ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಕಾಲ ನಡೆದ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ದಲ್ಲಿ ಅತೀ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಗರಿಷ್ಠ ಅಂಕಗಳನ್ನು ಗಳಿಸಿದ ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಎರಡನೆಯ (ರನ್ನರ್ ಅಪ್) ಸ್ಥಾನವನ್ನು ಕಲಬುರ್ಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡವು ಅಲಂಕರಿಸಿದೆ.
ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಮತ್ತು ಲಲಿತ ಕಲೆಗಳ ವಿಭಾಗದಲ್ಲಿ ನಾಟಕ, ಏಕಪಾತ್ರಾಭಿನಯ, ಮೂಕಾಭಿನಯ, ಸಂಗೀತ, ನೃತ್ಯ, ಚಿತ್ರಕಲೆ, ಜನಪದ ಕಲೆ, ಸಾಹಿತ್ಯ, ಚರ್ಚೆ, ಭಾಷಣ, ಛಾಯಾಗ್ರಹಣ, ಜನಪದ ನೃತ್ಯ ಮತ್ತು ಕ್ವಿಜ್ ಮುಂತಾದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ವಿಭಾಗವಾರು ಪ್ರಶಸ್ತಿಯನ್ನು ನೀಡಲಾಗಿದ್ದು ವಿಜೇತ ತಂಡಗಳ ವಿವರ ಈ ಕೆಳಗಿನಂತಿದೆ:
ಸಂಗೀತ ವಿಭಾಗ: ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡವು (ಪ್ರಥಮ ಸ್ಥಾನ) ಮತ್ತು ಕಲಬುರ್ಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು (ದ್ವಿತೀಯ ಸ್ಥಾನ).
ನೃತ್ಯ ವಿಭಾಗದ: ಕಲಬುರ್ಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿ.ಎಡ್ ಕಾಲೇಜು (ಪ್ರಥಮ ಸ್ಥಾನ) ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಂಡ್ಯದ ಪಿ.ಜಿ ಕೇಂದ್ರ (ದ್ವಿತೀಯ ಸ್ಥಾನ).
ಸಾಹಿತ್ಯ ವಿಭಾಗ: ಸೇಡಂನ ಶ್ರೀಮತಿ ನರ್ಮದಾ ದೇವಿ ಗಿಳಿದಾ ಮಹಿಳಾ ಕಾಲೇಜು (ಪ್ರಥಮ ಸ್ಥಾನ) ಮತ್ತು ಇಳಕಲ್‌ನ ಎಸ್.ವಿ.ಎಮ್. ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡ (ದ್ವಿತೀಯ ಸ್ಥಾನ).
ನಾಟಕ ವಿಭಾಗ: ಕಲಬುರ್ಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿ.ಎಡ್ ಕಾಲೇಜು ತಂಡ (ಪ್ರಥಮ ಸ್ಥಾನ) ಮತ್ತು ಕಲಬುರ್ಗಿಯ ಶ್ರೀಮತಿ ವಿ.ಜಿ.ಮಹಿಳಾ ಪದವಿ ಕಾಲೇಜು ತಂಡ (ದ್ವಿತೀಯ ಸ್ಥಾನ).
ಲಲಿತ ಕಲೆಗಳ ವಿಭಾಗ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ತಂಡ (ಪ್ರಥಮ ಸ್ಥಾನ) ಮತ್ತು ಕಲಬುರ್ಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡ (ದ್ವಿತೀಯ ಸ್ಥಾನ).
ಯುವಜನೋತ್ಸವದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳ ಪೈಕಿ ಮೊದಲ ಬಹುಮಾನವನ್ನು ಹುಬ್ಬಳ್ಳಿಯ ಎಸ್.ಜೆ.ಮ್.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡವು ಪಡೆದಿದ್ದು. ಎರಡನೇ ಬಹುಮಾನವನ್ನು ಕಲಬುರ್ಗಿಯ ಶ್ರೀಮತಿ ವಿ.ಜಿ.ಮಹಿಳಾ ಪದವಿ ಕಾಲೇಜು ತಂಡವು ಪಡೆದಿದೆ. ತೃತೀಯ ಬಹುಮಾನವನ್ನು ಕಲಬುರ್ಗಿಯ ಶರಣೇಶ್ವರಿ ರೇಶ್ಮಿ ಮಹಿಳಾ ಬಿ.ಎಡ್ ಕಾಲೇಜು ತಂಡವು ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಮುಖ್ಯ ಅತಿಥಿಯಾಗಿದ್ದ ಡಾ.ಜಾವೀದ್ ಜಮಾದಾರ, ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ. ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಸಿಂಡಿಕೇಟ್ ಸದಸ್ಯರ ಡಾ.ಎಸ್.ಜೆ.ಮಾಡ್ಯಾಳ, ಯುವಜನೋತ್ಸವ ತಾಂತ್ರಿಕ ಅಧ್ಯಕ್ಷ ಪ್ರೊ.ಪಿ.ಜಿತಡಸದ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಮತ್ತಿತರ ಗಣ್ಯರು ಪ್ರಶಸ್ತಿಗಳನ್ನು ವಿತರಿಸಿದರು.