Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಾಧೀಶ ಕೆ.ಎನ್.ಫಣೀಂದ್ರ ಅವರು ಡಿ.೮ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.೮ರಂದು ಬೆಳಿಗ್ಗೆ ೯-೩೦ರಿಂದ ೧೧-೩೦ರವರೆಗೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾತ್ರಿ ೯-೪೫ಕ್ಕೆ ವಿಜಯಪುರದಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಶಿರೋಳ ರಸ್ತೆಯ ಆಶ್ರಯ ಕಾಲೋನಿಯ ನಿವಾಸಿ ಶಾರದಾ ಸುಡಗಾಡಸಿದ್ದರ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಶಾರದಾಳ ಪತಿ ಹಣಮಂತ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಶಾರದಾಳ ಎತ್ತರ ೫ಫೂಟು, ಕಪ್ಪು ಬಣ್ಣ, ದುಂಡು ಮಖ, ಸಾಧಾರಣ ಮೈಕಟ್ಟು ಹೊಂದಿದ್ದು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪತ್ತಲ ಸೀರೆ ಮತ್ತು ಹಳದಿ ಬಣ್ಣದ ಜಂಪರ ಧರಿಸಿದ್ದು, ಕನ್ನಡ ತೆಲಗು, ತುಳು ಮಾತನಾಡಲು ಬರುತ್ತದೆ. ಈ ಚಹರೆ ಪಟ್ಟಿಯುಳ್ಳವರು ಎಲ್ಲಿಯಾದರೂ ಕಾಣಿಸಿದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪಿಎಸ್‌ಐ ಮುದ್ದೇಬಿಹಾಳ – ೦೮೩೫೬೨೨೦೩೩೩ ಈ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಾರದಾಳ ಪತಿ ಹಣಮಂತ ಮನವಿ ಮಾಡಿಕೊಂಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜನಪದರ ಹಾಡುಗಳು ಭಾರತದ ಶ್ರೀಮಂತ ಪರಂಪರೆಯಾಗಿವೆ. ಜನಪದ ಆಚಾರ – ವಿಚಾರಗಳು ಆದರ್ಶದ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿವೆ. ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು ನಮ್ಮ ಶ್ರೇಷ್ಠತೆ ತೋರಿಸುತ್ತದೆ. ಎಂದು ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ, ಜಿ ಪಂ ಮಾಜಿ ಅಧ್ಯಕ್ಷ ವಿ ಎಸ್ ಪಾಟೀಲ ಅಭಿಪ್ರಾಯಪಟ್ಟರು.ವಿಜಯಪುರ ನಗರದ ಎ ಎಸ್ ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಪಡಗಾನೂರ ವತಿಯಿಂದ ಲಿಂ ಸುಗಲಾಬಾಯಿಗೌಡತಿ ಪಾಟೀಲರ ೮ ನೆ ವರ್ಷದ ಸ್ಮರಣೋತ್ಸವ ಪ್ರಯುಕ್ತ ಏರ್ಪಡಿಸಿದ ” ಜಾನಪದ ಚಿಂತನ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿಧ್ಯಾರ್ಥಿ ಜೀವನದಲ್ಲೇ ಒಳ್ಳೆಯದು ಕೆಟ್ಟದ್ದು ಕುರಿತು ಆಲೋಚಿಸಿ ಬದುಕಿಗೆ ಅಗತ್ಯವಾದ ವಿಚಾರಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು. ಎಂದು ಹೇಳಿದರು” ಜಾನಪದದಲ್ಲಿ ಮಹಿಳೆ ” ಕುರಿತು ಉಪನ್ಯಾಸ ನೀಡಿದ ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಜಾನಪದ ಸಾಹಿತ್ಯ- ಸಂಸ್ಕೃತಿಗೆ ತಾಯಿಯೇ ಆಧಾರ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬುವಲ್ಲಿ ತಾಯಿಗೆ ಮಾತ್ರ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕನ್ನಡ ವಿಶ್ವ ಲಿಪಿಗಳ ರಾಣಿ. ಕನ್ನಡ ಸಾಹಿತ್ಯಕ್ಕೆ ದೊರೆತಷ್ಟು ಪ್ರಶಸ್ತಿ ಬೇರೆ ಯಾವ ಭಾಷೆಗೂ ದೊರೆತಿಲ್ಲ. ಕನ್ನಡ ಜಗತ್ತಿನ ಶ್ರೇಷ್ಠ ಮತ್ತು ಶ್ರೀಮಂತ ಭಾಷೆಗಳಲ್ಲಿ ಒಂದು ಎಂದು ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದರು.ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ಮಂದಿರದಲ್ಲಿ ನಬಿರೋಶನ್ ಪ್ರಕಾಶನ ಬೋರಗಿ ಹಾಗೂ ಶಾಫಿಯಾ ಪ್ರಕಾಶನ, ಆಲಮೇಲ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಮೋಘ ವರ್ಷ ನೃಪತುಂಗ ಕಾವೇರಿಯಿಂದ ಗೋದಾವರಿವರೆಗೂ… ಎಂದು ಬರೆಯುವಾಗ ಜಗತ್ತಿನ ಇತರೆ ಭಾಷೆಗಳು ಇನ್ನೂ ತೊಟ್ಟಿಲಲ್ಲಿ ಇದ್ದವು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಮಾನತೆ, ಧಾರ್ಮಿಕ ಸಾಮರಸ್ಯ, ಸೌಹಾರ್ದತೆ ಹಾಗೂ ಸಹಬಾಳ್ವೆ ಈ ಎಲ್ಲವನ್ನೂ ಕನ್ನಡ ಸಾಹಿತ್ಯ ಹೇಳುತ್ತಾ ಬಂದಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ನಿಜವಾದ ಕನ್ನಡಿಗರಾಗಲು ಸಾಧ್ಯ ಎಂದ ಅವರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣ ಹಾಗೂ ಹೂವಿನಹಿಪ್ಪರಗಿ ನಡುವಿನ ರಸ್ತೆ ತಗ್ಗು ತುಂಬುವ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಅನಗತ್ಯ ಬೂದಿಯಂತಹ ಕಳಪೆ ಸಾಮಗ್ರಿ ಬಳಸದೇ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾತಿಹಾಳ ಗ್ರಾಮಸ್ಥರು ಹಾಗೂ ಬೈಕ್ ಸವಾರರು ಆಗ್ರಹಿಸಿದ್ದಾರೆ.ತಾಲ್ಲೂಕಿನ ಸಾತಿಹಾಳ ಡೋಣಿ ಸೇತುವೆಯಿಂದ ದಿಂಡವಾರ, ಅರಳಿಚಂಡಿ ಕ್ರಾಸ್ ನಡುವಿನ ರಸ್ತೆ ತಗ್ಗು ದಿನ್ನೆಗಳಿಂದ ತುಂಬಿದ್ದು ಬಹುತೇಕ ಹಾಳಾಗಿದೆ. ಈಗ ತಗ್ಗುದಿನ್ನೆಗಳನ್ನು ತುಂಬಿ ರಸ್ತೆ ಸರಿಪಡಿಸುವ ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿಯಲ್ಲಿ ತಗ್ಗುಗಳನ್ನು ಗರ್ಸ್ಗಳಿಂದ ತುಂಬಿದ್ದು ಮೇಲುಗಡೆ ಬೂದಿಯನ್ನು ಹಾಕಿದ್ದು ಈಗ ಬೂದಿ ಗಾಳಿಗೆ ಹಾರುವುದರ ಮೂಲಕ ಪ್ರಯಾಣಿಕರಿಗೆ ಅಡ್ಡಿಯಾಗಿದೆ. ಈ ಕುರಿತು ಬೈಕ್ ಸವಾರ ಸೋಮನಗೌಡ ಬಿರಾದಾರ ಮಾತನಾಡಿ, ಕರಭಂಟನಾಳ ಕ್ರಾಸ್‌ನಿಂದ ಕಂದು ಬಣ್ಣದ ಬೂದಿಯನ್ನು ತೆಗ್ಗುಗಳಲ್ಲಿ ತುಂಬಿದ ಕಾರಣ ಮುಂದೆ ಬಸ್, ಲಾರಿ ಯಾವುದೇ ವಾಹನಗಳು ಹೋಗುವುದೇ ತಡ ರಸ್ತೆಯೆಲ್ಲಾ ಕಪ್ಪಾದ ಧೂಳಿನಿಂದ ತುಂಬಿ ಮೈ, ಅರಿವೆಗಳೆಲ್ಲಾ ಕಪ್ಪಾದವು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಾತಿಹಾಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಡೋಣೂರ ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಯ ಆದೇಶದ ಅನ್ವಯ ದೇವರಹಿಪ್ಪರಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 26ರಿಂದ ಡಿಸೆಂಬರ್ 2ರ ವರೆಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದುಗ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಈ ಕುರಿತು ಮಾತನಾಡಿ, ತಾಲ್ಲೂಕಿನಲ್ಲಿ ನಾಲ್ಕು ತಂಡಗಳನ್ನು ರಚಿಸಿ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿವಾರು ತಂಡಗಳನ್ನು ರಚಿಸಿ ಸಾರ್ವಜನಿಕರ ಮನ ಒಲಿಸಿ ಗ್ರಾಮಸ್ಥರಿಂದ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.ಸಾತಿಹಾಳ ಗ್ರಾಮ ಪಂಚಾಯತಿಯ ಕರ ವಸೂಲಾತಿ ಮಹಾ ಆಂದೋಲನದಲ್ಲಿ ಭಾಗಿಯಾಗಿದ್ದ ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ಶಿವಾನಂದ ಮೂಲಿಮನಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಆದೇಶದ ಅನ್ವಯ ತಾಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಾತಿ ಮಾಡಲು ಸಿಬ್ಬಂದಿ ವರ್ಗ ಗುರಿ ಸಾಧಿಸಲು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಕರ ವಸೂಲಾತಿ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.