Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅ.೧೪ರಂದು ವಿಜಯಪುರದಲ್ಲಿ ಮೆರವಣಿಗೆ ಮೂಲಕ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ದಶಕಗಳ ಹೋರಾಟದ ಫಲದಿಂದ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ದೊರತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ಇದನ್ನು ಖಂಡಿಸಿ ಜಿಲ್ಲೆಯ ತಳವಾರ ಸಮಾಜದ ಜನರು ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಲೀಖಿತ ಮನವಿ ಸಲ್ಲಿಸಲಿದ್ದೇವೆ ಅದಕ್ಕೆ ಆಲಮೇಲ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದೆವೆ ಎಂದು ತಳವಾರ ಸಮಾಜದ ಮುಖಂಡ ಪ್ರಭು ವಾಲಿಕಾರ ತಿಳಿಸಿದರು.ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು, ತಳವಾರ ಸಮಾಜ ಜನರ ದಶಕಗಳ ಹೋರಾಟದಿಂದ ಹಿಂದಿನ ಬಿಜೆಪಿ ಸರ್ಕಾರ ತಳವಾರ ಸಮಾಜಕ್ಕೆ ಪರಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನೀಡಿದ್ದು, ಈಗಾಗಲೆ ಅದರ ಲಾಭ ಪಡೆದುಕೊಳ್ಳುತ್ತಿದ್ದು ಅದನ್ನು ಸಹಿಸದ ಇನ್ನುಳಿದ ಎಸ್‌ಟಿ ಸಮಾಜದ ಜನರು ರಾಜಕೀಯ ಕುತಂತ್ರದಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ರಾಜ್ಯದಲ್ಲಿ ತಳವಾರ ಸಮಾಜ ೮…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೆಂಕಟೇಶ ನಗರ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ಯ ವೆಂಕಟೇಶ ನಗರದಿಂದ ದೇವಿಯ ಭವ್ಯ ಮೆರವಣಿಕೆ ಸಕಲ ವಾದ್ಯ ವೃಂದಗಳೊಂದಿಗೆ ಅದ್ಧೂರಿಯಾಗಿ ಜರುಗಿತು.೧೦೦೧ ಜನ ಮಹಿಳೆಯರು ಕುಂಭ ಹೊತ್ತು ಮಹಿಳೆಯರು ಸಾಗಿ ಮೆರವಣಿಗೆ ಮೆರಗು ತಂದರು.ಓಣಿಯಲ್ಲಿ ಕುಂಭ ಮೇಳದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸುಮಂಗಲೆಯರು ಆಗಮಿಸುವರು. ಮತ್ತು ಡೊಳ್ಳು ಕುಣಿತ ಮೆರವಣಿಗೆ, ಕರಡಿ ಮಜಲು, ಶ್ರೀ ವೀರಭದ್ರ ಪುರವಂತರು ಹಾಗೂ ಗೊಂಬೆ ಕುಣಿತ ಇನ್ನಿತರ ಕಲಾ ತಂಡಗಳ ಸಮೇತ ಪಲ್ಲಕ್ಕಿ ಶ್ರೀ ಮರಗಮ್ಮ ದೇವಸ್ಥಾನ, ಶ್ರೀ ಲಕ್ಕಮ್ಮ ದೇವಸ್ಥಾನ ಮೂಲಕ ಮರಳಿ ಅದೇ ಮಾರ್ಗದಿಂದ ಶ್ರೀ ಲಕ್ಷ್ಮೀ ದೇವಸ್ಥಾನದ ವರೆಗೆ ಆಗಮಿಸಿತು.ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆ ಸದಸ್ಯರದಾ ಶ್ರೀ ಕುಮಾರ ಗಡಗಿ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಶ್ರೀ ಲಕ್ಷ್ಮೀ ದೇವಿಯು ಪ್ರತಿಯೊಬ್ಬರಿಗೆ ಒಳಿತನ್ನು ಮಾಡಲಿ. ದೇವಿ ಮಹಾತ್ಮೆ ಅಪಾರವಿದೆ. ಭಕ್ತರು ದೇವಿಯ ಕೃಪೆ ಪಡೆದು ಪುನೀತರಾಗಬೇಕು. ಅದರಂತೆ ಜಾತ್ರೆಗಳು ಸೌಹಾರ್ದಕ್ಕೆ ಹೆಸರುವಾಗಿಯಾಗಿವೆ. ಮನುಷ್ಯ ಮನುಷ್ಯ ನಡುವೆ…
