ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.
ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಶನಿವಾರ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು. ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೬೩೧ ಬಾಕಿ ಇರುವ ಪ್ರಕರಣಗಳಲ್ಲಿ ೨೫೮೩ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು ೨೦೨೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಒಟ್ಟು ಸೇರಿ.೧೯೪೪ ಪ್ರಕರಣಗಳಲ್ಲಿ ೫೮೮ ಪ್ರಕರಣಗಳು ರಾಜಿ ಸಂಧಾನದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹಾಗೂ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ಎಮ್.ಎ.ಲಿಂಗಸೂರ ಹಾಗೂ ಯಮನಪ್ಪ ವಕೀಲರುಗಳು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಉಪಾಧ್ಯಕ್ಷ ಎಚ್.ಜಿ.ನಾಗೋಡ, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಶಿರಸ್ತೇದಾರರುಗಳಾದ ಎಮ್.ಎಫ್.ಜೇವರಗಿ, ಸುರೇಶ ಬಳಗಾನೂರ, ಪ್ರ.ದ.ಸ ಎ.ಎಸ್.ಮುಜಾವರ, ಸಿಬ್ಬಂದಿಗಳಾದ ಪುನೀತ, ಆರ್.ಎಸ್.ಕಮ್ಮಾರ್, ಬಸವರಾಜ ಬೂದಿಹಾಳ, ನರ್ಮದಾ ಮರೋಳ, ಗೀತಾ ರಾಂಪೂರ, ರೇಣುಕಾ ಜಾನಮಟ್ಟಿ, ಜ್ಯೋತಿ ಹೆಬ್ಬಾಳ, ಮಹಾಂತೇಶ ಹಚ್ಚರೆಡ್ಡಿ, ಮಂಜುಳಾ ಹೊಸಮನಿ, ಎನ್.ಬಿ.ಮದಿಹಳ್ಳಿ, ಇಸಾಕ್ ಒಂಟಿ, ಹಿರಿಯ ನ್ಯಾಯವಾದಿಗಳಾದ ವಿ. ಎಮ್. ನಾಗಠಾಣ, ಜೆ.ಎ.ಚಿನಿವಾರ, ಎಂ.ಎ.ಮುದ್ದೇಬಿಹಾಳ, ಎಸ್.ಆರ್.ಸಜ್ಜನ ನ್ಯಾಯವಾದಿಗಳಾದ ಎನ್.ಜಿ.ಕುಲಕರ್ಣಿ, ಎಮ್.ಆರ್.ಪಾಟೀಲ, ಚೇತನ ಶಿವಶಿಂಪಿ, ಎಸ್.ಆರ್.ಜೋಗಿ, ಬಿ.ಎಂ.ಮುಂದಿನಮನಿ, ಆಯ್. ಎಸ್.ಹಗಟಗಿ, ಎಸ್.ಎಂ.ಕಿಣಗಿ, ಎಲ್.ಎಸ್.ಮೇಟಿ, ಶ್ರೀದೇವಿ ರಾಜೂರ, ಸಾಬಣ್ಣ ಚಳ್ಳಗಿ, ಎಚ್.ಟಿ.ಪೂಜಾರಿ, ಆರ್.ಎಂ.ಢವಳಗಿ, ಎಸ್.ಸಿ.ಹಿರೇಮಠ, ಎಸ್.ಇ.ಹಿರೇಮಠ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
“ನಮ್ಮ ಮಕ್ಕಳ ಜನನ ದಾಖಲಾತಿ ಪ್ರಮಾಣ ಪತ್ರ ಇಲ್ಲದೇ ಸಾಕಷ್ಟು ಸಮಸ್ಯೆಯಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದಾಗ ಲೋಕ್‌ಅದಾಲತ್ ನಿಂದ ಹದಿನೈದೇ ದಿನಗಳಲ್ಲಿ ನಮಗೆ ಜನನ ಪ್ರಮಾಣ ಪತ್ರ ಸಿಗುವಂತಾಗಿದೆ. ಇದರಿಂದ ನಮ್ಮ ಸಮಯ ದುಡ್ಡು ಎರಡೂ ಉಳಿದಿದೆ. ಲೋಕ್‌ಅದಾಲತ್ ಸಾಕಷ್ಟು ಸಹಾಯಕಾರಿಯಾಗಿದೆ.”
– ಯಲಗೂರೇಶ ಬಿರಾದಾರ ಪಕ್ಷಗಾರರು

