Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಬಸ್ಸಿಗೆ ಓಡಾಡಲು ತಮಗೆ ಸಾಧ್ಯವಿಲ್ಲವೆಂದು ಯಾವಾಗಲೂ ಕಾರಿನಲ್ಲಿಯೇ ಓಡಾಡುವುದಾಗಿ ಹೇಳಿದ ಆಕೆ ತಮ್ಮ ಮಗಳ ಮದುವೆಗೆ ಹಲವಾರು ಚಿನ್ನದ ಒಡವೆಗಳನ್ನು ಮಾಡಿಸಿದ್ದು ದುಬಾರಿ ಬೆಲೆಯ ಸೀರೆಗಳನ್ನು ಖರೀದಿಸಿ ಡಿಸೈನರ್ ಬ್ಲೌಸ್ ಗಳನ್ನು ಹೊಲಿಸಿರುವುದಾಗಿ ಒಣ ಪ್ರತಿಷ್ಠೆಯಿಂದ ಹೇಳುತ್ತಿದ್ದಳು.ಇದೆಲ್ಲ ಸಹಜ ಎಂದು ಭಾವಿಸಿ ನಾನು ಸುಮ್ಮನೆ ಕೇಳುತ್ತಿದ್ದರೂ ಆಕೆ ಬಂದ ಕಾರಣ ಮಾತ್ರ ತಿಳಿಯಲಿಲ್ಲ.ತುಸು ಹೊತ್ತಿನ ನಂತರ ಆಕೆ ತಾನು ಹೊರಡುತ್ತೇನೆ ಎಂದೂ ಕುಂಕುಮ ಕೊಡಲು ಕೇಳಿದಳು. ಆಕೆಗೆ ಕುಂಕುಮ ನೀಡಲು ಹೊರಬಂದ ನನಗೆ ತುಸು ಓರೆಗೆ ಕರೆದೊಯ್ದ ಆಕೆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಮಗಳ ಮದುವೆ ಫಿಕ್ಸ್ ಆಗಿದ್ದು ಇನ್ನೊಂದು ವಾರದಲ್ಲಿ ಮದುವೆ ಇದೆ ಆದ್ದರಿಂದ ಸಾಧ್ಯವಿದ್ದಷ್ಟು ಹಣ ಸಹಾಯ ಮಾಡಲು ಕೇಳಿಕೊಂಡಳು. ಒಮ್ಮಿಂದೊಮ್ಮೆಲೆ ಆಕೆ ಹೀಗೆ ಕೇಳಿಕೊಂಡಾಗ ನನಗೆ ತುಸು ಗಾಬರಿಯೆನಿಸಿದರೂ ನನ್ನ ಪತಿಯನ್ನು ಕೇಳಿ ನೋಡುತ್ತೇನೆಂದು ಹೇಳಿ ಆಕೆಯನ್ನು ಸಾಗ ಹಾಕಿದೆ.ನನ್ನ ಪತಿಗೆ ಆಕೆಯ ವಿಷಯವನ್ನು…
ನಷ್ಟಗೊಂಡಿರುವ ರೈತರಿಗೆ ಪರಿಹಾರ ಅಥವಾ ವಿಮೆ ಹಣ ನೀಡುವಂತೆ ರೈತರ ಆಗ್ರಹ ಉದಯರಶ್ಮಿ ದಿನಪತ್ರಿಕೆ ತಾಳಿಕೋಟಿ: ತಾಲೂಕಿನ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳಲ್ಲಿ ರೈತರು ವಾಣಿಜ್ಯ ಬೆಳೆ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ, ಇದಿಗ ಹೂವು ಉದರಿ ಕಾಳು ಕಟ್ಟದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ, ಇದಕ್ಕೆ ಕಳಪೆ ಬೀಜ ವಿತರಣೆಯೇ ಮುಖ್ಯ ಕಾರಣ ಆದ್ದರಿಂದ ನಷ್ಟಗೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಪ ತಹಶಿಲ್ದಾರರಾದ ಜೆ.ಐ.ತುಬಾಕೆ ಹಾಗೂ ಕೃಷಿ ಅಧಿಕಾರಿಗಳಾದ ಎಂ.ಹೆಚ್ ಬೀಳಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.ಸರಕಾರದಿಂದ ಕೃಷಿ ಇಲಾಖೆಯಲ್ಲಿ ಕೊಟ್ಟಿರುವ ತೊಗರಿ ಬೀಜ ಜಿ.ಆರ್.ಜಿ ೧೫೨ ಹಾಗೂ ೮೧೧ ಸಂಪೂರ್ಣ ಕಳಪೆಯಿಂದ ಒಟ್ಟಾರೆಯಾಗಿ ಬೀಜ ಕಟ್ಟದೇ ಕೃಷಿಗೆ ಮಾಡಿರುವ ಸಾಲ ತಿರಿಸಲಾಗದೇ ರೈತರು ಚಿಂತೆಗಿಡಾಗಿದ್ದಾರೆ. ಕೂಡಲೇ ಕಳಪೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾ ಸಮಾಜದ ವಿವಿಧ ರಂಗಗಳ ಮೇಲೆ ಬೆಳಕು ಛಲ್ಲುತ್ತಾ ತಮ್ಮ ಜೀವನವನ್ನೇ ಸಮಾಜಕ್ಕೆ ಮುಡುಪಾಗಿಡುತ್ತಾ ಬಂದಿರುವ ,ಕವಿ ಸಾಹಿತಿಗಳ ಆರ್ಥಿಕ ಸ್ಥಿತಿ ಬಹಳಷ್ಡು ಕಡೆ ಚಿಂತಾಜನಕವಾಗಿರುತ್ತದೆ. ಕವಿ ಸಾಹಿತಿಗಳು ಆರ್ಥಿಕವಾಗಿಯೂ ಸಮರ್ಥರಾದರೆ ಸಮಾಜಕ್ಕೆ ಮತ್ತಷ್ಡು ಕೊಡುಗೆ ನಿರೀಕ್ಷಿಸಲು ಸಾಧ್ಯವಾಗುತ್ತದೆ, ಕಾರಣ ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮತ್ತು ಇತರ ಸೌಲಭ್ಯಗಳಲ್ಲಿ ಕವಿ ಸಾಹಿತಿಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ಕವಿಪೀಠದ ಜನಕ ಕಪ್ಪುಕೋಟಿನ ಕವಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.ಅವರು ಧಾರವಾಡದಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಕವಿಪೀಠ ಮಹಾ ಸಮ್ಮೇಳನ ಹಾಗೂ ಕನ್ನಡ ನುಡಿ ಸಂಭ್ರಮದ ಸರ್ವಾಧ್ಯಕ್ಷರಾಗಿ ಸಮರ್ಥವಾಗಿ ಮಾಹಾ ಸಮ್ಮೇಳಮದ ಯಶಸ್ವಿಗೊಳಿಸಿ ವಿಜಯಪುರಕ್ಕೆ ಆಗಮಿಸಿರುವ ಅವರಿಗೆ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ನಮ್ಮ ಸಮಾಜದಲ್ಲಿಯ ಕವಿ- ಸಾಹಿತಿಗಳಿಗೆ ಸಮ್ಮೇಳನಗಳಿಗೆ ಹೋಗಿ ಬರಲು ಉಚಿತ ಬಸ್ ಪಾಸ್ ಸೌಲಭ್ಯ ಸಹ ಕಲ್ಪಿಸಬೇಕಾದದ್ದು ಅಗತ್ಯವಿದೆ, ವಿಶೇಷವಾಗಿ ರಾಜ್ಯದಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ಅಥವಾ ಸರಕಾರಿ ಬಡವಾಣೆಗಳಿಗೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಪರಿಶ್ರಮದಿಂದ ಸಾಧನೆ ಮಾಡುವ ಮೂಲಕ ತಮ್ಮ ಮನೆಗೆ, ತಾವು ಕಲಿಯುವ ಕಾಲೇಜಿಗೆ, ಊರಿಗೆ ಕೀರ್ತಿ ತರುವ ತರಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕಾಲೇಜಿನ ವಿವಿಧ ಘಟಕಗಳ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ನಿರಂತರ ಅಧ್ಯಯನದಲ್ಲಿ ತೊಡಗುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಕಾಲೇಜಿನ ಅಭಿವೃದ್ಧಿಗೆ ಸದಾ ನಿಮ್ಮೊಂದಿಗೆ ಇರುವುದಾಗಿ ಹೇಳಿದರು.ಬೀಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂಪತ್ ಲಮಾಣಿ ಮಾತನಾಡಿ, ಸರ್ಕಾರಿ ಕೆಲಸ ಗಿಟ್ಟಿಸುವುದು ಸಾಧನೆ ಅಲ್ಲ. ಸ್ವಾವಲಂಬನೆ, ಸ್ವಾಭಿಮಾನದ ಬದುಕೇ ನಿಜವಾದ ಸಾಧನೆ. ಬಡತನ ಮತ್ತು ಹಸಿವು ಶಾಪವಲ್ಲ. ಸಾಧಕರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಡಿ.೧ ರಿಂದ ೩ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.೧ರಂದು ಮಧ್ಯಾಹ್ನ ೧-೪೫ಕ್ಕೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಗ್ರಾಮಕ್ಕೆ ಆಗಮಿಸಿ ಅಂದು ವಾಸ್ತವ್ಯ ಮಾಡಲಿದ್ದಾರೆ.