Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಡಿ.೨೨ ರಂದು ಬೆಳಿಗ್ಗೆ ೬ ಗಂಟೆಗೆ ವೃಕ್ಷೋತ್ಥಾನ ಪಾರಂಪರಿಕ ಓಟ-೨೦೨೪ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ನಡೆಯುವ ಕಾರ್ಯಕ್ರಮಕ್ಕೆ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಓಟಕ್ಕೆ ಚಾಲನೆ ಹಾಗೂ ಹಸಿರು ನಿಶಾನೆ ತೋರುವರು.ರವಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗುವ ವೃಕ್ಷಥಾನ್ ಸಮಾರಂಭವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ (ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸೇರಿದಂತೆ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಶೀಘ್ರದಲ್ಲಿ ವೈದ್ಯಕೀಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ಜಗತ್ತಿನ ಹಬ್ ಆಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಅವರು ಭಾಷಣ ಮಾಡಿದರು.ಭಾರತದಲ್ಲಿ ಹೇರಳವಾದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲವಿದೆ. ಪ್ರಾಚೀನ ಭಾರತದ ಆರ್ಯಭಟರಿಂದ ಹಿಡಿದು ಶಲ್ಯರ ವರೆಗೆ ಮತ್ತು ಇಂದಿನ ಯುವ ವೃತ್ತಿಪರ, ಪ್ರಾಮಾಣಿಕ ಮತ್ತು ಕೌಶಲ್ಯಯುತ ಯುವಕರು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತಿರುವ ಪರಿಣಾಮ ಇಲ್ಲಿಗೆ ಹೂಡಿಕೆ ಮಾಡಲು ವಿದೇಶಿಗರೂ ಉಳಿದ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಭಾರತ ಈಗ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಜಗತ್ತಿಗೆ ನಾನಾ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಹೊರವಲಯದ ಇಬ್ರಾಹಿಂಪುರ ಪೇಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವವು ಇದೇ ದಿ. ೨೩ ರಿಂದ ೨೫ ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.ಜಾತ್ರೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ನಂದಬಸವೇಶ್ವರ ದೇವಸ್ಥಾನ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.ಅಲಂಕೃತ ನಂದಿಕೋಲ ಮೆರವಣಿಗೆ ಈ ಜಾತ್ರೆಯ ಒಂದು ಪ್ರಮುಖ ಆಕರ್ಷಣೆ. ಜಾತ್ರೆ ಎಂದಮೇಲೆ ನಾಟಕ ಪ್ರದರ್ಶನವಿದ್ದದ್ದೇ. ಸ್ಥಳೀಯ ಯುವಕರೇ ನಾಟಕ ಕಲಿತು ಈ ಜಾತ್ರೆಯಲ್ಲಿ ಅಭಿನಯಿಸಲಿದ್ದಾರೆ.ಜಾತ್ರೆಯ ಮೊದಲ ದಿನವೇಅಂದರೆ ದಿ. ೨೩ ರಂದು ರಾತ್ರಿ ೧೦.೩೦ಕ್ಕೆ ಸ್ಥಳೀಯ ಯುವ ಕಲಾವಿದರನ್ನೊಳಗೊಂಡ ಶ್ರೀ ನಂದಬಸವೇಶ್ವರ ನಾಟ್ಯ ಸಂಘದಿಂದ “ಹುಚ್ಚ ಹಚ್ಚಿದ ಕಿಚ್ಚು” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.ದಿ.೨೪ ರಂದು ಬೆಳಿಗ್ಗೆ ೬ಕ್ಕೆ ಅಭಿಷೇಕ, ೯ಕ್ಕೆ ನಂದಿಕೋಲ ಮೆರವಣಿಗೆ ನಡೆಯುವುದು. ಶ್ರೀ ನಂದಬಸವೇಶ್ವರ ದೇವಸ್ಥಾನದಿಂದ ಹೊರಡುವ ನಂದಿಕೋಲ ಮೆರವಣಿಗೆ ಗ್ರಾಮದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ…