ಗಡಿಗ್ರಾಮ ಉಮರಜದಲ್ಲಿ ನಾಡದೇವಿ ಪ್ರಭಾತಪೇರಿ ೬೮ರ ಸಂಭ್ರಮಕ್ಕೆ ತೆರೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೮ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟçಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ…
S* ಗಡಿಗ್ರಾಮ ಉಮರಜದಲ್ಲಿ ನಾಡದೇವಿ ಪ್ರಭಾತಪೇರಿ ೬೮ರ ಸಂಭ್ರಮಕ್ಕೆ ತೆರೆ B*ಗಡಿಗ್ರಾಮದಲ್ಲಿ ಕನ್ನಡ ಭಾಷಾಭಿಮಾನದ ’ಪ್ರಭಾತಪೇರಿ’ ಸಂಪನ್ನ ಉದಯರಶ್ಮಿ ದಿನಪತ್ರಿಕೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೮ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟçಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೆಲವರಿಗೆ ದೃಷ್ಟಿ ಸಾಮರ್ಥ್ಯದ ಕೊರತೆಯಿರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಪನ್ಯಾಸಕಿ ಶ್ವೇತಾ ಕಾಂತ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಣಿಶಾಸ್ತçದ ವಿಭಾಗದ ಅಡಿಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೊಬೈಲ್ ಬಳಕೆಯಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ “ಕಣ್ಣಿನ ದೃಷ್ಟಿಯಿಂದ ನಾವು ಸಮಸ್ತ ಜಗತ್ತನ್ನೇ ನೋಡಬಹುದು. ಇದು ಮಾನವನ ದೇಹದ ಅತೀ ಮುಖ್ಯವಾದ ಅಂಗ. ಕಣ್ಣಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಬಹಳ ಕಷ್ಟ. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿಗಿದೆ. ಇದು ಸರಿ ಇದ್ದರೆ ಅದಕ್ಕಿಂತ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಧರ್ಮ ರಕ್ಷಿಸಿದವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮ ಜಾಗೃತಿ ಕಾರ್ಯ ಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ನಾದ ಗ್ರಾಮದ ಶಿವಾನಂದ ಶಿವಾಚಾರ್ಯರರು ಹೇಳಿದರು.ತಾಲೂಕಿನ ನಾದ ಕೆಡಿ ಗ್ರಾಮದ ಕನ್ನಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಲಿಂಗೇಶ್ವರ ಟ್ರಸ್ಟನಿಂದ ನಡೆದ ನವರಾತ್ರಿ ನಿಮಿತ್ಯ ನಡೆದ ಧಾರ್ಮಿಕ ಕಾರ್ಯಕ್ರಮ ಮತ್ತು ಸಂತ ಬಾಳು ಮಾಮಾ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಬ್ಬರಲ್ಲಿ ಧರ್ಮದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು,ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ನಾದ ಗ್ರಾಮದ ಸಾವಯುಕ ಕೃಷಿಕ ಮತ್ತು ರಾಜ್ಯ ಪ್ರಶಸ್ತಿ ವಿಜೇತ ರೈತ ಎಸ್.