ಡಿ.೨ರಂದು ಬೆಳಿಗ್ಗೆ ೯ ಗಂಟೆಗೆ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ೨-೩೦ರಿಂದ ಸಂಜೆ ೫-೩೦ರವರೆಗೆ ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಡಿ.೩ರಂದು ಬೆಳಿಗ್ಗೆ ೧೦-೩೦ಕ್ಕೆ ವಿವಿಧ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ವಿವಿಧ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಸಂಜೆ ೬ ಗಂಟೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಬಾರ್ ಅಸೋಸಿಯೇಶ್ ವತಿಯಿಂದ ಹಮ್ಮಿಕೊಂಡ ‘ನ್ಯಾಯವಾದಿಗಳ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ೭-೩೦ಕ್ಕೆ ವಿಜಯಪುರದಿಂದ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ…
ಹರಳಯ್ಯ ಪ್ರೌಢಶಾಲೆಗೆ ವಿಷಯ ಪರಿವೀಕ್ಷಕರ ಅನಿರೀಕ್ಷಿತ ಭೇಟಿ | ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆ ಸಂವಾದ | ಬದ್ದತೆಯಿಂದ ಪರೀಕ್ಷೆ ಎದುರಿಸಲು ಸಲಹೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಪ್ರಸ್ತುತ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಗೆ ಮಕ್ಕಳು ಈಗಿಂದಲೇ ಮಾನಸಿಕವಾಗಿ ಸಿದ್ದತೆಗೊಳ್ಳಬೇಕು. ಆ ದಿಸೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷಾ ಮುಖ್ಯ ವಾಹಿನಿಗೆ ತರಲು ಶಿಕ್ಷಕರು ಪ್ರಯತ್ನಿಸಬೇಕಲ್ಲದೇ ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ವಹಿಸಬೇಕು ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರ ಕಚೇರಿಯ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ ಸಲಹೆಯಿತ್ತರು.ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು.ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪಠ್ಯ ವಿಷಯ ಕುರಿತು ಸಂವಾದ ನಡೆಸಿದ ಅವರು, ಪರೀಕ್ಷೆಗೆ ಸಿದ್ದರಾಗಲು ಈಗಿನಿಂದಲೇ ಸಕಲ ಓದಾಭ್ಯಾಸದ ತಯಾರಿ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಕ್ಕಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಬಿಎಲ್‌ಡಿಇ ಸಂಸ್ಥೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ಎ.ಎಸ್.