ಉತ್ಸವ ಉದ್ಘಾಟಿಸಲಿರುವ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದ ಗ್ರಾಮದೇವಿ ಜಾತ್ರೆ ನಿಮಿತ್ಯ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಪಡಗಾನೂರ ಹಾಗೂ ಜಾತ್ರಾ ಸಮಿತಿ ಸಹಯೋಗದಲ್ಲಿ ದಿನಾಂಕ 22.12.2024 ರವಿವಾರ ಮಧ್ಯಾಹ್ನ 12 ಗಂಟೆಗೆ ಗ್ರಾಮದೇವಿ ದೇವಸ್ಥಾನ ಆವರಣದಲ್ಲಿ “ಜಿಲ್ಲಾ ಮಟ್ಟದ ಜಾನಪದ ಉತ್ಸವ” ನಡೆಯಲಿದೆ.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸುವರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಸಾಹಿತಿ ದೊಡ್ಡಣ್ಣ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡುವರು. ಕೆ ಎಚ್ ಪಾಟೀಲ (ಮೂಕಿಹಾಳ) ಕಜಾಪ ನಿಡಗುಂದಿ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ, ಬಸವನ ಬಾಗೇವಾಡಿ ಶಿಕ್ಷಣ ಸಂಯೋಜಕ ಎಸ್ ಎಸ್ ಅಂಬಲಿ, ಶಿಕ್ಷಕ ಶಿವಾನಂದ ಮಳ್ಳಿ, ಕಜಾಪ ತಾಳಿಕೋಟೆ ತಾಲೂಕಾಧ್ಯಕ್ಷ ಸಿದ್ದನಗೌಡ ಕಾಸಿನಕುಂಟಿ ಆತಿಥಿಗಳಾಗಿ ಆಗಮಿಸುವರು.ವಿವಿಧ ಕ್ಷೇತ್ರಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಗ್ರಾಮೀಣವಲಯದ ವತಿಯಿಂದ ಶ್ರೀ ಶಾಂತವೀರ ಪ್ರೌಢಶಾಲೆ ಬಬಲೇಶ್ವರದಲ್ಲಿ ಶನಿವಾರ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆಗೆ ವಿಧ್ಯಾರ್ಥಿಗಳಿಗೆ ವಿನೂತನ ಟಾರ್ಗೆಟ್ 625 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 10 ಪ್ರೌಢಶಾಲೆಯ ವಿದ್ಯಾರ್ಥಿಗಳುಗಗನಮತ್ತು ಶಿಕ್ಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬೋಳಲಮಟ್ಟಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರ ರ್ಯಾಂಕಗಳು ಬರುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಈ ಬಾರಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ನಮ್ಮ ತಾಲೂಕಿನಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯಬೇಕೆಂದು ತಿಳಿಸಿದರು.ಈ ಟಾರ್ಗೆಟ್ 625 ಎನ್ನುವ ಕಾರ್ಯಕ್ರಮ ನನ್ನ ಕನಸಿನ ಕೂಸಲ್ಲ ಇದು ಸಚಿವರಾದ ಎಂ. ಬಿ. ಪಾಟೀಲ್ ಅವರದ್ದು ಎಂದು ತಿಳಿಸಿದರು. ಇದೇ ರೀತಿಯಾಗಿ ತಾಲೂಕಿನಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಶನಿವಾರ ಮಾಡಲಾಗುವುದು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಶಾಂತೇಶ್ವರ ಪ್ರೌಢಶಾಲೆ ಉಪ ಪ್ರಾಂಶುಪಾಲ ಸಿದ್ದನಗೌಡ ಬಿರಾದಾರ, ಸಂಪನ್ಮೂಲ…
ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಕ್ಲಸ್ಟರ್ ನ ನೂತನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣು ಚಟ್ಟಿ ಅವರನ್ನು ಕ್ಲಸ್ಟರಿನ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು. ಮಾಜಿ CRP ಆರ್.ಎಸ್.ಬಿರಾದಾರರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಮುರಿಗೆಪ್ಪಗೌಡ ರದ್ದೇವಾಡಗಿ, ನಾಗಯ್ಯ ಹಿರೇಮಠ, ಪ್ರಕಾಶಗೌಡ ಬಿರಾದಾರ, ಮಲ್ಲಿಕಾರ್ಜುನ ಹತ್ತರಕಿ, ಕುತ್ಬುದ್ದಿನ್ ಕೋರಬು, ದಾವಲಸಾಬ್ ಬನ್ನೆಟ್ಟಿ, ಶಿಕ್ಷಕಿ ಎಂ.ಎಸ್.ಚೌಧರಿ, ಅತಿಥಿ ಶಿಕ್ಷಕರಾದ ರವಿ ಪಾಟೀಲ, ರಾಜಶೇಖರ್ ಕರ್ನಾಳ, ಬಸವರಾಜ ನಿಗಡಿ, ದೇವಿಂದ್ರ ದೊಡಮನಿ, ಅನಿತಾ ಕಾರನೂರ, ಅನುಸೂಯಾ ನಾಗಣಸೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿ. 21: 2026 ರೊಳಗೆ ಶಿಶುಮರಣ ಪ್ರಮಾಣವನ್ನು ಶೇ.5ಕ್ಕೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರ ವಿಭಾಗ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಅವರು ಮಾತನಾಡಿದರು.ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಆರೋಗ್ಯ ರಕ್ಷಣೆ ಪ್ರಮುಖವಾಗಿದೆ. ಅದಕ್ಕಾಗಿ ಸರಕಾರ ಮತ್ತು ಆಸ್ಪತ್ರೆಗಳು ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ಗ್ರಾಮೀಣ ಭಾಗದಲ್ಲಿ ಮತ್ತು ಮನೆಗಳಲ್ಲಿ ಹೆರಿಗೆಯಾದ ಸಂದರ್ಭದಲ್ಲಿ ನವಜಾತ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಆ್ಯಂಬೂಲನ್ಸ್ ಮುಖಾಂತರ ಅವುಗಳನ್ನು ಸೂಕ್ತ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ 2026 ರೊಳಗೆ ಶಿಶುಮರಣದ ಪ್ರಮಾಣವನ್ನು 5ಕ್ಕೆ ಇಳಿಸಲು ಎಲ್ಲರೂ ಕೈಜೊಡಿಸಬೇಕಾಗಿದೆ.…
ಕವನ- ಶಾಂತಿ ಕಾರಂತ್ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು ಹೊರಟಿಹುದು ಮಿಂಚಿನುತ್ಸವ ಬಾನೂರಲಿಹಸಿರುಡುಗೆಯಲಿ ಇಳೆ ಸಿಂಗರಿಸಿಕೊಂಡಂತಿತ್ತು,ನಾಚಿಕೆಯ ಕೆಂಪು ಛಾಯೆಯ ಹೊಳಪು ಕೆನ್ನೆಯಲಿ.ಮಳೆಬಿಲ್ಲು ಭೂರಮೆಯ ಶಿರವ ಅಲಂಕರಿಸಿತ್ತು. ನಲ್ಲೆಯು ಬಸವಳಿದು ಕಾದಿಹಳು ವಿರಹದಲಿಮನದ ಬಳ್ಳಿಯಲಿ ಪ್ರೀತಿಯ ಹೂ ಅರಳಿತ್ತುಇನಿಯನಾಗಮನಕೆ ಅವನಿ ತವಕಿಸಿಹಳಿಲ್ಲಿ,ಪ್ರೇಮರಾಗ ಒಲಿದ ಹೃದಯಗಳ ಹಾಡಾಯಿತು.