ಟಿ.ಪಾಟೀಲ ಮಾತನಾಡಿ, ಧರ್ಮೋ ರಕ್ಷಿತಿ ರಕ್ಷಿತಾ ದರ್ಮ ಯಾರ ಸ್ವತ್ತಲ್ಲ. ಧರ್ಮ ಎಂದರೆ ಯಾರ ಮನಸ್ಸು ನೋವಿಸದೇ ಇರುವದು ಎಂದರು.ಜಮಖಂಡಿಯ ಮಲ್ಲಿಕಾರ್ಜುನ ಶಾಸ್ತ್ರಿಗಳು ಸಂತ ಬಾಳು ಮಾಮಾರವರ ಜೀವನ ಮತ್ತು ಪವಾಡಗಳ ಕುರಿತು ಮಾತನಾಡಿದರು.ಗೋಳಸಾರದ ಪುಂಡಲಿಂಗ ಶಿವಯೋಗಿಗಳ ಸಾನಿಧ್ಯ, ಬಸವರಾಜ ಪಾಟೀಲ,ಸದ್ಗುರು ಮಲ್ಲಿಕಾರ್ಜುನ ಶಾಸ್ತ್ರಿಗಳು, ಶೇಖರ ಕುಮಾರ ಬೆಂಗೂರು, ಗೊಲ್ಲಾಳಪ್ಪಗೌಡಪಾಟೀಲ, ಬಿ.ಜಿ.ಲಾಳಸಂಗಿ, ಇಶ್ವರಯ್ಯ ಹಿರೇಮಠ ವೇದಿಕೆಯ ಮೇಲಿದ್ದರು.ಗ್ರಾಮದ ರಾಮಚಂದ್ರಗೌಡ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯ ಚಂಡಿ ಹೋಮ ಕಾರ್ಯಕ್ರಮ ನಡೆಯಿತು.ಗಾಣಗಾಪುರದ ಅರ್ಚಕರಾದ ವಿಶ್ವೇಶ್ವರ ಭಟ್ಟ, ಸರ್ವೇಶ ಭಟ್ಟ ಮತ್ತು ಸುಶಾಂತ ಭಟ್ಟ ಹಾಗೂ ಇಂಡಿಯ ಶಿವಾನಂದ ಪೂಜಾರಿ ಶಾಂತು ಪೂಜಾರಿ ಚಂಡಿ ಹೋಮ ನಡೆಸಿ ಕೊಟ್ಟರು.ಚಂಡಿ ಹೋಮ ಕಾರ್ಯಕ್ರಮದಲ್ಲಿ ದಂಪತಿಗಳಾದ ಬಸವರಾಜ ವಳಸಂಗ ಮತ್ತು ಸವಿತಾ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇದೇ ವೇಳೆ ದೇವಸ್ಥಾನಕ್ಕೆ ದೇವಿಗೆ ಕಿರೀಟಕ್ಕೆ ಬಂಗಾರ ನೀಡಿದ ಡಾ|| ಬಸವರಾಜ ಹತ್ತಿ, ವೀರ ಭಾರತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸನ್ಮಾಥ ಹಳ್ಳಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚಂದ್ರು ದೇವರ, ಉದ್ದಿಮೆದಾರ ಬಾಲಾಜಿ ಇಪಕ್ವಾಯಿಲ್, ಮಂಜುನಾಥ ಕಾಮಗೊಂಡ, ಮಹಾದೇವ ಬಾರಿಕಾಯಿ, ಸಿದ್ರಾಮ ನಿಗಡಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಬಾಳು ಕಠಾರೆ, ಬಾಪು ಮಹೀಂದ್ರಕರ, ಸುನೀಲ ಸುಲಾಖೆ, ಬಾಬುರಾವ ಸುಲಾಖೆ, ಕಿರಣ ಬಳಮಕರ, ಗಣೇಶ ಮಹಿಂದ್ರಕರ, ಸುಬಾಶ ಬಳಮಕರ, ಸಂಜಯ ಸುಲಾಖೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾದ್ಯಂತ, ಎಲ್ಲ ತಾಲೂಕಿನ ಸಾರ್ವಜನಿಕರ, ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ, ಸರ್ಕಾರೇತರ ಹಾಗೂ ರೈತರ ಆಸ್ತಿಗಳು/ಜಮೀನುಗಳನ್ನು ಉತಾರೆಯಲ್ಲಿ ವಕ್ಫ ಆಸ್ತಿಯೆಂದು ನಮೂದಿಸಲು ವಕ್ಫ ಸಚಿವರ ಮೌಖಿಕ ಆದೇಶವನ್ನು ಜಾರಿಗೊಳಿಸಿ ನೋಟೀಸ್ ಕಳುಹಿಸಲಾಗಿದೆ. ಹೀಗಾಗಿ ತಕ್ಷಣ ನೋಟಿಸ್ ಪಡೆದ ಪ್ರತಿಯೊಬ್ಬರೂ ತಮ್ಮ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುವುದನ್ನು ತಪ್ಪಿಸಲು, ತಮಗೆ ನೀಡಲಾದ ನೋಟೀಸ್ ಹಾಗು ಕಾಗದ ಪತ್ರಗಳೊಂದಿಗೆ, ಇದೇ ಅಕ್ಟೋಬರ್ ೧೫ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ವಿನಂತಿಸಿದ್ದಾರೆ.