ಉತ್ಸವ ಉದ್ಘಾಟಿಸಲಿರುವ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದ ಗ್ರಾಮದೇವಿ ಜಾತ್ರೆ ನಿಮಿತ್ಯ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಪಡಗಾನೂರ ಹಾಗೂ ಜಾತ್ರಾ ಸಮಿತಿ ಸಹಯೋಗದಲ್ಲಿ ದಿನಾಂಕ 22.12.2024 ರವಿವಾರ ಮಧ್ಯಾಹ್ನ 12 ಗಂಟೆಗೆ ಗ್ರಾಮದೇವಿ ದೇವಸ್ಥಾನ ಆವರಣದಲ್ಲಿ “ಜಿಲ್ಲಾ ಮಟ್ಟದ ಜಾನಪದ ಉತ್ಸವ” ನಡೆಯಲಿದೆ.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸುವರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಸಾಹಿತಿ ದೊಡ್ಡಣ್ಣ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡುವರು. ಕೆ ಎಚ್ ಪಾಟೀಲ (ಮೂಕಿಹಾಳ) ಕಜಾಪ ನಿಡಗುಂದಿ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ, ಬಸವನ ಬಾಗೇವಾಡಿ ಶಿಕ್ಷಣ ಸಂಯೋಜಕ ಎಸ್ ಎಸ್ ಅಂಬಲಿ, ಶಿಕ್ಷಕ ಶಿವಾನಂದ ಮಳ್ಳಿ, ಕಜಾಪ ತಾಳಿಕೋಟೆ ತಾಲೂಕಾಧ್ಯಕ್ಷ ಸಿದ್ದನಗೌಡ ಕಾಸಿನಕುಂಟಿ ಆತಿಥಿಗಳಾಗಿ ಆಗಮಿಸುವರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಸವರಾಜ ಹಾರಿವಾಳ, ಸಿದ್ಧರಾಮ ಬಿರಾದಾರ, ಎ ಆರ್ ಮುಲ್ಲಾ, ಗಂಗಾಧರ ಬಡಿಗೇರ, ಸಿದ್ದಮ್ಮ ಆಲಗೊಂಡ, ಗುರುರಾಜ ಹಳ್ಳೂರ ಮತ್ತು ಜಿ ಟಿ ಘೋರ್ಪಡೆ ಇವರನ್ನು ಸನ್ಮಾನಿಸಲಾಗುವುದು.
ನಂತರ ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ಜನಪದ , ಹಂತಿ , ಚೌಡಕಿ, ಸಂಪ್ರದಾಯ, ಡೊಳ್ಳು ಕುಣಿತ , ಹೆಜ್ಜೆ ಕುಣಿತ, ಜೋಗತಿ ನೃತ್ಯ, ಕೋಲಾಟ, ಗೊರವರ ಕುಣಿತ, ಗೀಗೀ ಪದ, ಭಜನೆ ಇತರೆ ಕಲಾ ತಂಡಗಳಿಂದ ಪ್ರದರ್ಶನ ನಡೆಯುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ವೀರೇಶಗೌಡ ಪಾಟೀಲ (ಮಿಣಜಿಗಿ) ತಿಳಿಸಿದ್ದಾರೆ.