ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಕಾರ್ತಿಕ ಮಾಸದ ಅಂಗವಾಗಿ ಕಾಳಿಕಾದೇವಿ ದೇವಸ್ಥಾನದಲ್ಲಿ ಭಕ್ತಿ, ಭಾವದೊಂದಿಗೆ ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಿಸಲಾಯಿತು.
ಪಟ್ಟಣದ ಪರದೇಶಿಮಠದ ಹತ್ತಿರದ ಕಾಳಿಕಾದೇವಿಗೆ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಾಯಂಕಾಲ ಹಣತೆಯ ದೀಪ ಬೆಳಗಿಸಿ ಭಕ್ತಿ ಗೀತೆಗಳೊಂದಿಗೆ ಕಾರ್ತಿಕೋತ್ಸವ ಆರಂಭಿಸಲಾಯಿತು. ನಂತರ ನೆರೆದ ಭಕ್ತರಿಗೆ ಪನಿವಾರ ವಿತರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದಿರುವ ಕಾರ್ತಿಕೋತ್ಸವದಲ್ಲಿ ಸುತ್ತಮುತ್ತಲಿನ ಜನತೆ ಪಾಲ್ಗೊಂಡು ದೀಪ ಬೆಳಗಿಸಿ ಪೂಜೆ ನೆರವೇರಿಸಿ ಭಕ್ತಿ ಭಾವ ಮೆರೆದರು.
ಶಿಕ್ಷಕರಾದ ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಸಂತೋಷ ಬಡಿಗೇರ, ರಾಜಶೇಖರ ಪತ್ತಾರ, ಚಿದಾನಂದ ಸಾಲಿಮಠ, ಈರಸಂಗಯ್ಯ ವಿಜಾಪೂರ, ಯಚರಪ್ಪ ಬಡಿಗೇರ, ಶ್ರೀದೇವಿ ಪರದೇಶಿಮಠ, ದಾನಮ್ಮಾ ಬಡಿಗೇರ, ವಿದ್ಯಾಶ್ರೀ ಕುಲಕರ್ಣಿ, ಜ್ಯೋತಿ ಬಡಿಗೇರ, ರೂಪಾ ಅಸಂತಾಪೂರ, ಕಾವ್ಯ ಬಡಿಗೇರ, ಭವಾನಿ ಪರದೇಶಿಮಠ, ಗಂಗವ್ವ ಒಣರೊಟ್ಟಿ, ಸಾತಮ್ಮಾ ಸಾಲಿಮಠ, ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.