ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿ ಚನ್ನಮ್ಮ ವಿವಿ ಚಸ್ ಚಾಂಪಿಯನ್‌ಶೀಪ್ ಪಂದ್ಯಾವಳಿಯಲ್ಲಿ ಎಸ್‌ಬಿ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ ರಾಠೋಡ ವಿಶ್ವವಿದ್ಯಾಲಯ ಬ್ಲೂ ಆಗಿ ಹೊರ ಹೊಮ್ಮಿದ್ದಾರೆ. (ಪುರುಷ ವಿಭಾಗದಲ್ಲಿ) ಅದರಂತೆ ವಿದ್ಯಾರ್ಥಿನಿಯರಾದ ಪ್ರೇಮಾಂಜಲಿ ಬಿರಾದಾರ, ದೀಪಾ ವಾಲಿಕಾರ ಅವರ ತಂಡ(ಮಹಿಳಾ ವಿಭಾಗದಲ್ಲಿ) ತೃತೀಯ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ಮಹಾವಿದ್ಯಾಲಯಕ್ಕೆ ಕಿರ್ತೀ ತಂದಿರುವ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆ ಆಡಳಿತ ಅಧಿಕಾರಿ ಪ್ರೊ.ವಿ.ಎಸ್.ಬಗಲಿ, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