ಪಿ ಕಾಮರ್ಸ ಕ್ಯಾಂಪಸ್‌ನಲ್ಲಿ ಜರುಗಿದ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ–೨೦೨೪ ರಲ್ಲಿ ಸ್ಪರ್ಧೆ ಮಾಡಿದ ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಕಾಲೇಜಿನ ಕೀರ್ತಿಗೆ ಭಾಜನರಾಗಿದ್ದಾರೆ.ವಿಜ್ಞಾನ ಮಾದರಿ ತಯಾರಿಕೆ ವೈಯಕ್ತಿಕ ವಿಭಾಗದಲ್ಲಿ ಸಂದೇಶ ಅಮರಶೆಟ್ಟಿ(ಪ್ರಥಮ), ಅನುರಾಧಾ ಕೇಶ್ವಾಪುರ(ದ್ವಿತೀಯ), ವಿರೇಶ ಪಟ್ಟಣಶೆಟ್ಟಿ(ತೃತೀಯ) ಸ್ಥಾನಗಳನ್ನು ಪಡೆದುಕೊಂಡರೆ ಗುಂಪು ವಿಭಾಗದಲ್ಲಿ ವಿಜಯಕುಮಾರ ತೋಡಗಿ ತಂಡ(ಪ್ರಥಮ), ಪ್ರತೀಕ ಗಿರಣಗೌಡ ತಂಡ(ದ್ವಿತೀಯ), ಸುತೇಜ್ ಕುಲಕರ್ಣಿ ತಂಡ(ತೃತೀಯ) ಸ್ಥಾನ ಪಡೆದುಕೊಂಡರು. ಭಾಷಣ ಸ್ಪರ್ಧೆಯಲ್ಲಿ ಕೋಮಲ್ ಭಾವಿಕಟ್ಟಿ (ದ್ವಿತೀಯ), ಪೇಂಟಿಗ್ ಸ್ಪರ್ಧೆಯಲ್ಲಿ ಅನುಷ್ಕಾ ಶಾಬಾದಿ(ದ್ವಿತೀಯ), ಕವಿತೆ ರಚನೆ ಸ್ಪರ್ಧೆಯಲ್ಲಿ ಸಾವಿತ್ರಿ ಕುಲಕರ್ಣಿ(ತೃತೀಯ),ಮೊಬೈಲ್ ಪೋಟೋಗ್ರಫಿ ಸ್ಪರ್ಧೆಯಲ್ಲಿ ಭಾಸ್ಕರ ನ್ಯಾಮಗೊಂಡ(ದ್ವಿತೀಯ), ಭಾಸ್ಕರ ವಿಧಾತೆ(ತೃತೀಯ)…
೨೮ ಜನ ಸದಸ್ಯರಲ್ಲಿ ೧೯ ಸದಸ್ಯರು ನಿಲುವಳಿ ಪರ ಮತದಾನ | ತೀವ್ರ ಬಂದೋಬಸ್ತ | ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ತೀವೃ ಕುತೂಹಲ ಕೆರಳಿಸಿದ್ದ ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಮಾಲಾ ಅಶೋಕ ಮೋಟಗಿಯವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿಗೆ ಜಯ ದೊರೆತಿದ್ದು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.ಸ್ಥಳಿಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಉಪ-ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಧ್ಯಕ್ಷತೆಯಲ್ಲಿ ಶನಿವಾರ ಮುಂಜಾನೆ ನಡೆದ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಪರ್ಯಾಲೋಚನಾ ಸಭೆಯಲ್ಲಿ ಗ್ರಾ.ಪಂ. ಒಟ್ಟು ೨೮ ಜನ ಸದಸ್ಯರಲ್ಲಿ ೨೩ ಜನ ಸದಸ್ಯರು ಹಾಜರಿದ್ದು ೧೯ ಜನ ಸದಸ್ಯರು ನಿಲುವಳಿ ಪರ ಮತದಾನ ಮಾಡಿದರೆ ನಾಲ್ವರು ವಿರುದ್ದ ಮತ ನೀಡಿದರು. ನಿಲುವಳಿಗೆ ಅಗತ್ಯವಿದ್ದ (೨/೩ ಅನುಪಾತದಂತೆ) ೧೯ ಜನ ಸದಸ್ಯರು ಅವಿಶ್ವಾಸ ಮಂಡನೆಯ ಪರ ಮತ ನೀಡಿದ್ದರಿಂದ ಉಪ-ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸದರೀ ಅಧ್ಯಕ್ಷರು ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದು ಅವರು ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲವೆಂದು ಘೋಷಿಸಿದರು. ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ…
ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಕಾಲ ನಡೆದ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ದಲ್ಲಿ ಅತೀ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಗರಿಷ್ಠ ಅಂಕಗಳನ್ನು ಗಳಿಸಿದ ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಎರಡನೆಯ (ರನ್ನರ್ ಅಪ್) ಸ್ಥಾನವನ್ನು ಕಲಬುರ್ಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡವು ಅಲಂಕರಿಸಿದೆ.ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಮತ್ತು ಲಲಿತ ಕಲೆಗಳ ವಿಭಾಗದಲ್ಲಿ ನಾಟಕ, ಏಕಪಾತ್ರಾಭಿನಯ, ಮೂಕಾಭಿನಯ, ಸಂಗೀತ, ನೃತ್ಯ, ಚಿತ್ರಕಲೆ, ಜನಪದ ಕಲೆ, ಸಾಹಿತ್ಯ, ಚರ್ಚೆ, ಭಾಷಣ, ಛಾಯಾಗ್ರಹಣ, ಜನಪದ ನೃತ್ಯ ಮತ್ತು ಕ್ವಿಜ್ ಮುಂತಾದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ವಿಭಾಗವಾರು ಪ್ರಶಸ್ತಿಯನ್ನು ನೀಡಲಾಗಿದ್ದು ವಿಜೇತ ತಂಡಗಳ ವಿವರ ಈ ಕೆಳಗಿನಂತಿದೆ:ಸಂಗೀತ ವಿಭಾಗ: ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಕಾರ್ತಿಕ ಮಾಸದ ಅಂಗವಾಗಿ ಕಾಳಿಕಾದೇವಿ ದೇವಸ್ಥಾನದಲ್ಲಿ ಭಕ್ತಿ, ಭಾವದೊಂದಿಗೆ ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಿಸಲಾಯಿತು.ಪಟ್ಟಣದ ಪರದೇಶಿಮಠದ ಹತ್ತಿರದ ಕಾಳಿಕಾದೇವಿಗೆ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಾಯಂಕಾಲ ಹಣತೆಯ ದೀಪ ಬೆಳಗಿಸಿ ಭಕ್ತಿ ಗೀತೆಗಳೊಂದಿಗೆ ಕಾರ್ತಿಕೋತ್ಸವ ಆರಂಭಿಸಲಾಯಿತು. ನಂತರ ನೆರೆದ ಭಕ್ತರಿಗೆ ಪನಿವಾರ ವಿತರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದಿರುವ ಕಾರ್ತಿಕೋತ್ಸವದಲ್ಲಿ ಸುತ್ತಮುತ್ತಲಿನ ಜನತೆ ಪಾಲ್ಗೊಂಡು ದೀಪ ಬೆಳಗಿಸಿ ಪೂಜೆ ನೆರವೇರಿಸಿ ಭಕ್ತಿ ಭಾವ ಮೆರೆದರು.ಶಿಕ್ಷಕರಾದ ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಸಂತೋಷ ಬಡಿಗೇರ, ರಾಜಶೇಖರ ಪತ್ತಾರ, ಚಿದಾನಂದ ಸಾಲಿಮಠ, ಈರಸಂಗಯ್ಯ ವಿಜಾಪೂರ, ಯಚರಪ್ಪ ಬಡಿಗೇರ, ಶ್ರೀದೇವಿ ಪರದೇಶಿಮಠ, ದಾನಮ್ಮಾ ಬಡಿಗೇರ, ವಿದ್ಯಾಶ್ರೀ ಕುಲಕರ್ಣಿ, ಜ್ಯೋತಿ ಬಡಿಗೇರ, ರೂಪಾ ಅಸಂತಾಪೂರ, ಕಾವ್ಯ ಬಡಿಗೇರ, ಭವಾನಿ ಪರದೇಶಿಮಠ, ಗಂಗವ್ವ ಒಣರೊಟ್ಟಿ, ಸಾತಮ್ಮಾ ಸಾಲಿಮಠ, ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
