ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೦೨೬ ನೇ ಸಾಲಿನಲ್ಲಿ ಹೆಸ್ಕಾಂ ಜಾಗೃತದಳದ ಪೊಲೀಸ್ ಠಾಣೆಯಲ್ಲಿ ದಾಖಲಾದ ೨೦೮ ಪ್ರಕರಣಗಳನ್ನು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲೊಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿ, ೫೬,೨೯,೧೭೧ ರೂ. ದಂಡ ವಿಧಿಸಿದೆ. ೧ನೇ ಪ್ರಕರಣದ ಆರೋಪಿಗಳಿಗೆ ೧೭,೯೭,೩೧೯ ರೂ. ದಂಡ, ೨ನೇ ಪ್ರಕರಣದ ಆರೋಪಿಗಳಿಗೆ ೮,೦೯,೩೫೩ ರೂ. ಗಳನ್ನು ನ್ಯಾಯಾಲಯ ದಂಡ ವಿಧಿಸಿದೆ. ಹೆಸ್ಕಾಂ ಜಾಗೃತದಳದ ಅಧಿಕಾರಿಗಳಾದ ಚಂದ್ರಪ್ಪ ಚಿಕ್ಕೋಡಿ, ಎಇಇ ಕೋಟ್ರಪ್ಪ ಹರನಾಳ, ಪಿಎಸ್ ಐ ಸುರೇಖಾ ಗಲಗಲಿ, ಎಇ ಸಂತೋಷ ರಾಠೋಡ ಹಾಗೂ ಹೆಸ್ಕಾಂ ಜಾಗೃತದಳ ಠಾಣೆ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