ಲೇಖನ- ರೇಷ್ಮಾ ಮಲೆನಾಡ್ ಉದಯರಶ್ಮಿ ದಿನಪತ್ರಿಕೆ “ಪರೋಪಕಾರಾರ್ಥಮಿದಂ ಶರೀರಂ” ಅಂದರೆ “ಈ ಮನುಷ್ಯ ದೇಹ ಇರುವುದೇ ಪರರಿಗೆ ಉಪಕಾರ ಅಂದರೆ ಒಳಿತನ್ನು ಮಾಡಲು” ಎಂದಿದ್ದಾರೆ ನಮ್ಮ ಹಿರಿಯರು.“ವನ ಸುಮ” ಅಂದರೆ ಕಾಡಲ್ಲಿ ಬೆಳೆಯುವ ಸುವಾಸನಾಭರಿತ ಮಲ್ಲಿಗೆ ಹೂ ಬೆಳಿಗ್ಗೆ ಅರಳಿ ಎಲೆಮರೆಯಲ್ಲಿಯೇ ಇದ್ದೂ ಇತರರಿಗೆ ತನ್ನ ಪರಿಮಳವನ್ನು ಹಂಚಿ, ಸಂಜೆ ಬಾಡಿ ಉದುರಿ ಮಣ್ಣು ಸೇರಿ ಮಣ್ಣಾಗುತ್ತದೆ,, ಮಾನವ ಜನ್ಮ ನಶ್ವರ, ಯಾವಾಗ ಕಾಲನ ಕರೆ ಬರುತ್ತದೆಯೋ ಆಗ ಹೊರಟುಬಿಡಬೇಕು, ಅದು ನೂರು ವರ್ಷವಾದರೂ ಸರಿಯೇ ಇಂದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಹೋಗುವುದಾದರೂ ಸರಿಯೇ ನಮ್ಮ ಕೈಲಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ, ಇತರರಿಗೆ ಒಳಿತನ್ನು ಮಾಡಿಯೇ ಸಾಯಬೇಕು.“ಯಾಕೆ ಒಳಿತು ಮಾಡಬೇಕು?” “ಯಾರಿಗೆ ಒಳಿತನ್ನು ಮಾಡಬೇಕು?,”ಎಷ್ಟು ಒಳಿತು ಮಾಡಬೇಕು? ““ಹೇಗೆ ಒಳಿತುಮಾಡಬೇಕು?” “ಒಳಿತಾವುದು ಕೆಡುಕಾವುದು?” “ನನ್ನಲ್ಲಿ ದುಡ್ಡಿಲ್ಲ, ನಾನೇ ಕಷ್ಟ ಪಡುತ್ತಿರುವೆ, ಬೇರೆಯವರಿಗೆ ನಾನೇನು ಒಳಿತು ಮಾಡಲಿ?” ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ.೧) ನೊಂದವರಿಗೆ ನೆರವಾಗುವುದು, ಸಾಂತ್ವನ ನೀಡುವುದು, ಸಮಾಜಕ್ಕೆ, ಬಂಧುಬಾಂಧವರಿಗೆ ಸ್ನೇಹಿತರಿಗೆ, ದೇಶಕ್ಕೆ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಚಿಂಚೊಳ್ಳಿಯ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದ ಸರ್ವೋಚ್ಛ ನ್ಯಾಯಾಲಯದ ಆದೇಶ ಸ್ವಾಗತಾರ್ಹ. ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಈ ಪ್ರಕರಣದ ಆದೇಶ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಈ ಕುರಿತು ಉದಯರಶ್ಮಿಯೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಿ ಸುಖಾ ಸುಮ್ಮನೆ ಸಾವಿರಾರು ರೈತರಿಗೆ, ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರು. ಸದ್ಯ ಪ್ರಕರಣದ ವಿಚಾರಣೆ ಮುಗಿದು ಆದೇಶವಾಗಿದ್ದು ಆದೇಶದಲ್ಲಿ ೭ ದಿನಗಳಲ್ಲಿ ಕಬ್ಬು ನುರಿಸಲು ಅನುಮತಿ ನೀಡುವಂತೆ ತಿಳಿಸಿದೆ. ಈ ಆದೇಶದಿಂದ ಸಾಕಷ್ಟು ಕಾರ್ಮಿಕರಿಗೆ, ರೈತರಿಗೆ ಅನುಕೂಲವಾಗಿದೆ ಎಂದರು.
