ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಗ್ರಾಮೀಣವಲಯದ ವತಿಯಿಂದ ಶ್ರೀ ಶಾಂತವೀರ ಪ್ರೌಢಶಾಲೆ ಬಬಲೇಶ್ವರದಲ್ಲಿ ಶನಿವಾರ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆಗೆ ವಿಧ್ಯಾರ್ಥಿಗಳಿಗೆ ವಿನೂತನ ಟಾರ್ಗೆಟ್ 625 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 10 ಪ್ರೌಢಶಾಲೆಯ ವಿದ್ಯಾರ್ಥಿಗಳುಗಗನಮತ್ತು ಶಿಕ್ಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬೋಳಲಮಟ್ಟಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರ ರ್ಯಾಂಕಗಳು ಬರುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಈ ಬಾರಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ನಮ್ಮ ತಾಲೂಕಿನಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯಬೇಕೆಂದು ತಿಳಿಸಿದರು.
ಈ ಟಾರ್ಗೆಟ್ 625 ಎನ್ನುವ ಕಾರ್ಯಕ್ರಮ ನನ್ನ ಕನಸಿನ ಕೂಸಲ್ಲ ಇದು ಸಚಿವರಾದ ಎಂ. ಬಿ. ಪಾಟೀಲ್ ಅವರದ್ದು ಎಂದು ತಿಳಿಸಿದರು. ಇದೇ ರೀತಿಯಾಗಿ ತಾಲೂಕಿನಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಶನಿವಾರ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಂತೇಶ್ವರ ಪ್ರೌಢಶಾಲೆ ಉಪ ಪ್ರಾಂಶುಪಾಲ ಸಿದ್ದನಗೌಡ ಬಿರಾದಾರ, ಸಂಪನ್ಮೂಲ ವ್ಯಕ್ತಿ ಎ.ಎಚ್.ಮದಬಾವಿ, ಪರೀಕ್ಷೆ ನೋಡಲ್ ವಸಂತ ರಾಠೋಡ, ಶಿಕ್ಷಣ ಸಂಯೋಜಕ ಪ್ರಭು ಬಿರಾದಾರ ಉಪಸ್ಥಿತರಿದ್ದರು.