಕತೆ ಇದೆ. ಆತ್ಮತೃಪ್ತಿಗಾಗಿ ಧರ್ಮದ ಕಾರ್ಯವನ್ನು ಮಾಡಬೇಕಾಗಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯ ಪಾಲನೆ, ಪೋಷಣೆ ಆಗಬಾರದಾಗಿದೆ. ಧರ್ಮವನ್ನು ಸರಿಯಾಗಿ ಅರ್ಥೈಸಿ ನಾವೆಲ್ಲ ನಡೆಯಬೇಕಾಗಿದೆ. ಧರ್ಮದ ಒಳ್ಳೆಯ ಅಂಶಗಳು ಮೈಮನಗಳಲ್ಲಿ ತುಂಬಿಕೊಳ್ಳಬೇಕಾಗಿದೆ. ಭಗವದ್ಗೀತೆಯ ಸಂದೇಶ ಪ್ರತಿಯೊಬ್ಬರ ಮನೆಮನೆಗಳಿಗೆ ತಲುಪಬೇಕಾಗಿದೆ ಎಂದರು.ಪ್ರಶಿಕ್ಷಣ ವರ್ಗ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹೊಟ್ಟೆ ನೋವು ತಾಳದೇ ವಿದ್ಯಾರ್ಥಿನಿಯೊಬ್ಬಳು ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ತಂಗಡಗಿಯ ನೀಲಮ್ಮ ದೇವಸ್ಥಾನದ ಬಳಿ ನಡೆದಿದೆ.ಮೃತ ವಿದ್ಯಾರ್ಥಿನಿಯನ್ನು ಬಾಲಮ್ಮ ಕಮರಿ(೧೮) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮ ದವಳಾಗಿದ್ದ ಬಾಲಮ್ಮ ಇಳಕಲ್‌ದಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆ ಸ೧೪ ರಂದು ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಅಂದು ಮದ್ಯಾಹ್ನ ೧:೩೦ ರ ಸುಮಾರು ತಂಗಡಗಿಯ ನೀಲಮ್ಮ ದೇವಿ ದೇವಸ್ಥಾನದ ಬಳಿ ಬ್ಯಾಗ್ ಮತ್ತು ಚಪ್ಪಲಿ ಬಿಟ್ಟು ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಅಂದು ನದಿಗೆ ಹಾರಿದ ಬಾಲಮ್ಮಳ ಶವ ಸ೧೬ ರಂದು ತಾಲೂಕಿನ ಇಂಗಳಗಿಯಲ್ಲಿ ಪತ್ತೆಯಾಗಿದೆ.ಪತ್ತೆಯಾದ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರಮೋದ ಸುಂಕದ್, ಚಂದ್ರಶೇಖರ ಮಾದರ, ಬಿ.ಬಿ.ನಾಟೆಕಾರ, ನಾಗೇಶ ರಾಠೋಡ, ರಾಜು ರಾಠೋಡ, ವೈ.ಎಸ್.ಗೌಡರ, ಜಾವೇದ, ಕಾರ್ತಿಕ ನಾಟೆಕಾರ, ವಿರುಪಾಕ್ಷಿ, ರಂಗನಗೌಡ, ನಿಂಗನಗೌಡ ಹೊರತೆಗೆದು ಪೊಲೀಸರಿಗೆ ಹಸ್ತಾಂತರಿಸಿದರು.ಘಟನೆಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ಪಂಜುರ್ಲಿ ಹೋಟಲ್ ನಲ್ಲಿ ಸೆ.೧೮ ರಂದು ಬೆಳಿಗ್ಗೆ ೧೦ಗಂಟೆಗೆ ವಿಶ್ವ ಪೌಷ್ಟಿಕ ದಿನಾಚರಣೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು. ಕಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮತಿಯ ಸದಸ್ಯ ಕಾರ್ಯದರ್ಶಿಗಳಾದ ಸಂಪತ್ತಕುಮಾರ ಬಳೂಳಗಿಡದ ಉಪಸ್ಥಿತಿಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅಧ್ಯಕ್ಷತೆ ವಹಿಸುವರು. ಹಿ.ಶ್ರೇ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ಅಪರ ಸರ್ಕಾರ ವಕೀಲ ಎಚ್.ಎಲ್.ಸರೂರ, ಕಿ.ಶ್ರೇ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ತಹಶೀಲ್ದಾರ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯತ ಇಓ ನಿಂಗಪ್ಪ ಮಸಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಪಟ್ಟಣ ಪಂಚಾಯತ ಹಾಗೂ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮ ನಡೆಯಿತು.ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಬೂದಹಾಳ ಮಾತನಾಡಿ, ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಎಲ್ಲರೂ ಶ್ರಮಿಸಬೇಕು. ಮತ್ತು ಸಾರ್ವಜನಿಕರಿಗೆ ವಿವಿಧ ಬಗೆಯ ಅಭಿಯಾನಗಳ ಮೂಲಕ ಅರಿವು ಮೂಡಿಸಬೇಕು. ಎಲ್ಲರೂ ತಮ್ಮ ತಮ್ಮ ಮನೆಯ ಸುತ್ತಲೂ ಇರುವ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಾನವ ಸರಪಳಿ ಮಾಡಿ ಘೋಷವಾಕ್ಯಗಳನ್ನು ಹೇಳಲಾಯಿತು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರುದ್ರಗೌಡ ಸೋಲಾಪುರ್, ಅರೋಗ್ಯ ನೀರಿಕ್ಷಕ ಬಸವರಾಜ್ ಕಾಜಿಬಿಳಗಿ, ಶಿಕ್ಷಕರಾದ ಎಸ್. ಎ. ಗಂಗನಗೌಡರ, ಮಹಮ್ಮದ್ ಪಟೇಗಾರ್, ಹರೀಶ್ ಬಬಲೇಶ್ವರ್, ಉಮಾ ಜಾಧವ, ಗಂಗಾ ಕೋಲಕಾರ್, ಗೀತಾ ಕೋಲಾಕಾರ ಸ್ವೇತಾ ಇನಾಮದಾರ್, ಸೌಭಾಗ್ಯ ಮಿರ್ಜಿ ಹಾಗೂ ಪೌರಾಕಾರ್ಮಿಕರು ಭಾಗವಹಿಸಿದ್ದರು.

Read More