ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಂಚಮಸಾಲಿ ಸಮಾಜ ೨ಎ ಮೀಸಲಾತಿ ಕೇಳುತ್ತಿರುವುದು ಹಾಗೂ ಪ್ರತಿಭಟನೆ ಮಾಡುತ್ತಿರುವುದೇ ಅಸಂವಿಧಾನಿಕ ಎಂದು ಹೇಳುತ್ತಿರುವ ಮುಖ್ಯಮಂತ್ರಿಯವರದು ಉಡದ ನಾಲಿಗೆ. ಅವರು ವಿರೋಧ ಪಕ್ಷದಲ್ಲಿದ್ದಾಗ ಪಂಚಮಸಾಲಿಗಳಿಗೆ ೨ಎ ಮೀಸಲಾತಿ ಸಂವಿಧಾನಿಕ ಹಕ್ಕು. ಅದು ಪಂಚಮಸಾಲಿಗಳಿಗೆ ಸಿಗಲೆಬೇಕು ಎಂದು ಹೇಳಿದ ಸಿದ್ದರಾಮಯ್ಯನವರು ವಕೀಲ ವೃತ್ತಿಯನ್ನು ಮಾಡಿದವರು ಇಂದು ಅದೇ ಮಾತನ್ನು ತಿರುಚಿ ಮಾತನಾಡುತ್ತಿರುವುದು ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
ಈ ವೇಳೆ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಅಶೋಕ ಅಲ್ಲಾಪೂರ ಹಾಗೂ ಶಿವಾರಾಜ ಪೋಲಿಸಪಾಟೀಲ ಮಾತನಾಡಿ, ೨ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಅಧಿಕಾರಿಗಳನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಿ ನೂರಾರು ಜನರಿಗೆ ತೀವ್ರಗಾಯ ಹಾಗೂ ಹಲವಾರು ಜನರು ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮಾಡಿದ ಲಿಂಗಾಯತ ವಿರೋಧಿ ಸಿದ್ದರಾಮಯ್ಯನವರ ನಡೆ ಅಸಂವಿಧಾನಿಕ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಚನ್ನವೀರ ಮನಗೂಳಿ (ಮುತ್ತು) ಮಾತನಾಡಿ, ಪಕ್ಷ ಅಥವಾ ಸರಕಾರ ಯಾವುದೇ ಇರಲಿ ಸಮಾಜದ ಪ್ರಶ್ನೆ ಬಂದಾಗ ನಾವು ಯಾವಾಗಲೂ ಸಮಾಜದ ಪರ ಹಾಗೂ ಸಮಾಜವನ್ನು ಮುನ್ನೆಡೆಸುತ್ತಿರುವ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮೀಜಿಯವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಆರ್.ಡಿ.ದೇಸಾಯಿ, ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಶಿವಾನಂದ ಬಡಾನೂರ, ಮಲ್ಲಿಕಾರ್ಜುನ ಅಲ್ಲಾಪೂರ, ಚಂದ್ರಗೌಡ ಪಾಟೀಲ, ಬಸವರಾಜ ಐರೋಡಗಿ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸಂಗನಗೌಡ ಪಾಟೀಲ ಯಂಕಂಚಿ, ಶ್ರೀಶೈಲ ಚೆಳ್ಳಗಿ, ಗಂಗಾಧರ ಕಡಗಂಚಿ, ಬಸವರಾಜ ಕಡಕಂಚಿ, ಈರಣ್ಣ ಕಲಬುರ್ಗಿ, ರಾಮು ಯಳಮೇಲಿ, ರಾಜು ಮುಜಗೊಂಡ, ಕಲ್ಯಾಣಿ ಬಿರಾದಾರ, ಪ್ರಕಾಶ ಪಾಟೀಲ ಶಿವಪೂರ, ರಮೇಶ ಬಿರಾದಾರ, ಮಲ್ಲು ಬಿರಾದಾರ ನಾವದಗಿ, ಪಂಡಿತ ಯಂಪುರೆ, ಹರ್ಷವರ್ಧನ ಪೂಜಾರಿ, ಕಾಂತೂ ಯಳಮೇಲಿ ಸೇರಿದಂತೆ ಅನೇಕ ಸಮಾಜದ ಮುಖಂಡರಿದ್ದರು.

