ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿಯಲ್ಲಿ ಮೂರು ಶ್ರೀಗಂಧ ಮರವನ್ನು ಕತ್ತರಿಸಿದ ಘಟನೆ ಭಾನುವಾರ ಜರುಗಿದೆ.
ಭಾನುವಾರ ನಸುಕಿನ ಜಾವ ಇಲ್ಲಿಯ ರಾಕ್ ಉದ್ಯಾನದಲ್ಲಿ ಎರಡು ಹಾಗೂ ತೋಟಗಾರಿಕೆಯ ನರ್ಸರಿಯಲ್ಲಿ ಒಂದು ಸೇರಿ ಮೂರು ಗಿಡಗಳನ್ನು ಕಳ್ಳರು ಕತ್ತರಿಸಿದ್ದಾರೆ. ಆದರೆ ಅವುಗಳನ್ನು ಒಯ್ಯಲು ಸಾಧ್ಯವಾಗದೇ ಅಲ್ಲಿಯೆ ಬಿಟ್ಟು ಹೋಗಿದ್ದಾರೆ.
ಕರ್ನಾಟಕವನ್ನು ಗಂಧದ ನಾಡು ಚೆಂದದ ಬೀಡು ಎಂದೆಲ್ಲಾ ಕವಿಗಳು ವರ್ಣಿಸಿದ್ದಾರೆ. ಆದರೆ ಈ ಗಂಧದ ಬೀಡಿನಲ್ಲಿ ಶ್ರೀಗಂಧದ ಮರಗಳಿಗೆ ರಕ್ಷಣೆ ಇಲ್ಲದಾಗಿದೆ.
ಇಲ್ಲಿನ ಆಲಮಟ್ಟಿ ರಾಕ್ ಉದ್ಯಾನ ವನದಲ್ಲಿ ಇರುವ ಮಂಗ ವಲಯ ಪಾರ್ಕ್ನಲ್ಲಿ ನಿನ್ನೆಯ ದಿನ ರಾತ್ರಿ ಸುಮಾರು ೪ ಗಂಟೆಗೆ ಶ್ರೀಗಂಧ ಕಳ್ಳರು ಎರಡು ಶ್ರೀಗಂಧ ಮರವನ್ನು ಕತ್ತರಿಸಿ ಸಾಗಿಸುವ ಸಮಯದಲ್ಲಿ ರಾತ್ರಿ ಕಾವುಲುಗಾರ ಕಣ್ಣಿಗೆ ಬಿದ್ದುದರಿಂದ ಪರಾರಿ ಆಗಿ ಓಡಿ ಹೋಗಿರುವ ಘಟನೆ ಆಲಮಟ್ಟಿ ರಾಕ್ ಉದ್ಯಾನವನದ ಮಂಗ ವಲಯ ಪಾರ್ಕ್ನಲ್ಲಿ ನಡೆದಿದೆ.
ರಾತ್ರಿ ಕಾವುಲುಗಾರರು ಅಧಿಕಾರಿಗಳಿಗೆ ಪೋನ್ ಮಾಡಿ ತಿಳಿಸಿದಾಗ ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಉದ್ಯಾನವನದ ಪಕ್ಕದಲ್ಲಿ ಪಾರೀಸ್ಟ್ ಏರಿಯಾದಲ್ಲಿ ಕೇಳ್ಳರನ್ನು ಹುಡುಕಲು ಡ್ರೋಣ್ ಮೂಲಕ ಕಾರ್ಯಾಚರಣೆ ಮಾಡಿದ್ದರು. ಶ್ರೀಗಂಧ ಕಳ್ಳರು ಅಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ.
ಆಲಮಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ ರೆಗ್ಯುಲರ್ ಅವರು ಬಂದು ನೋಡಿ ಕೊಂಡು ಹೋಗಿ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ್ ಅವರು ತಿಳಿಸಿದರು.
ರಾಕ್ ಉದ್ಯಾನವನವು ೩೫ ಎಕರೆ ಪ್ರದೇಶ್ ಹೊಂದಿದ್ದು ಈ ಉದ್ಯಾನವನದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶ್ರೀಗಂಧದ ಮರಗಳು ಇರುವುದರಿಂದ ಅವುಗಳನ್ನು ರಕ್ಷಣೆ ಮಾಡುವಂತ ಕಾರ್ಯಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಬೇಕು.
ತೋಟಗಾರಿಕೆಯಲ್ಲೂ ಶ್ರೀಗಂಧ ಮರ ಕಡಿತ
ಆಲಮಟ್ಟಿ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಇರುವ ತೋಟಗಾರಿಕೆಯಲ್ಲಿ ಒಂದು ಶ್ರೀಗಂಧ ಮರವನ್ನು ಕತ್ತರಿಸಿ ತುಂಡು ತುಂಡಾಗಿ ಕತ್ತರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ .
ಈ ಬಗ್ಗೆ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

