ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಒಳ ಮಿಸಲಾತಿ ವರ್ಗೀಕರಣದ ಕುರಿತು ನ್ಯಾ.ಎ.ಜೆ. ಸದಾಶಿವ ವರದಿಯ ವಿಷಯವಾಗಿ ಅಧಿವೇಶನದಲ್ಲಿ ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಧ್ವನಿ ಎತ್ತಬೇಕೆಂದು ಶಾಸಕ ಅಶೋಕ ಮನಗೂಳಿ ಅವರಿಗೆ ಮಾದಿಗ ಸಮುದಾಯದ ಮುಖಂಡರು ಜೊತೆ ಗೂಡಿ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಮಾದಿಗರ ಸಂಘ(ರಿ) ತಾಲೂಕ ಶಾಖೆ ಸಿಂದಗಿ ತಾಲೂಕಾಧ್ಯಕ್ಷ ಯಲ್ಲು ಇಂಗಳಗಿ ಪತ್ರಿಕಾ ಹೇಳಿಕೆ ಹೇಳಿದರು.
ಇದೇ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡ ಸಾಯಬಣ್ಣ ಪುರದಾಳ ಮಾತನಾಡಿ, ಸತತ ಮೂರು ದಶಕಗಳಿಂದ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದ್ದು. ಪ್ರಸ್ತುತ ಸುಪ್ರೀಂಕೋರ್ಟ್ ಒಳ ಮೀಸಲಾತಿ ನೀಡಬೇಕೆಂದು ಆಗಸ್ಟ್ ೧,೨೦೨೪ ರಂದು ತೀರ್ಪು ನೀಡಿದೆ. ಆದರೆ ರಾಜ್ಯ ಸರಕಾರ ಒಳಮೀಸಲಾತಿ ಜಾರಿಗೊಳಿಸಲು ನ್ಯಾ.ಎಚ್.ಎನ್. ನಾಗಮೋಹನದಾಸ ಅವರ ಏಕ ಸದಸ್ಯ ಪೀಠ ರಚಿಸಿದ್ದು ಬಿಟ್ಟರೆ ಏನನ್ನು ಮಾಡಿಲ್ಲ. ಪೀಠ ರಚನೆ ಮಾಡಿ ಸುಮಾರು ೪೫ ದಿನಗಳ ಕಳೆದರು ಆಯೋಗ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶರಣಪ್ಪ ಬೂದಿಹಾಳ, ಪ್ರಧಾನಿ ಮೂಲಿಮನಿ, ನಾಗು ಕಟ್ಟಿಮನಿ, ಖಾಜು ಬಂಕಲಗಿ, ಸಿದ್ದು ಪೂಜಾರಿ, ಹಣಮಂತ ವರ್ಕಾನಳ್ಳಿ, ಜಟ್ಟು ಶಿರಸಗಿ, ರವಿ ಕಲಹಳ್ಳಿ, ಸಿದ್ದು ಯಂಕಂಚಿ, ಸುರೇಶ ಕಟ್ಟಿಮನಿ, ಜೆ.ವಾಯ್.ಹೊಸಮನಿ, ಪರಸು ಗೊರಗುಂಡಗಿ, ಭೀಮಾಶಂಕರ ರತ್ನಾಕರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

