ಉದಯರಶ್ಮಿ ದಿನಪತ್ರಿಕೆ
ಗೋಲಗೇರಿ: ಕ್ಲಸ್ಟರ್ ನ ನೂತನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣು ಚಟ್ಟಿ ಅವರನ್ನು ಕ್ಲಸ್ಟರಿನ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು. ಮಾಜಿ CRP ಆರ್.ಎಸ್.ಬಿರಾದಾರರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಮುರಿಗೆಪ್ಪಗೌಡ ರದ್ದೇವಾಡಗಿ, ನಾಗಯ್ಯ ಹಿರೇಮಠ, ಪ್ರಕಾಶಗೌಡ ಬಿರಾದಾರ, ಮಲ್ಲಿಕಾರ್ಜುನ ಹತ್ತರಕಿ, ಕುತ್ಬುದ್ದಿನ್ ಕೋರಬು, ದಾವಲಸಾಬ್ ಬನ್ನೆಟ್ಟಿ, ಶಿಕ್ಷಕಿ ಎಂ.ಎಸ್.ಚೌಧರಿ, ಅತಿಥಿ ಶಿಕ್ಷಕರಾದ ರವಿ ಪಾಟೀಲ, ರಾಜಶೇಖರ್ ಕರ್ನಾಳ, ಬಸವರಾಜ ನಿಗಡಿ, ದೇವಿಂದ್ರ ದೊಡಮನಿ, ಅನಿತಾ ಕಾರನೂರ, ಅನುಸೂಯಾ ನಾಗಣಸೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.