ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಶಿರೋಳ ರಸ್ತೆಯ ಆಶ್ರಯ ಕಾಲೋನಿಯ ನಿವಾಸಿ ಶಾರದಾ ಸುಡಗಾಡಸಿದ್ದರ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಶಾರದಾಳ ಪತಿ ಹಣಮಂತ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಶಾರದಾಳ ಎತ್ತರ ೫ಫೂಟು, ಕಪ್ಪು ಬಣ್ಣ, ದುಂಡು ಮಖ, ಸಾಧಾರಣ ಮೈಕಟ್ಟು ಹೊಂದಿದ್ದು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪತ್ತಲ ಸೀರೆ ಮತ್ತು ಹಳದಿ ಬಣ್ಣದ ಜಂಪರ ಧರಿಸಿದ್ದು, ಕನ್ನಡ ತೆಲಗು, ತುಳು ಮಾತನಾಡಲು ಬರುತ್ತದೆ. ಈ ಚಹರೆ ಪಟ್ಟಿಯುಳ್ಳವರು ಎಲ್ಲಿಯಾದರೂ ಕಾಣಿಸಿದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪಿಎಸ್‌ಐ ಮುದ್ದೇಬಿಹಾಳ – ೦೮೩೫೬೨೨೦೩೩೩ ಈ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಾರದಾಳ ಪತಿ ಹಣಮಂತ ಮನವಿ ಮಾಡಿಕೊಂಡಿದ್ದಾರೆ.