ಈ ಬೃಹತ್ ಪ್ರತಿಭಟನೆ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ), ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯಲಿದ್ದು, ಇದು ಪ್ರತಿಯೊಬ್ಬ ಸನಾತನ ಹಿಂದು ನಾಗರಿಕರ, ರೈತರ ಆಸ್ತಿಯ ಕಬಳಿಕೆಯ ಕುತಂತ್ರವಾಗಿದ್ದು, ಇದರ ಮೇಲೆ ನಾವು ಕಾನೂನುಬದ್ಧ ಹೋರಾಟದ ಜೊತೆಗೆ, ದೈಹಿಕ, ಮಾನಸಿಕವಾಗಿ ಉಗ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ಥಳೀಯವಾಗಿ ಇಲ್ಲದಿರುವುದರಿಂದ, ಅ.೧೩ ರಂದು ಸಿಂದಗಿ ರಸ್ತೆಯ ಅವರ ನಿವಾಸದಲ್ಲಿ ಹಮ್ಮಿಕೊಂಡ ಬನ್ನಿ ವಿನಿಮಯ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.ಕಾರಣ ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹಾಗೂ ಶಿವಯೋಗಿ ಸಿದ್ಧರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲೆಂದು ಹಾರೈಸಿದ್ದಾರೆ.
ವಕ್ಫ್ ಹಾಗೂ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಅಕ್ರಮ, ಅನೀತಿ, ಅಕೃತ್ಯಗಳನ್ನು ಖಂಡಿಸಿ ಅ.೧೫ರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಶೇ ೫೦ ಕ್ಕಿಂತ ಹೆಚ್ಚು ಆಸ್ತಿ ಒತ್ತುವರಿ ಆಗಿದೆ ಅಂತ ನೂರಾರು ವರ್ಷಗಳಿಂದ ಇಲ್ಲಿನ ರೈತರು ಉಳುತ್ತಿರುವ ಭೂಮಿಯನ್ನು ನೋಟೀಸ್ ನೀಡಿ ವಕ್ಫ್ ಸುಪರ್ಧಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆಯಂತೆ. ಈಗಾಗಲೇ, ರೈತರಿಗೆ, ಖಾಸಗಿ ವ್ಯಕ್ತಿಗಳಿಗೆ ನೋಟೀಸು ನೀಡಿದ್ದು ಪ್ರಕ್ರಿಯೆ ಶುರುವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿದ್ದು ಇದು ಅಮಾನವೀಯ ಎಂದು ಶಾಸಕ ಬಸನಗೌಡ ಯತ್ನಾಳ ತಿಳಿಸಿದ್ದಾರೆ.ಶನಿವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ೩೦-೪೦ ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೇಶದ ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲದ ವಕ್ಫ್ ಇಲಾಖೆಗೆ ರೈತರು ಭೂಮಿ ನೀಡಬೇಕು ಎಂದು ನೋಟೀಸು ನೀಡಿ ತನ್ನ ಸುಪರ್ಧಿಗೆ ತೆಗೆದುಕೊಳ್ಳುವುದು ಅನ್ನದಾತನಿಗೆ ಮಾಡುವ ಅನ್ಯಾಯ. ಜಾತಿ, ಮತ, ಕುಲ ನೋಡದೆ…
