ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಯ ಆದೇಶದ ಅನ್ವಯ ದೇವರಹಿಪ್ಪರಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 26ರಿಂದ ಡಿಸೆಂಬರ್ 2ರ ವರೆಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದುಗ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಈ ಕುರಿತು ಮಾತನಾಡಿ, ತಾಲ್ಲೂಕಿನಲ್ಲಿ ನಾಲ್ಕು ತಂಡಗಳನ್ನು ರಚಿಸಿ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿವಾರು ತಂಡಗಳನ್ನು ರಚಿಸಿ ಸಾರ್ವಜನಿಕರ ಮನ ಒಲಿಸಿ ಗ್ರಾಮಸ್ಥರಿಂದ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.
ಸಾತಿಹಾಳ ಗ್ರಾಮ ಪಂಚಾಯತಿಯ ಕರ ವಸೂಲಾತಿ ಮಹಾ ಆಂದೋಲನದಲ್ಲಿ ಭಾಗಿಯಾಗಿದ್ದ ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ಶಿವಾನಂದ ಮೂಲಿಮನಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಆದೇಶದ ಅನ್ವಯ ತಾಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಾತಿ ಮಾಡಲು ಸಿಬ್ಬಂದಿ ವರ್ಗ ಗುರಿ ಸಾಧಿಸಲು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಕರ ವಸೂಲಾತಿ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ತಾಲ್ಲೂಕಿನಲ್ಲಿ ಇಓ ಭಾರತಿ ಚೆಲುವಯ್ಯ ಸಹಾಯಕ ನಿರ್ದೇಶಕ(ಪಂಚಾಯತ್ ರಾಜ್) ಶಿವಾನಂದ ಮೂಲಿಮನಿ, ಸಹಾಯಕ ನಿರ್ದೇಶಕ(ಉದ್ಯೋಗ ಖಾತ್ರಿ) ಶಾಂತಗೌಡ ನ್ಯಾಮಣ್ಣವರ ಹಾಗೂ ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್ ಪವಾರ ಇವರ ನೇತೃತ್ವದಲ್ಲಿ ಒಟ್ಟು 4 ತಂಡಗಳನ್ನು ರಚಿಸಿ ಅಭಿಯಾನವನ್ನು ಹಮ್ಮಿಕೊಂಡು ಇಂದು ಕರ ವಸೂಲಾತಿ ಮಹಾ ಆಂದೋಲನ ಮುಕ್ತಾಯಗೊಳಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳಾದ ಜಿ.ಎಸ್.ರೋಡಗಿ, ಸಿದ್ದು ಕಾಂಬ್ಳೆ, ಪಿಡಿಓ ಮಹೇಶ ಬಗಲಿ, ಎಮ್.ಎನ್.ಕತ್ತಿ ಹಾಗೂ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಇದ್ದರು.