ತಾಲ್ಲೂಕಿನಲ್ಲಿ ಇಓ ಭಾರತಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಕೋರವಾರ, ಜಾಲವಾದ, ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ನಷ್ಟಗೊಂಡ ರೈತರಿಗೆ ಪರಿಹಾರ ಅಥವಾ ವಿಮೆ ಹಣ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತೊಗರಿ ಬೆಳೆಯ ವಾಸ್ತವಿಕ ಅಂಶಗಳ ಕುರಿತು ಪೂರ್ಣ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಸರ್ಕಾರ ಕೃಷಿ ಇಲಾಖೆಯ ಮೂಲಕ ರೈತರಿಗೆ ಕೊಟ್ಟಿರುವ ತೊಗರಿ ಬೀಜ ಜಿಆರ್‌ಜಿ ೧೫೨ ಹಾಗೂ ೮೧೧ ಸಂಪೂರ್ಣ ಕಳಪೆಯಾಗಿವೆ. ಬೀಜ ಕಟ್ಟದೇ ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೇ ರೈತರಿಗೆ ಚಿಂತೆಗೀಡುಮಾಡಿದೆ. ಇಂತಹ ಕಂಪನಿ ಮೋಸಗಳಿಂದ ನಷ್ಟಗೊಂಡ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಸರ್ಕಾರ ಆದೇಶ ನೀಡಬೇಕು. ಇದರಲ್ಲಿ ಯಾವುದೇ ಮೋಸ, ವಂಚನೆ ಆಗಬಾರದು. ಇನ್ಸೂರೆನ್ಸ್ ಕಂಪನಿಗಳು ಸರಿಯಾಗಿ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿ ಚನ್ನಮ್ಮ ವಿವಿ ಚಸ್ ಚಾಂಪಿಯನ್‌ಶೀಪ್ ಪಂದ್ಯಾವಳಿಯಲ್ಲಿ ಎಸ್‌ಬಿ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ ರಾಠೋಡ ವಿಶ್ವವಿದ್ಯಾಲಯ ಬ್ಲೂ ಆಗಿ ಹೊರ ಹೊಮ್ಮಿದ್ದಾರೆ. (ಪುರುಷ ವಿಭಾಗದಲ್ಲಿ) ಅದರಂತೆ ವಿದ್ಯಾರ್ಥಿನಿಯರಾದ ಪ್ರೇಮಾಂಜಲಿ ಬಿರಾದಾರ, ದೀಪಾ ವಾಲಿಕಾರ ಅವರ ತಂಡ(ಮಹಿಳಾ ವಿಭಾಗದಲ್ಲಿ) ತೃತೀಯ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದ್ದಾರೆ.ಮಹಾವಿದ್ಯಾಲಯಕ್ಕೆ ಕಿರ್ತೀ ತಂದಿರುವ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆ ಆಡಳಿತ ಅಧಿಕಾರಿ ಪ್ರೊ.ವಿ.ಎಸ್.ಬಗಲಿ, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂರಾರು ಚಲನಚಿತ್ರಗಳಿಗೆ ಪೋಸ್ಟರ ಡಿಸೈನ್ ಮೂಲಕವೆ ಜೀವಕಳೆ ತುಂಬಿ ಪ್ರೇಕ್ಷಕರನ್ನು ಸೆಳೆದು ಚಿತ್ರಗಳ ಯಶಸ್ಸಿಗೆ ಕಾರಣರಾಗುತ್ತಿರುವ ತೆರೆಮರೆಯ ಚಲನಚಿತ್ರ ಪ್ರಚಾರ ಕಲಾವಿದ ‘ದೇವು’ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಭವನದಲ್ಲಿ ನವಂಬರ್ ೨೯ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ದೇವು ಅವರ ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ, ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಸುಂದರ್ ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Read More

ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ತಿಳುವಳಿಕೆ ಹೊಂದಿ, ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಹೇಳಿದರು.ಭಾರತ ಸರ್ಕಾರದ ಪೆಟ್ರೋಲಿಯಂ ಮಂತ್ರಾಲಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಆಯಿಲ್ ಕಂಪನಿ ಗಳ ಸಹಯೋಗದಲ್ಲಿ ರವಿವಾರ ಹೊಟೇಲ್ ಮಧುವನ ಇಂಟರ್ ನ್ಯಾಷನಲ್‌ನಲ್ಲಿ ನಡೆದ ನಮ್ಮ ಅಡುಗೆ ನಮ್ಮ ಜವಾಬ್ದಾರಿ -೨೦೨೪ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ಯಾಸ್ ಬಳಸುವುದು ಪರಿಸರ ಸ್ನೇಹಿಯಾಗಿದೆ. ಇದರಿಂದ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ. ಗ್ಯಾಸ್ ಸಿಲಿಂಡರ್ ಸ್ಟವ್ ಬಳಸುವಾಗ ಏನಾದರೂ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರೆ ಸ್ವಯಂ ದುರಸ್ತಿಗೆ ಬದಲಿಗೆ ಗ್ಯಾಸ್ ಏಜೆನ್ಸಿ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿ ಅದರ ದುರಸ್ತಿಗೆ ಕ್ರಮವಹಿಸಬೇಕು ಎಂದು ಹೇಳಿದರು.ಎಚ್.ಮಮದಾಪುರ ನಿರೂಪಿಸಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ,…

Read More